ಬೆಂಗಳೂರು : ಕಾಂಗ್ರೆಸ್ ನಾಯಕರು ಇಂದು ಸದನದ ಕಲಾಪದಲ್ಲಿ ಟ್ರೈಲರ್ ಮೂಲಕ ಮುಂದೆ 2023 ರಲ್ಲಿ ಏನಾಗುತ್ತೆ ಎಂಬುದನ್ನ ತೋರಿಸಿದ್ದಾರೆ, ಜನ ಇದರಿಂದ ಎಚ್ಚೆತ್ತುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, .ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಹಾರಿಸಬಹುದು ಎಂದು ಹೇಳಿದ್ದ ಈಶ್ವರಪ್ಪ ಅವರ ಬಗ್ಗೆ ಕಾಂಗ್ರೆಸ್ ನಾಯಕರು ನಿಲುವಳಿ ಸೀಮಿತಗೊಳಿಸಿದ್ದಾರೆ. ಜೆಡಿಎಸ್ ನಿಂದಲೂ ನಿಲುವಳಿ ಮಂಡಿಸಲಾಗಿತ್ತು. ಕಾನೂನು ಸಚಿವರು ಪ್ರತ್ಯುತ್ತರ ಕೊಟ್ಟರು. ಇದು ನನಗೆ ಪ್ರಮುಖ ವಿಷಯವಲ್ಲ.ಕರಾವಳಿ ಭಾಗದ ಶಾಲೆಯಲ್ಲಿ ಶುರುವಾದ ಹಿಜಾಬ್ ವಿವಾದವೇ ಮುಖ್ಯ. ಹಿಜಾಬ್ ಧರಿಸುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಕರಾವಳಿ ಪ್ರದೇಶದ ಶಾಲೆಯಲ್ಲಿ ಪ್ರೇರೇಪಿಸಿ ಕಳುಹಿಸಿದ್ದರು. ಈ ವರ್ಷ ಡಿಸೆಂಬರ್ ನಲ್ಲಿ ಹತ್ತು ಮಕ್ಕಳು ಧರಿಸಿ ಬಂದಿದ್ದರು. ಅದರ ಹಿನ್ನೆಲೆ ಯಾರ್ಯಾರು ಇದ್ದಾರೆ ಎಂದು ಪರಿಗಣಿಸಿ ಮೊಟಕುಗೊಳಿಸಬೇಕಿತ್ತು. ಸರ್ಕಾರ ವಿಫಲವಾಯಿತು. ಕೇಸರಿ ಶಾಲು ಹಾಕಲಾಯಿತು. ಕುಂದಾಪುರದಲ್ಲಿ ನಡೆದುಕೊಂಡು ಬಂದ ರೀತಿ ಏನು? ಪ್ರೋತ್ಸಾಹ ಕೊಡುವವರನ್ನ ಬಲಿ ಕೊಡಬೇಡಿ ಎಂದರು.
ಇದನ್ನೂ ಓದಿ :ರಾಷ್ಟ್ರ ಧ್ವಜ ಪ್ರದರ್ಶಿಸಿ ಕಾಂಗ್ರೆಸ್ ಪ್ರತಿಭಟನೆ : ವಿವಾದಕ್ಕೆ ಕಾರಣ
ಕಾಂಗ್ರೆಸ್ ನವರು ಕೇವಲ ಒಂದು ಮಂತ್ರಿಯ ರಾಜೀನಾಮೆ ಪಡೆಯುವ ಪ್ರತಿಷ್ಠೆ ಮುಂದಿಟ್ಟುಕೊಂಡು ಹೋಗುತ್ತಿದ್ದಾರೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಯಾವ ಪುರುಷಾರ್ಥಕ್ಕೆ ಅಹೋರಾತ್ರಿ ಧರಣಿ? ಬಿಜೆಪಿ, ಕಾಂಗ್ರೆಸ್ ಮಕ್ಕಳ ಶಿಕ್ಷದಿಂದ ಚೆಲ್ಲಾಟ ಆಡುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಒಂದೇ. ಕಾಂಗ್ರೆಸ್ ನಲ್ಲಿ ರಾಷ್ಟ್ರ ಧ್ವಜ ಹಿಡಿದರೆ ಮೈ ಎಲ್ಲಾ ರೋಮಾಂಚನ ಆಗುತ್ತಂತೆ. ಬಡ ಹೆಣ್ಣು ಮಕ್ಕಳ ಬಗ್ಗೆ ಮಾತಾಡಿದ್ದರೆ ಇವರನ್ನು ಒಪ್ಪುತ್ತಿದ್ದೆ. ಇದು ಪವಿತ್ರ ಸ್ಥಳ ಇಲ್ಲಿ ಜನಪರ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಬೇಕು ಎಂದು ಅಕ್ರೋಶ ಹೊರ ಹಾಕಿದರು.
ಸದನದಲ್ಲಿ ನಾಯಕರ ಪದ ಬಳಕೆ, ಗೂಳಿಗಳ ರೀತಿ ನುಗ್ಗುವ ಮೂಲಕ 2023 ರಲ್ಲಿ ಚುನಾವಣೆ ಆದರೆ ಏನಾಗುತ್ತದೆ ಎಂಬ ಟ್ರೇಲರ್ ಇಟ್ಟಿದ್ದಾರೆ. ನಾಡಿನ ಜನತೆ ಸೂಕ್ಷ್ಮವಾಗಿ ಗಮನಿಸಬೇಕು, ಏನಾಗಬಹುದು ಎಂಬುದು ಅಂದಾಜಿಸುವಂತೆ ರಾಜ್ಯದ ಜನತೆಗೆ ಮನವಿ ಮಾಡಲಾಗುವುದು.ತೆರಿಗೆ ಹಣದಿಂದ ಕೋಟ್ಯಂತರ ಖರ್ಚಾಗುತ್ತಿದೆ. ಅದು ಪೋಲಾಗುವುದು ಆಗಬಾರದು ಎಂದರು.