Advertisement

ಅಭ್ಯರ್ಥಿಗಳ ಆರನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್: ಯಾವೆಲ್ಲಾ ಕ್ಷೇತ್ರ, ಯಾರು ಅಭ್ಯರ್ಥಿ?

05:28 PM Mar 25, 2024 | Team Udayavani |

ನವದೆಹಲಿ: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದಾಗಿನಿಂದ ಎಲ್ಲ ಪಕ್ಷಗಳು ಅಭ್ಯರ್ಥಿಯ ಆಯ್ಕೆಯಲ್ಲಿ ಬ್ಯುಸಿಯಾಗಿದೆ ಈ ನಡುವೆ ಬಿಜೆಪಿ ಕಾಂಗ್ರೆಸ್ ಪಕ್ಷಗಳು ಕೆಲ ಕ್ಷೇತ್ರಗಳಿಗೆ ತಮ್ಮ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಇನ್ನೂ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲಗಳಿದ್ದು ಪಕ್ಷದ ಹಿರಿಯರ ಸಮ್ಮುಖದಲ್ಲಿ ಚರ್ಚೆಗಳು ನಡೆಯುತ್ತಿವೆ ಈ ನಡುವೆ ಇಂದು ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Advertisement

ಕಾಂಗ್ರೆಸ್ ಬಿಡುಗಡೆಗೊಳಿಸಿದ ಆರನೇ ಪಟ್ಟಿಯಲ್ಲಿ ತಮಿಳುನಾಡಿನ ಒಂದು ಕ್ಷೇತ್ರ ಹಾಗೂ ರಾಜಸ್ಥಾನದ ನಾಲ್ಕು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದು ಅದರಂತೆ ಒಟ್ಟು ಐದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಕಾಂಗ್ರೆಸ್ ಬಿಡುಗಡೆಗೊಳಿಸಿದ ಆರನೇ ಪಟ್ಟಿಯಲ್ಲಿ ಇತ್ತೀಚಿಗೆ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ ಮಾಜಿ ನಾಯಕ ಪ್ರಹ್ಲಾದ್ ಗುಂಜಾಲ್ ಅವರಿಗೂ ಟಿಕೆಟ್ ಸಿಕ್ಕಿದ್ದು ಜೊತೆಗೆ ರಾಮಚಂದ್ರ ಚೌಧರಿ, ಡಾ ದಾಮೋದ ಗುರ್ಜರ್ ಮತ್ತು ಪ್ರಹ್ಲಾದ್ ಗುಂಜಾಲ್ ಅವರಂತಹ ಅಭ್ಯರ್ಥಿಗಳಿಗೆ ಟಿಕೆಟ್​ ನೀಡಲಾಗಿದೆ.

ಯಾವ ಅಭ್ಯರ್ಥಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ಸಿಕ್ಕಿದೆ ಎಂಬುದನ್ನು ನೋಡೋಣ…
– ಅಜ್ಮೀರ್ – ರಾಮಚಂದ್ರ ಚೌಧರಿ (ರಾಜಸ್ಥಾನ)
– ರಾಜಸಮಂದ್ – ಸುದರ್ಶನ್ ರಾವತ್ (ರಾಜಸ್ಥಾನ)
– ಭಿಲ್ವಾರ – ಡಾ ದಾಮೋದರ್ ಗುರ್ಜರ್ (ರಾಜಸ್ಥಾನ)
– ಕೋಟ – ಪ್ರಹ್ಲಾದ್ ಗುಂಜಾಲ್ (ರಾಜಸ್ಥಾನ)
– ತಿರುನೆಲ್ವೇಲಿ – ಸಿ ರಾಬರ್ಟ್ ಬ್ರೂಸ್ (ತಮಿಳುನಾಡು)

ಇದನ್ನೂ ಓದಿ: Anantkumar Hegde ನಡೆ‌ ನೋಡಿ ಕಾಂಗ್ರೆಸ್ ಚುನಾವಣಾ ತಂತ್ರ ಹಣೆಯಲಿದೆ: ಆರ್.ವಿ.ದೇಶಪಾಂಡೆ

Advertisement

Advertisement

Udayavani is now on Telegram. Click here to join our channel and stay updated with the latest news.

Next