Advertisement

ಜನತೆಗೆ ಜಲೋತ್ಸವದ ಸಂಕಟ, ಬಿಜೆಪಿಗೆ ಜನೋತ್ಸವದ ಚೆಲ್ಲಾಟ!: ಕಾಂಗ್ರೆಸ್

05:55 PM Sep 07, 2022 | Team Udayavani |

ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಅವಾಂತರದ ಬೆನ್ನಲ್ಲೇ ಸರಕಾರದ ವಿರುದ್ಧ ಕಾಂಗ್ರೆಸ್ ಟ್ವೀಟ್ ಸುರಿ ಮಳೆಗೈದು ಬುಧವಾರ ಆಕ್ರೋಶ ಹೊರ ಹಾಕಿದೆ.

Advertisement

ಬೆಂಗಳೂರನ್ನು ಪ್ರತಿನಿಧಿಸುವ ಮತ್ತೊಬ್ಬ ಸಚಿವ ಎಸ್.ಟಿ. ಸೋಮಶೇಖರ್ ಮಳೆ ಅವಾಂತರದಿಂದ ನಲುಗಿದ ಯಾವುದೇ ಏರಿಯಾಗಳಲ್ಲಿ ಇದುವರೆಗೂ ಕಾಣಿಸಿಕೊಂಡಿಲ್ಲ.ಜನತೆ ಹುಡುಕುತ್ತಿದ್ದಾರೆ.ಜನರ ಮನೆಯಲ್ಲಿ ಮಳೆ ನೀರು ನುಗ್ಗಿದರೆ, ಇವರ ಮನದಲ್ಲಿ ಸನ್ಮಾನದ ಆಸೆ ನುಗ್ಗಿದೆ! ಸಚಿವರೇ ಜನರತ್ತ ನೋಡುವುದು ಯಾವಾಗ? ಎಂದು ಪ್ರಶ್ನಿಸಿದೆ.

ಸಂಸದ ತೇಜಸ್ವಿ ಸೂರ್ಯ ಅವರನ್ನು ಸಂಸದರನ್ನಾಗಿಸಿದ್ದು, ಆಡುವ ಮಕ್ಕಳನ್ನು ಶಾಲೆಗೆ ಸೇರಿಸಿದಂತಾಗಿದೆ! ಹಿಂದೆ ಕೋವಿಡ್ ಕಾಲದಲ್ಲಿ ಫುಟ್ಬಾಲ್ ಆಡಲು ಹೋಗಿದ್ದರು, ಅತಿವೃಷ್ಟಿಯ ಕಾಲದಲ್ಲಿ ದೋಸೆ ತಿನ್ನಲು ಹೋಗಿದ್ದಾರೆ. ಕೆಲಸಕ್ಕೆ ಕರೆಯಬೇಡಿ, ದೋಸೆ ತಿನ್ನೋಕೆ ಕರೆಯೋದು ಮರೆಯಬೇಡಿ ಎಂಬುದು ಇವರ ಮನವಿ! ಎಂದು ಟ್ವೀಟ್ ಆಗಿದೆ.

ಬೆಂಗಳೂರಿನ ಜನರು ಕೊಟ್ಟ ಅಧಿಕಾರವನ್ನು ಅನುಭವಿಸುತ್ತಿರುವ ಆರ್. ಅಶೋಕ್ ಅವರು ಯಾವ ಬಡಾವಣೆ, ಗಲ್ಲಿಗಳಲ್ಲೂ ಕಾಣಿಸಿಕೊಳ್ಳಲಿಲ್ಲ, ಜನತೆಯ ನೆರವಿಗೆ ನಿಂತಿದ್ದು ಕಾಣಲಿಲ್ಲ.ಜನರಿಗೆ ಕಷ್ಟದ ಸಮಯವೆಂದರೆ ಬಿಜೆಪಿಗೆ ವಿಶ್ರಾಂತಿಯ ಸಮಯ, ಮಳೆ ಮುಗಿದ ನಂತರ ಹಿಜಾಬ್, ಹಲಾಲ್‌ಗಳಿಗೆ ಕ್ರಿಯಾಶೀಲರಾಗ್ತಾರೆ! ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಕಳೆದ ಒಂದು ವಾರದಿಂದ ಮಳೆಯಲ್ಲಿ ಜನತೆ ಮುಳುಗಲು ಶುರುವಾದಾಗಿನಿಂದ ರಾಜ್ಯದ ಗೃಹಸಚಿವರು ನೆರೆ ಪೀಡಿತ ಪ್ರದೇಶದಲ್ಲಾಗಲಿ, ಬೆಂಗಳೂರಿನಲ್ಲಾಗಲಿ, ವಿಧಾನಸೌಧದಲ್ಲಾಗಲಿ ಕಾಣಿಸಲಿಲ್ಲ.ಸ್ವಕ್ಷೇತ್ರದಲ್ಲಿ ಠಿಕಾಣಿ ಹೂಡಿದ ಆರಗ ಜ್ಞಾನೇಂದ್ರ ಅವರು ಗೃಹಸಚಿವರಾಗಿ ಕೆಲಸ ಮಾಡಲು ಆರಂಭಿಸುವುದು ಯಾವಾಗ!? ಎಂದು ಪ್ರಶ್ನಿಸಿದೆ.

Advertisement

ಸಚಿವ ಡಾ.ಸುಧಾಕರ್ ಅವರು ಕೋವಿಡ್ ಕಾಲದಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸ್ವಿಮ್ಮಿಂಗ್ ಮಾಡ್ತಿದ್ರು.ಈಗ ಬೆಂಗಳೂರು ಸ್ವಿಮ್ಮಿಂಗ್ ಪೂಲ್ ಆಗಿದೆ, ಜನತೆ ಸ್ವಿಮ್ಮಿಂಗ್ ಮಾಡುವ ಸ್ಥಿತಿ ಇದೆ, ಸಚಿವರು ನಾಪತ್ತೆಯಾಗಿದ್ದಾರೆ. ಜನತೆಗೆ ಜಲೋತ್ಸವದ ಸಂಕಟ, ಬಿಜೆಪಿಗೆ ಜನೋತ್ಸವದ ಚೆಲ್ಲಾಟ! ಎಂದು ಆಕ್ರೋಶ ಹೊರ ಹಾಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next