Advertisement

ಕುಂದಾಪುರದೆಲ್ಲೆಡೆ ಕಾಂಗ್ರೆಸ್‌ ಅಲೆ; ಸಾಸ್ತಾನದಿಂದ ಬೈಕ್‌ Rally, ನಗರದಲ್ಲಿ ಪಾದಯಾತ್ರೆ

05:01 PM May 09, 2023 | Team Udayavani |

ಕುಂದಾಪುರ: ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಹೆಗ್ಡೆ ಮೊಳಹಳ್ಳಿ ಪರವಾಗಿ ಸೋಮವಾರ ಬೈಕ್‌ Rally, ಪಾದಯಾತ್ರೆ ನಡೆಯಿತು. ಸಾವಿರಾರು ದ್ವಿಚಕ್ರ ವಾಹನಗಳು, ಸಾವಿರಾರು ಮಂದಿ ಪಾಲ್ಗೊಂಡರು.

Advertisement

ಬಿಜೆಪಿಗೆ ನಡುಕ
ಅಭ್ಯರ್ಥಿ ದಿನೇಶ್‌ ಹೆಗ್ಡೆ ಮೊಳಹಳ್ಳಿ ಮಾತನಾಡಿ, ಕಾಂಗ್ರೆಸ್‌ ಪಕ್ಷದ ಸರಕಾರ ನೀಡಲಿರುವ ಗ್ಯಾರಂಟಿಗಳನ್ನು ಜನ ನಂಬಿದ್ದಾರೆ. ಈ ಭರವಸೆಯ ಮೇಲೆ ಕಾಂಗ್ರೆಸ್‌ಗೆ ಮತ ನೀಡಲಿದ್ದಾರೆ. ಬಿಜೆಪಿಯನ್ನು ಜನ ನಿರಾಕರಿಸಿದ್ದು , ಅಪಪ್ರಚಾರಕ್ಕೆ ಸೋಲಿನ ಜವಾಬು ನೀಡಲಿದ್ದಾರೆ. ಇದು ಬಿಜೆಪಿಗೆ ನಡುಕ ಉಂಟು ಮಾಡಿದೆ. ಕ್ಷೇತ್ರಾದ್ಯಂತ ಕಾಂಗ್ರೆಸ್‌ ಅಲೆ ಇದೆ ಎಂದರು.

ಸಂಚಲನ
ಇಂದು ಇಲ್ಲಿ ಸೇರಿದ 5 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ದ್ವಿಚಕ್ರವಾಹನಗಳ Rally ಸಾಸ್ತಾನದಿಂದ ಕುಂದಾಪುರವರೆಗೆ ಹೊಸ ಸಂಚಲನ ಉಂಟು ಮಾಡಿದೆ. ಸಾವಿರಾರು ಮಂದಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದಾರೆ. ಜಾತಿ, ಮತ, ಧರ್ಮದ ಭೇದ ಮರೆತು ಕಾಂಗ್ರೆಸ್‌ನ್ನು ಬೆಂಬಲಿಸುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಮಹಿಳೆಯರು, ಹಿರಿಯರು ಕಾಂಗ್ರೆಸ್‌ ಸರಕಾರ ಅಸ್ತಿತ್ವಕ್ಕೆ ಬರಲಿ ಎನ್ನುತ್ತಿದ್ದಾರೆ. ಹಿಂದುತ್ವದ ಯುವಕರು ಸಾಲು ಸಾಲಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ, ಕೋಟ ಬ್ಲಾಕ್‌ ಅಧ್ಯಕ್ಷ ಶಂಕರ ಎ.ಕುಂದರ್‌, ಮುಖಂಡರಾದ ಬೆಳ್ವೆ ಸತೀಶ್‌ ಕಿಣಿ, ಅಶೋಕ್‌ ಪೂಜಾರಿ ಬೀಜಾಡಿ, ಕೆದೂರು ಸದಾನಂದ ಶೆಟ್ಟಿ, ವಿಕಾಸ್‌ ಹೆಗ್ಡೆ, ಯುವ ಕಾಂಗ್ರೆಸ್‌ನ ಇಚ್ಛಿತಾರ್ಥ ಶೆಟ್ಟಿ, ಸುನಿಲ್‌ ಮಡಿವಾಳ, ಮಹಿಳಾ ಕಾಂಗ್ರೆಸ್‌ನ ದೇವಕಿ ಸಣ್ಣಯ್ಯ ಮೊದಲಾದವರಿದ್ದರು.

ಕೇಸರಿ ಶಾಲು, ಬಜರಂಗಿ ಧ್ವಜ
ಬಜರಂಗದಳ ನಿಷೇಧದ ಕುರಿತು ಬಿಜೆಪಿ ಹೇಳುತ್ತಿದ್ದಂತೆಯೇ ಕಾಂಗ್ರೆಸ್‌ ರ್ಯಾಲಿ, ಪಾದಯಾತ್ರೆಯಲ್ಲೂ ಕೇಸರಿ ಧ್ವಜ, ಕೇಸರಿ ಶಾಲಿನ ಅಬ್ಬರ ಕಂಡುಬಂತು. ನೂರಾರು ಮಂದಿ ಯುವಕರು ಕೇಸರಿ ಶಾಲು, ಕೇಸರಿ ಪೇಟ ಧರಿಸಿದ್ದು ಕೇಸರಿ ಧ್ವಜಗಳನ್ನು ಹಾರಿಸುತ್ತಾ, ಬಜರಂಗಿ ಧ್ವಜವನ್ನು ಬೀಸುತ್ತಾ ಮೆರವಣಿಗೆಯುದ್ದಕ್ಕೂ ಸಾಗಿದರು. ಈ ಮೂಲಕ ಹಿಂದುತ್ವ ಎಂದರೆ ಕಾಂಗ್ರೆಸ್‌ಗೆ ಭೇದ ಇಲ್ಲ, ಕಾಂಗ್ರೆಸ್‌ನಲ್ಲಿ ಇರುವವರು ಹಿಂದೂ ವಿರೋಧಿಗಳಲ್ಲ, ಕಾಂಗ್ರೆಸ್‌ ಹಿಂದುತ್ವದ ವಿರೋಧಿ ಅಲ್ಲ ಎಂಬ ಸಂದೇಶ ಸಾರಿದರು.

Advertisement

ಪ್ರತಾಪ್‌ ಚಂದ್ರ ಶೆಟ್ಟಿ ಚಾಲನೆ
ವಿಧಾನಪರಿಷತ್‌ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ಶಾಸಿŒ ಸರ್ಕಲ್‌ ಬಳಿ ಪಾದಯಾತ್ರೆಗೆ ಚಾಲನೆ ನೀಡಿ ಶುಭ ಹಾರೈಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next