Advertisement

Paris Olympics: ಕುಸ್ತಿಪಟು ವಿನೇಶ್‌ ಅನರ್ಹತೆ ಹಿಂದೆ ಪಿತೂರಿ: ಕಾಂಗ್ರೆಸ್‌

11:19 PM Aug 07, 2024 | Team Udayavani |

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಕುಸ್ತಿಪಟು ವಿನೇಶ್‌ ಫೊಗಾಟ್‌ ಅನರ್ಹಗೊಂಡ ವಿಚಾರಕ್ಕೆ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಇದೊಂದು ಸಂಚು ಎಂದು ವಿಪಕ್ಷಗಳು ಆರೋಪಿಸಿವೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನರ್ಹತೆ ವಿಚಾರ ಪ್ರಸ್ತಾಪಗೊಂಡು ಮೋದಿ ಸರ್ಕಾರದ ವೈಫ‌ಲ್ಯ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ.

Advertisement

ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಕ್ರಿಡಾ ಸಚಿವ ಮನಸುಖ ಮಾಂಡವಿಯಾ ವಿನೇಶ್‌ ಫೋಗಾಟ್‌ ಅಗತ್ಯಕ್ಕೆ ತಕ್ಕಂತೆ ಎಲ್ಲಾ ನೆರವು ನೀಡಲಾಗಿದೆ. ಹಂಗೇ ರಿಯ ಕೋಚ್‌ ವೋಲರ್‌ ಅಕೊಸ್‌ ಹಾಗೂ ಫಿಸಿಯೋ ಅಶ್ವಿ‌ನಿ ಜಿವಾನ್‌ ಪಾಟೀಲ್‌ ಸೇರಿ ಹಲವು ಸಿಬ್ಬಂದಿಯನ್ನು ನೀಡಲಾಗಿತ್ತು. ಜತೆಗೆ ಸಿಬ್ಬಂದಿಯ ನಿರ್ವಹಣೆ ಸೇರಿ ಎಲ್ಲದಕ್ಕೂ ಹಣಕಾಸಿನ ನೆರವೂ ದೊರೆತಿತ್ತು. ಆಕೆಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಸ್ಪರ್ಧೆಗಾಗಿ ಒಟ್ಟು 17,45,775 ರೂ. ನೀಡಲಾಗಿತ್ತು’ ಎಂದು ಹೇಳಿದ್ದಾರೆ.

ಅನರ್ಹತೆ ವಿಚಾರ ಲೋಕಸಭೆ ಮತ್ತು ರಾಜ್ಯ ಸಭೆಯ ಲ್ಲಿಯೂ ಕೋಲಾಹಲಕ್ಕೆ ಕಾರಣವಾಯಿತು. ಹಿಂದಿನ ಹಲವು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ ಕುಸ್ತಿಪಟುಗಳನ್ನು ಕೀಳಾಗಿ ನಡೆಸಿಕೊಂಡಿತ್ತು ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ.

ಅನರ್ಹತೆ ಹಿಂದೆ ಪಿತೂರಿ-ರಣದೀಪ್‌ ಸುರ್ಜೆವಾಲಾ: ಇದರ ಹಿಂದೆ ದೊಡ್ಡ ಪಿತೂರಿಯೋ ಇದೆ ಎಂದು ಕಾಂಗ್ರೆಸ್‌ ಸಂಸದ ರಣದೀಪ್‌ ಸುರ್ಜೆವಾಲಾ ಟ್ವೀಟ್‌ ಮಾಡಿದ್ದಾರೆ. ಒಂದೇ ದಿನದಲ್ಲಿ ವಿಶ್ವ ಚಾಂಪಿಯನ್‌ ಸೇರಿ ಮೂವರನ್ನು ಸೋಲಿಸಿದ ವಿನೇಶ್‌ ಪೈನಲ್‌ನಲ್ಲಿ ಕೇವಲ 100ಗ್ರಾಂ ವ್ಯತ್ಯಾಸದಿಂದ ಅನರ್ಹಗೊಳ್ಳುತ್ತಾರೆಂದರೆ ಇದು ಕುತಂತ್ರವಲ್ಲದೆ ಮತ್ತೇನು? ಪ್ರಧಾನಿಯಿಂದ ಸಮಾಧಾನದ ಟ್ವೀಟ್‌ ಬೇಡ. ನಮಗೆ ನ್ಯಾಯ ಬೇಕು ಎಂದು ಬರೆದು ಕೊಂಡಿದ್ದಾರೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಟ್ವೀಟ್‌ ಮಾಡಿ “ಸಹೋದರಿ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ನೀವೊಬ್ಬರೆ ಎಂದು ಭಾವಿಸಬೇಕಾಗಿಲ್ಲ’ ಎಂದಿದ್ದಾರೆ.

