Advertisement

ಕಾಂಗ್ರೆಸ್‌ ಭ್ರಷ್ಟಾಚಾರದ ಪರಂಪರೆ ಅನಾವರಣ

11:13 AM Oct 14, 2021 | Team Udayavani |

ಕಲಬುರಗಿ: ಕಾಂಗ್ರೆಸ್‌ ಪಕ್ಷದ ಭ್ರಷ್ಟಾಚಾರದ ಪರಂಪರೆ ಏನು ಎಂಬುದು ಈಗ ಅನಾವರಣವಾಗಿದೆ. ಭ್ರಷ್ಟಾ ಚಾರವೇ ಕಾಂಗ್ರೆಸ್‌ನ ಸಿದ್ಧಾಂತ ಎನ್ನುವುದು ಗೊತ್ತಾಗಿದೆ ಎಂದು ಪಕ್ಷದ ರಾಜ್ಯ ವಕ್ತಾರ ಹಾಗೂ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.

Advertisement

ಬುಧವಾರ ಬೆಂಗಳೂರಿನಲ್ಲಿ ಅವರದ್ದೇ ಪಕ್ಷದ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮುಖವಾಡ ಕಳಚಿ ಅವರನ್ನು ವಿಲನ್‌ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಗುಂಪುಗಾರಿಕೆ ಇರುವುದು ಇದರಿಂದ ಸ್ಪಷ್ಟವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಕೀಲ ಉಗ್ರಪ್ಪ ನಗೆಪಾಟಲಿಗೆ ಸಿಲುಕಿದ್ದು, ಅಪ್ಪಟ ಸುಳ್ಳುಗಾರ ಎಂಬುದು ಸಾಬೀತಾಗಿದೆ. ನಿನ್ನೆ ಉಗುಳಿದ್ದೆಲ್ಲವನ್ನು ಅವರು ವಾಪಸ್‌ ಪಡೆದಿದ್ದಾರೆ. ಉಗ್ರಪ್ಪ ಸಿದ್ದರಾಮಯ್ಯ ಮೌತ್‌ಪೀಸ್‌ ಆಗಿದ್ದಾರೆ. ಈ ನಾಟಕದ ಸೂತ್ರಧಾರಿ ಸಿದ್ದರಾಮಯ್ಯ ಎಂದರು.

ಇದನ್ನೂ ಓದಿ: ಹುಮನಾಬಾದ: ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಸಾವು

ಮುಖ್ಯವಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳುವುದೆಲ್ಲವೂ ಸುಳ್ಳು ಹಾಗೂ ಪಿಸುಮಾತಿನಲ್ಲಿ ಹೇಳುವುದೆಲ್ಲವೂ ಸತ್ಯ ಎಂಬುದು ಉಗ್ರಪ್ಪ ಅವರಿಂದ ಗೊತ್ತಾಗಿದೆ. ಕಾಂಗ್ರೆಸ್‌ನವರು ವೇದಿಕೆಯಲ್ಲಿ ಸತ್ಯ ಹೇಳುವುದಿಲ್ಲ. ಆ ಪಕ್ಷವೊಂದು ಭ್ರಷ್ಟಾಚಾರದ ಕೂಪ ಎಂಬುದು ಜನರಿಗೆ ಪಕ್ಕಾ ಗೊತ್ತಾಗಿದೆ ಎಂದರು.

Advertisement

ಉಗ್ರಪ್ಪನವರ ಮೇಲೆ ಕ್ರಮ ತೆಗೆದುಕೊಳ್ಳಲು ಡಿಕೆಶಿಗೆ ಶಕ್ತಿ ಇದೆಯೇ ಎಂದು ಪ್ರಶ್ನಿಸಿದ ಅವರು, ಪಕ್ಷದ ಕಾರ್ಯಾಲಯದಲ್ಲೇ ಆಗಿರುವ ಈ ತಪ್ಪಿನ ಬಗ್ಗೆ ತಿಳಿದಿದ್ದರೂ ಡಿಕೆಶಿ ಅದಕ್ಕೆ ಸಮಜಾಯಿಷಿ ಕೊಟ್ಟಿಲ್ಲ. ಅಧ್ಯಕ್ಷ ಸ್ಥಾನದ ಅಶಕ್ತ ವ್ಯಕ್ತಿ ಎಂಬುದು ಸಾಬೀತಾಗಿರುವ ಕಾರಣ ಡಿಕೆಶಿ ಪಕ್ಷಕ್ಕೆ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು. ಈ ವಿಚಾರದ ಬಗ್ಗೆ ಡಿಕೆಶಿ ದೂರು ಕೊಡಲಿ. ತನಿಖೆಯೂ ಆಗಲಿ ಉಗ್ರಪ್ಪ ಮತ್ತು ಸಲೀಂ ಅವರು ಕಾಂಗ್ರೆಸ್‌ನ ಪರಿಸ್ಥಿತಿ ಸ್ಪಷ್ಟವಾಗಿ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷಗಿರಿ ಪಡೆದರಷ್ಟೇ ಮುಖ್ಯಮಂತ್ರಿ ಸ್ಥಾನ ಎಂಬ ಕನಸು ಹೊತ್ತು ಚಿಕ್ಕಮಕ್ಕಳ ತರ ಡಿಕೆಶಿ ಅಧ್ಯಕ್ಷರಾದರು. ಅವರದ್ದೇ ಪತ್ರಿಕಾಗೋಷ್ಠಿಯಲ್ಲಿ ಡಿಕೆಶಿ ತೇಜೋವಧೆ ಆಗಿದೆ. ಮುಖವಾಡ ಕಳಚಿ ಬಿದ್ದಿದೆ ಎಂದರು.

ಡಿಕೆಶಿ ನೇತೃತ್ವದ ಕೆಟ್ಟ ಪರಂಪರೆಯ ಕೆಟ್ಟ ಪಕ್ಷವನ್ನು ರಾಜ್ಯದ ಜನತೆ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಡಿಕೆಶಿಯವರು ತನಿಖಾ ಸಂಸ್ಥೆಗಳು ಮತ್ತು ನಮ್ಮ ಪಕ್ಷದ ನಾಯಕರ ಮೇಲೆ ಮಾಡಿದ ಬೇಜವಾಬ್ದಾರಿ ಟೀಕೆ ಮತ್ತು ಆರೋಪಗಳನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next