Advertisement

ಕಾಂಗ್ರೆಸ್‌; 24 ಮಾಜಿ ಕಾರ್ಪೊರೇಟರ್‌ಗಳ ಮರು ಸ್ಪರ್ಧೆ

01:26 AM Nov 01, 2019 | mahesh |

ಮಹಾನಗರ: ಕಾಂಗ್ರೆಸ್‌ನ 17 ನಿಕಟಪೂರ್ವ ಹಾಗೂ 7 ಮಾಜಿ ಕಾರ್ಪೊ ರೇಟರ್‌ಗಳಿಗೆ ಈ ಬಾರಿಯ ಮಂಗಳೂರು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ದೊರೆತಿದೆ. ಉಳಿದಂತೆ 36 ಹೊಸ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ.

Advertisement

ಬುಧವಾರ ರಾತ್ರಿ 58 ವಾರ್ಡ್‌ಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಪ್ರಕಟಿಸಿ, 2 ವಾರ್ಡ್‌ಗಳನ್ನು ಕಾಯ್ದಿರಿಸಲಾಗಿತ್ತು. ಗುರು ವಾರ ಬೆಳಗ್ಗೆ ಬಾಕಿ ಉಳಿದಿದ್ದ ದೇರೆ ಬೈಲ್‌ ಉತ್ತರ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಹಾಗೂ ಮಂಗಳಾದೇವಿ ವಾರ್ಡ್‌ನಿಂದ ದಿನೇಶ್‌ ರಾವ್‌ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.

ನಿಕಟಪೂರ್ವ ಕಾರ್ಪೊರೇಟರ್‌ಗಳಾದ ಬಶೀರ್‌ ಅಹಮದ್‌-ಕಾಟಿಪಳ್ಳ ಪೂರ್ವ, ಪ್ರತಿಭಾ ಕುಳಾಯಿ-ಇಡ್ಯಾ ಪಶ್ಚಿಮ, ಉಪ ಮೇಯರ್‌ ಆಗಿದ್ದ ಕೆ. ಮಹಮ್ಮದ್‌-ಕುಂಜ ತ್ತಬೈಲ್‌ ಉತ್ತರದಿಂದ, ಅಶೋಕ್‌ ಕುಮಾರ್‌ ಡಿ.ಕೆ.-ಕದ್ರಿ ದಕ್ಷಿಣದಿಂದ, ಕೇಶವ- ಮರೋಳಿಯಿಂದ, ನವೀನ್‌ ಆರ್‌. ಡಿ’ಸೋಜಾ-ಬೆಂದೂರ್‌ನಿಂದ, ಎ.ಸಿ. ವಿನಯ್‌ರಾಜ್‌-ಕೋರ್ಟ್‌ ವಾರ್ಡ್‌ನಿಂದ, ಮಮತಾ ಶೆಣೈ-ಸೆಂಟ್ರಲ್‌ ಮಾರ್ಕೆ ಟ್‌ನಿಂದ, ಅಬ್ದುಲ್‌ ಲತೀಫ್‌-ಪೋರ್ಟ್‌ ವಾರ್ಡ್‌ನಿಂದ, ಅಬ್ದುಲ್‌ ರವೂಫ್‌-ಮಿಲಾಗ್ರಿಸ್‌ ವಾರ್ಡ್‌ನಿಂದ, ಪ್ರವೀಣ್‌ ಚಂದ್ರ ಆಳ್ವ-ಕಂಕನಾಡಿ, ರತಿ ಕಲಾ-ಬೋಳಾರ ವಾರ್ಡ್‌ನಿಂದ ಮರು ಆಯ್ಕೆ ಅವಕಾಶ ಪಡೆದಿದ್ದಾರೆ. ನಿಕಟಪೂರ್ವ ಕಾರ್ಪೊರೇಟರ್‌-6 ಬಾರಿ ಗೆದ್ದು ಇದೀಗ 7ನೇ ಬಾರಿಗೆ ಲ್ಯಾನ್ಸಿ ಲಾಟ್‌ ಪಿಂಟೋ ಬಿಜೈ ವಾರ್ಡ್‌ನಲ್ಲಿಯೇ ಮತ್ತೆ ಸ್ಪರ್ಧೆ ಅವಕಾಶ ಸಿಕ್ಕಿರುವುದು ವಿಶೇಷ.

ಮಾಜಿ ಕಾರ್ಪೊರೇಟರ್‌ಗಳಾದ ಸವಿತಾ ಶೆಟ್ಟಿ - ಕಾಟಿಪಳ್ಳ ಕೃಷ್ಣಾಪುರದಿಂದ, ಅಶೋಕ್‌ ಶೆಟ್ಟಿ-ಹೊಸಬೆಟ್ಟುವಿನಿಂದ, ಬಿ.ಪದ್ಮ ನಾಭ ಅಮೀನ್‌-ದೇರೆಬೈಲ್‌ ನೈಋತ್ಯ ದಿಂದ, ಕಮಲಾಕ್ಷ ಸಾಲ್ಯಾನ್‌-ಬೋಳೂ ರು ವಿನಿಂದ ಮತ್ತೆ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ.  ಈ ಹಿಂದೆ ಬಿಜೆಪಿ ಕಾರ್ಪೊರೇಟರ್‌ ಆಗಿದ್ದ ಕೆ. ಭಾಸ್ಕರ್‌ ರಾವ್‌ ಅವರು ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಂಟೋನ್ಮೆಂಟ್ ವಾರ್ಡ್‌ನಿಂದ ಅವಕಾಶ ಪಡೆದಿದ್ದಾರೆ.

5 ಮಾಜಿ ಮೇಯರ್‌ಗಳು
ಮಾಜಿ ಮೇಯರ್‌ಗಳಾದ ಎಂ. ಶಶಿಧರ ಹೆಗ್ಡೆ, ಕೆ. ಹರಿನಾಥ್‌, ಭಾಸ್ಕರ್‌ ಕೆ., ಜೆಸಿಂತಾ ವಿಜಯಾ ಆಲ್ಫೆ†ಡ್‌, ಅಬ್ದುಲ್‌ ಅಜೀಜ್‌ ಅವರು ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ. ಇದರಲ್ಲಿ ಈ ಬಾರಿ ಹರಿನಾಥ್‌ ಅವರು 6ನೇ ಬಾರಿ, ಶಶಿಧರ ಹೆಗ್ಡೆ 5ನೇ ಬಾರಿ, ಅಬ್ದುಲ್‌ ಅಜೀಜ್‌ ನಾಲ್ಕನೇ ಬಾರಿ, ಭಾಸ್ಕರ್‌ ಕೆ. ನಾಲ್ಕನೇ ಬಾರಿ, ಜೆಸಿಂತ ವಿಜಯಾ ಆಲ್ಫೆ†ಡ್‌ 5ನೇ ಬಾರಿ ಸ್ಪರ್ಧಿಸುತ್ತಿದ್ದಾರೆ. ಆದರೆ, ಮಾಜಿ ಮೇಯರ್‌ ಕವಿತಾ ಸನಿಲ್‌ ಈ ಬಾರಿ ಸ್ಪರ್ಧೆಗೆ ನಿರಾಸಕ್ತಿ ತೋರಿಸಿದ್ದರಿಂದ ಅವರು ಮರು ಸ್ಪರ್ಧೆ ಮಾಡುತ್ತಿಲ್ಲ. ಮಾಜಿ ಮೇಯರ್‌ ಮಹಾಬಲ ಮಾರ್ಲ ಅವರೂ ಈ ಬಾರಿ ಸ್ಪರ್ಧಿಸುತ್ತಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next