ನವದೆಹಲಿ: ಕುಸ್ತಿಪಟು ವಿನೇಶ್‌ ಫೋಗಾಟ್‌ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡದ್ದನ್ನು ವಿರೋಧಿಸಿ ಪ್ರತಿಪಕ್ಷಗಳ ಒಕ್ಕೂಟ “ಇಂಡಿಯಾ’, ಸಂಸತ್‌ ಆವರಣದಲ್ಲಿ ಪ್ರತಿಭಟನೆ ನಡೆಸಿವೆ. ಇದರ ಹಿಂದೆ ದೊಡ್ಡ ಪಿತೂರಿಯಿದ್ದು ಅವರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿವೆ. ಕಾಂಗ್ರೆಸ್‌, ಟಿಎಂಸಿ, ಎನ್‌ಸಿಪಿ(ಎಸ್‌ಪಿ), ಜೆಎಂಎಂ, ಆರ್‌ಜೆಡಿ, ಹಾಗೂ ಎಸ್‌ಪಿ ಸೇರಿ ಪ್ರತಿಪಕ್ಷಗಳ ನಾಯಕರು ಅದರಲ್ಲಿ ಭಾಗವಹಿಸಿದ್ದರು.

Advertisement

ವಿನೇಶ್‌ ಫೋಗಾಟ್‌ ದುಃಖದಲ್ಲಿ ನಾವು ಭಾಗಿಗಳು. ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ ಅವರ ಅದ್ಭುತ ಪ್ರದರ್ಶನ ಪ್ರತಿಯೊಬ್ಬ ಭಾರತೀಯನನ್ನು ರೋಮಾಂಚನಗೊಳಿಸಿದೆ. ಅವರು ಭವಿಷ್ಯದ ಭಾರತದ ವಿಶ್ವ ಚಾಂಪಿಯನ್‌ಗಳಿಗೆ ಮಾದರಿಯಾಗಿದ್ದಾರೆ.
– ದ್ರೌಪದಿ ಮುರ್ಮು, ರಾಷ್ಟ್ರಪತಿ

ನೀವು ನಮ್ಮ ನಿಜವಾದ ಚಾಂಪಿ ಯನ್‌. ನಿಮ್ಮನ್ನು ಅನರ್ಹಗೊಳಿ ಸಿದ್ದು ಭಾರತೀಯರ ಕನಸನ್ನು ಭಗ್ನಗೊ ಳಿಸಿದೆ. ಆದರೂ ಪ್ರತಿಯೊಬ್ಬ ಚಾಂಪಿ ಯನ್‌ಗೂ ಸವಾಲುಗಳಿವೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ.
– ಜೆ.ಪಿ. ನಡ್ಡಾ, ಕೇಂದ್ರ ಸಚಿವ

ದೇಶದ ಗೌರವದ ಪ್ರತೀಕ ವಿನೇಶ್‌ ಅವರನ್ನು ಅನರ್ಹಗೊಳಿಸಿದ್ದು ನಿಜಕ್ಕೂ ಆಘಾತಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಅವರು ಜಯಶಾಲಿಯಾಗಿ ಬರುವ ವಿಶ್ವಾಸ ಇದೆ.
– ರಾಹುಲ್‌ ಗಾಂಧಿ, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next