Congress: ಪಕ್ಷಕ್ಕೆ ಪೂರ್ಣ ಪ್ರಮಾಣ ಅಧ್ಯಕ್ಷರು ಬೇಕು: ಸಚಿವ ಸತೀಶ್ ಜಾರಕಿಹೊಳಿ
ಮತ ತರುವ ಜನಪ್ರಿಯರು ಅಧ್ಯಕ್ಷರಾಗಬೇಕು, ಡಿಕೆಶಿ ಬದಲಾವಣೆ ಬಗ್ಗೆ ಹೇಳಿಕೆ ನೀಡಿಲ್ಲ: ಸ್ಪಷ್ಟನೆ
Team Udayavani, Jan 16, 2025, 7:48 AM IST
ಬೆಂಗಳೂರು: “ಒಬ್ಬರಿಂದಲೇ ಪಕ್ಷ ಆಗುವುದಿಲ್ಲ. ಒಟ್ಟಾರೆ ಪಕ್ಷಕ್ಕಾಗಿ ಪೂರ್ಣ ಪ್ರಮಾಣ ದಲ್ಲಿ ಕೆಲಸ ಮಾಡು ವವರು ಬೇಕು ಅಷ್ಟೇ. ತ್ಯಾಗ ಮಾಡು ವುದೇನಿಲ್ಲ. ಮತ ತರುವವರು ಅಧ್ಯಕ್ಷರಾಗಬೇಕು. ಪಾಪ್ಯುಲರ್ ಇರುವವರು ಆಗಬೇಕು’ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷತೆ ಕುರಿತು ಸೊಲ್ಲೆತ್ತಿದ್ದಾರೆ.
ಅಲ್ಲದೆ ಪಕ್ಷದಲ್ಲಿ ಈಗ ಸಂಘಟನೆ ಕಡಿಮೆಯಾಗಿದೆ. 2023ರಲ್ಲಿ ಇದ್ದ ವೇಗ ಸಚಿವರಾದ ಮೇಲೆ ಕಡಿಮೆಯಾಗಿದ್ದು, ಆ ವೇಗ ಮತ್ತೆ ಬರಬೇಕು ಎಂದೂ ಸಲಹೆ ನೀಡಿದ್ದಾರೆ. ಆದರೆ ಈ ಹೇಳಿಕೆ ಮಾಧ್ಯ ಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ, ಸ್ಪಷ್ಟನೆ ನೀಡಿದ ಅವರು, ನಾನು ಡಿಕೆಶಿ ವಿರುದ್ಧ ಹೇಳಿಕೆ ನೀಡಿಲ್ಲ ಎಂದಿದ್ದಾರೆ.
ಬುಧವಾರ ಬೆಳಗ್ಗೆ ಮಾತನಾಡಿದ ಸತೀಶ ಜಾರಕಿಹೊಳಿ, “ಇಲ್ಲಿ ಹಠದಪ್ರಶ್ನೆ ಅಲ್ಲ. ಲೋಕಸಭಾ ಚುನಾವಣೆ ಆದ ಮೇಲೆ ಅಧ್ಯಕ್ಷರನ್ನು ಬದಲಾವಣೆ ಮಾಡುವುದಾಗಿ ಸ್ವತಃ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣು ಗೋಪಾಲ್ ಅವರೇ ಬರೆದ ನೋಟ್ ಇದೆ. ಅದು ಜಾರಿಗೆ ಬರಬೇಕು’ ಎಂದು ಹೇಳಿದ್ದರು.
ಆದರೆ ಲೋಕಸಭೆ ಚುನಾವಣೆ ಮುಗಿದು ಆರು ತಿಂಗಳ ಮೇಲಾಯಿತು. ಅದನ್ನು ಅನುಷ್ಠಾನಕ್ಕೆ ತರಬೇಕಲ್ಲವೇ? ಇಲ್ಲದಿದ್ದರೆ ಇವರೇ, ಅಧ್ಯಕ್ಷರಾಗಿ ಮುಂದುವರಿಬೇಕಾ ಬೇಡವಾ ಎಂಬ ಬಗ್ಗೆಯೂ ಹೈಕಮಾಂಡ್ ಸ್ಪಷ್ಟವಾಗಿ ಹೇಳಲಿ’ ಎಂದು ತೀಕ್ಷ್ಣವಾಗಿ ಹೇಳಿದರು.
ಹೆಚ್ಚು ಮತ ತರುವವರು ಆಗಲಿ
ತ್ಯಾಗ ಮಾಡುವುದೇನಿಲ್ಲ. ಮತ ತರುವವರು ಅಧ್ಯಕ್ಷರಾಗಬೇಕು. ಹೆಸರು ಗಳಿಸಿದವರು ಆಗಬೇಕು. ಹಿಂದೆಯೂ ಇದನ್ನು ಹೇಳಿ¨ªೆ. ಇದೇ ಜಾತಿ ಅಂತ ಏನಿಲ್ಲ. ನಾನೇ ಆಗಬೇಕು ಅಂತಲೂ ಇಲ್ಲ. ಕೆಳಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಮೇಲ್ಮಟ್ಟದಲ್ಲಿ ಅದರ ಚರ್ಚೆ ಆಗಬೇಕು ಎಂದರು.
