Advertisement
ಪರಿಷತ್ತಿನ 11 ಸ್ಥಾನಗಳಿಗೆ ಜೂ. 13ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಗಳ ಆಯ್ಕೆಗೆ ಎರಡು ದಿನಗಳಿಂದ ದಿಲ್ಲಿಯಲ್ಲಿ ಕಸರತ್ತು ನಡೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯು ಸಂಭವನೀಯರ ಪಟ್ಟಿಗೆ ಅಂತಿಮ ಸ್ಪರ್ಶ ನೀಡಿದ್ದು, ಗುರುವಾರ ರಾಹುಲ್ ಗಾಂಧಿ ಒಪ್ಪಿಗೆ ಪಡೆದು ಘೋಷಿ ಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುಜೇìವಾಲ ಸಭೆಯಲ್ಲಿದ್ದರು.
Related Articles
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೂ, ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್, ಮಾಜಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ ಸಹಿತ ಹಲವರ ಹೆಸರು ಚರ್ಚೆಗೆ ಬಂದಿತ್ತು. ಆದರೆ ಸೋತವರಿಗೆ ಅವಕಾಶ ಕೊಡಬಾರದೆಂಬ ಮಾನದಂಡದಡಿ ಇವರನ್ನು ಹೊರಗಿಡಲಾಗಿದೆ.
Advertisement
ಶೆಟ್ಟರ್ ಸ್ಥಾನ ಲಿಂಗಾಯತರಿಗೆಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ವಿಧಾನ ಪರಿಷತ್ತಿಗೆ ಕಳುಹಿಸಿತ್ತು. ಆದರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರು ಮತ್ತೆ ಬಿಜೆಪಿ ಸೇರಿದ್ದರಿಂದ ಪರಿಷತ್ತಿನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಹೀಗೆ ತೆರವಾಗಿರುವ ಸ್ಥಾನಕ್ಕೆ ಇನ್ನೂ ಚುನಾವಣೆ ಘೋಷಣೆ ಆಗಿಲ್ಲ. ಆದರೆ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಕೊಡಲಿಲ್ಲ ಎಂಬ ಆಕ್ರೋಶ ಎದುರಿಸುವ ಬದಲಿಗೆ ಶೆಟ್ಟರ್ ಸ್ಥಾನಕ್ಕೆ ಲಿಂಗಾಯತ ಅಭ್ಯರ್ಥಿಯನ್ನೇ ಘೋಷಿಸಲಿದೆ. ಶೆಟ್ಟರ್ ತೆರವುಗೊಳಿಸಿರುವ ಅವಧಿಯು 2028ರ ಜೂನ್ 14ರ ವರೆಗೂ ಇದೆ. ಸಂಭಾವ್ಯ ಅಭ್ಯರ್ಥಿಗಳು
1. ಎನ್.ಎಸ್.ಬೋಸರಾಜ್
2. ಡಾ| ಯತೀಂದ್ರ
3. ಐವನ್ ಡಿ’ಸೋಜಾ
4.ಇಸ್ಮಾಯಿಲ್ ತಮಟಗಾರ
5. ವಿ.ಎಸ್.ಉಗ್ರಪ್ಪ ಯಾರಿಗೆಲ್ಲ ತಪ್ಪಬಹುದು?
1.ಕೆ.ಗೋವಿಂದರಾಜ್
2. ಕೆ.ಆರ್.ರಮೇಶ್ ಕುಮಾರ್
3. ಪಿ.ಟಿ.ಪರಮೇಶ್ವರ್ ನಾಯ್ಕ