Advertisement
ದಿಲ್ಲಿಯಲ್ಲಿ ಈ ಕುರಿತು ಪ್ರತಿಕ್ರಿಯಿ ಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸಿನವರು ಯಾವುದಕ್ಕೆ ಸಂಭ್ರಮಿಸುತ್ತಿ ದ್ದಾರೆ? ರಾಜ್ಯವನ್ನು ಒಂದೂವರೆ ವರ್ಷದಲ್ಲಿ ಅಧೋಗತಿಗೆ ತೆಗೆದುಕೊಂಡು ಹೋಗಿರುವುದಕ್ಕಾ? ಆರ್ಥಿಕತೆ ದಿವಾಳಿ ಮಾಡಿರುವುದಕ್ಕಾ? ಅಭಿವೃದ್ಧಿ ಶೂನ್ಯ ಆಗಿರುವುದಕ್ಕಾ? 3 ಉಪ ಚುನಾವಣೆ ಗೆದ್ದ ಖುಷಿಗಿಂತ ಹಗರಣ ಗಳ ಸರಮಾಲೆ ನಡೆಸಿ, ಜನವಿರೋಧಿ ನೀತಿಗಳನ್ನು ತೆಗೆದುಕೊಂಡಿದ್ದಕ್ಕಾ? ಅಥವಾ ನ್ಯಾಯಾಲಯ, ತನಿಖಾ ಸಂಸ್ಥೆಗಳಿಗೆ ಶಕ್ತಿ ಪ್ರದರ್ಶನವೇ? ಎಂದು ಪ್ರಶ್ನಿಸಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಸಿದ್ದರಾಮಯ್ಯಗೆ ಭಯ ಕಾಡುತ್ತಿದೆ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಹುನ್ನಾರ ನಡೆದಿರುವುದರಿಂದ ಮತ್ತು ಹೈಕಮಾಂಡ್‌ನವರು ಸೂಕ್ಷ್ಮವಾಗಿ ಹೇಳಿರುವುದರಿಂದ ಜನಕಲ್ಯಾಣ ಹೆಸರಿನಲ್ಲಿ ಹೈಕಮಾಂಡ್‌ಗೆ ಸಂದೇಶ ರವಾನಿಸಲು ಜನ ಸೇರಿಸಿದ್ದಾರೆ. ಯಾವುದೇ ಅಭಿವೃದ್ಧಿ ಮಾಡದೆಯೇ ಒಂದೂವರೆ ವರ್ಷ ವಾಲ್ಮೀಕಿ ನಿಗಮ, ಮುಡಾ ಹಗರಣಗಳಲ್ಲಿ ಸಿಲುಕಿದ್ದೇ ಸಾಧನೆಯೇ? ಎಂದು ಪ್ರಶ್ನಿಸಿದ್ದಾರೆ.