ಹೈಕಮಾಂಡ್ಗೆ ಸತೀಶ್ ಆಗ್ರಹ
ಒಬ್ಬರಿಂದಲೇ ಪಕ್ಷ ಆಗು ವುದಿಲ್ಲ. 140 ಶಾಸಕರಿದ್ದು, ಅವ ರೆಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಕೈಗೊಳ್ಳಲಿ. ಒಟ್ಟಾರೆ ಪಕ್ಷಕ್ಕಾಗಿ ಪೂರ್ಣಾವಧಿ ಕೆಲಸ ಮಾಡುವವರು ಬೇಕು ಅಷ್ಟೇ ಎಂದು ಸಚಿವ ಸತೀಶ್ ಅವರು ಹೈಕಮಾಂಡನ್ನು ಆಗ್ರಹಿಸಿದ್ದಾರೆ.
ಈ ಮಾಸಾಂತ್ಯಕ್ಕೆ ಸತೀಶ್ರಿಂದ ದಿಲ್ಲಿ ನಾಯಕರ ಭೇಟಿ
ಕೆಪಿಸಿಸಿ ಅಧ್ಯಕ್ಷಗಿರಿಯ ರೇಸ್ನಲ್ಲಿ ಇಲ್ಲ ಎನ್ನುತ್ತಲೇ ಈ ಹುದ್ದೆ ಮೇಲೆ ಕಣ್ಣಿಟ್ಟಿರುವ ಸತೀಶ್ ಜಾರಕಿಹೊಳಿ ಈಗಾಗಲೇ ಈ ಹುದ್ದೆಯಲ್ಲಿರುವ ಡಿ.ಕೆ. ಶಿವಕುಮಾರ್ ಕಾರ್ಯವೈಖರಿ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾªರೆ. ಅಷ್ಟೇ ಅಲ್ಲ, ಈ ಮಾಸಾಂತ್ಯಕ್ಕೆ ತಾನು ದಿಲ್ಲಿಗೆ ತೆರಳಿ ನಾಯಕರನ್ನು ಭೇಟಿ ಮಾಡುವುದಾಗಿಯೂ ಹೇಳಿದ್ದಾರೆ. ಇದರೊಂದಿಗೆ ಮುಂದೆ ಇದು ಮತ್ತಷ್ಟು ತೀವ್ರತೆ ಪಡೆಯುವ ಸಾಧ್ಯತೆ ಸ್ಪಷ್ಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಕುಂಭಮೇಳದಲ್ಲಿ ಬೆಳಗಾವಿಯ ನಾಲ್ವರ ದುರ್ಮರಣ… ಹೆಬ್ಬಾಳ್ಕರ್, ಜಾರಕಿಹೊಳಿ ಸಂತಾಪ
ಕುಂಭಮೇಳ ಕಾಲ್ತುಳಿತದಲ್ಲಿ ಬೆಳಗಾವಿಯ ಮತ್ತೋರ್ವ ಮಹಿಳೆ ಮೃತ್ಯು… ಮೃತರ ಸಂಖ್ಯೆ ನಾಲ್ಕಕ್ಕೆ
Tragedy: ಕುಂಭಮೇಳದಲ್ಲಿ ಕಾಲ್ತುಳಿತ… ಬೆಳಗಾವಿಯ ತಾಯಿ-ಮಗಳು ಸೇರಿ ಮೂವರ ದುರ್ಮರಣ
Dharwad: ಪಠ್ಯ ವಿವಾದದ ಹಿನ್ನೆಲೆ… ಪ್ರಶಸ್ತಿ ಸ್ವೀಕರಿಸದೇ ಹಿಂದಿರುಗಿದ ಸಾಹಿತಿ ಡಾ.ಕಂಬಾರ
Koppala: ಮಾಜಿ ಶಾಸಕ ಬಸವರಾಜ ದಡೆಸಗೂರಗೆ ಒಲಿದ ಬಿಜೆಪಿ ಜಿಲ್ಲಾಧ್ಯಕ್ಷ ಪಟ್ಟ
MUST WATCH
ಹೊಸ ಸೇರ್ಪಡೆ
Bigg Boss Kannada: ಹನುಮಂತು ಇಷ್ಟಪಡುವ ಹುಡುಗಿ ಬಗ್ಗೆ ನಮ್ಗೇನೂ ಗೊತ್ತಿಲ್ಲ – ಸಹೋದರ
Chikkamagaluru: ಪಶು ಸಂಗೋಪನೆ- ರೇಷ್ಮೆಗೆ ಹೆಚ್ಚಿನ ಆದ್ಯತೆ: ಸಚಿವ ಕೆ. ವೆಂಕಟೇಶ್
Hair Health: ಚಳಿಗಾಲದಲ್ಲಿ ಕೂದಲ ಆರೈಕೆಗೆ ಅಗತ್ಯ ಸಲಹೆಗಳು
Belagavi: ಕುಂಭಮೇಳದಲ್ಲಿ ಬೆಳಗಾವಿಯ ನಾಲ್ವರ ದುರ್ಮರಣ… ಹೆಬ್ಬಾಳ್ಕರ್, ಜಾರಕಿಹೊಳಿ ಸಂತಾಪ
ಕುಂಭಮೇಳ ಕಾಲ್ತುಳಿತದಲ್ಲಿ ಬೆಳಗಾವಿಯ ಮತ್ತೋರ್ವ ಮಹಿಳೆ ಮೃತ್ಯು… ಮೃತರ ಸಂಖ್ಯೆ ನಾಲ್ಕಕ್ಕೆ