Advertisement

ಸದನವೇನು ಮದುವೆ ಛತ್ರವೇ? ದಾರಿಹೋಕರನ್ನೂ ಸದನಕ್ಕೆ ಕರೆಸುವಿರಾ ಕಾಗೇರಿಯವರೆ?: ಕಾಂಗ್ರೆಸ್

12:35 PM Sep 25, 2021 | Team Udayavani |

ಬೆಂಗಳೂರು: ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ ಅವರು ರಾಜ್ಯದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ವಿಚಾರಕ್ಕೆ ಕಾಂಗ್ರೆಸ್ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಮುಂದೆ ದಾರಿಹೋಕರನ್ನೂ ಸದನಕ್ಕೆ ಕರೆಸುವಿರಾ ಕಾಗೇರಿಯವರೆ ಎಂದು ಪ್ರಶ್ನಿಸಿದೆ.

Advertisement

ಸದನದ ಸದಸ್ಯರಲ್ಲದವರಿಗೆ ಪ್ರವೇಶವಿಲ್ಲದಿರುವಾಗ ಓಂ ಬಿರ್ಲಾರನ್ನ ಯಾವ ನಿಯಮಗಳ ಅಡಿಯಲ್ಲಿ ಕರೆಸಲಾಯಿತು? ಅವರ ಭದ್ರತಾ ಸಿಬ್ಬಂದಿಗೆ ಸದನದೊಳಗೆ ಪ್ರವೇಶಿಸಲು ಅನುಮತಿ ನೀಡಿದವರಾರು? ಚರ್ಚೆ ನಡೆಸಬೇಕಾದಲ್ಲಿ ಸಮಾರಂಭ ನಡೆಸಿದ್ದೇಕೆ? ನಿರೂಪಕರನ್ನು ಸದನದೊಳಗೆ ಕರೆತಂದಿದ್ದೇಕೆ? ಮುಂದೆ ದಾರಿಹೋಕರನ್ನೂ ಸದನಕ್ಕೆ ಕರೆಸುವಿರಾ ಕಾಗೇರಿಯವರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಹರಿಹಾಯ್ದಿದೆ.

ಬಿಜೆಪಿಯು ಗೌರವಾನ್ವಿತ ಸದನವನ್ನು ಮದುವೆ ಛತ್ರದಂತೆ ಭಾವಿಸಿದೆ! ನಿಯಮಗಳನ್ನ ಸದನ ಸದಸ್ಯರಲ್ಲದವರನ್ನ ಕರೆಸಿ ಭಾಷಣ ಮಾಡಿಸಿ ಯಾವ ಘನ ಕಾರ್ಯ ಸಾಧಿಸಿದೆ ಬಿಜೆಪಿ? ಹೀಗೆಯೇ ಬಿಟ್ಟರೆ ಸದನದಲ್ಲಿ ಮದುವೆ, ಮುಂಜಿಯಂತಹ ಸಮಾರಂಭಗಳನ್ನ ಮಾಡಲೂ ಬಿಜೆಪಿ ಹಿಂಜರಿಯುವುದಿಲ್ಲ! ಪ್ರಜಾಪ್ರಭುತ್ವದ ಘನತೆ ಅರಿಯದವರಿಂದ ಇನ್ನೇನು ನಿರೀಕ್ಷಿಸಲಾದೀತು ಎಂದು ಕಾಂಗ್ರೆಸ್ ಟೀಕೆ ಮಾಡಿದೆ.

ಅವಕಾಶ ಇಲ್ಲ: ಲೋಕಸಭೆಯ ಸಭಾಧ್ಯಕ್ಷರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಸ್ಪೀಕರ್‌ ಹೊಸ ಸಂಪ್ರದಾಯ ಹುಟ್ಟು ಹಾಕಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Advertisement

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ದೇಶದ 75 ವರ್ಷಗಳ ಇತಿಹಾಸದಲ್ಲಿ ವಿಧಾನಸೌಧ ಸ್ಥಾಪನೆಯಾಗಿ ಕಾರ್ಯಾರಂಭ ಮಾಡಿದ ದಿನದಿಂದ ಇವತ್ತಿನವರೆಗೆ ಲೋಕಸಭಾ ಸಭಾಧ್ಯಕ್ಷರು ವಿಧಾನಮಂಡಲದ ಜಂಟಿ ಅಧಿವೇಶನ ಕುರಿತು ಭಾಷಣ ಮಾಡಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಅಕ್ರಮವಾಗಿ ಆಕ್ರಮಿಸಿರುವ ಪ್ರದೇಶಗಳನ್ನು ತಕ್ಷಣ ಖಾಲಿ ಮಾಡಿ: ಪಾಕ್ ಗೆ ಭಾರತದ ಖಡಕ್ ಉತ್ತರ

ವಿಧಾನಸೌಧ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಕಾರ್ಯಕ್ರಮ ಮಾಡುವಂತೆ ನಾವು ಸಲಹೆ ನೀಡಿದೆವು. ಪ್ರತಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ನಿರ್ಧಾರ ಕೈಗೊಳ್ಳದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿಸಿದರು. ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಕಾರ್ಯಕ್ರಮ ಮಾಡಿದ್ದರೆ ನಷ್ಟವೇನು ಆಗುತ್ತಿತ್ತು ಎಂದು ಪ್ರಶ್ನಿಸಿದರು

Advertisement

Udayavani is now on Telegram. Click here to join our channel and stay updated with the latest news.

Next