Advertisement

Congress; ವಯನಾಡ್‌ ಜತೆ ಮತ್ತೊಂದು ಕ್ಷೇತ್ರದಲ್ಲಿ ರಾಹುಲ್‌ ಕಣಕ್ಕೆ?

12:50 AM Mar 12, 2024 | Team Udayavani |

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಕೇರಳದ ವಯನಾಡ್‌ ಜೊತೆಗೆ ಮತ್ತೊಂದು ಲೋಕಸಭಾ ಕ್ಷೇತ್ರದಲ್ಲೂ ಸ್ಪರ್ಧಿಸಲಿದ್ದಾರೆಯೇ? ಸೋಮವಾರ ನಡೆದ ಕಾಂಗ್ರೆಸ್‌ ಸಿಇಸಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದ್ದು, ಸದ್ಯದಲ್ಲೇ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಖರ್ಗೆ ನೇತೃತ್ವದಲ್ಲಿ ಭಾರೀ ಚರ್ಚೆ

ರಾಜಸ್ಥಾನ, ಉತ್ತರಾಖಂಡ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಮಾಲೋಚನೆ ನಡೆದಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ ಒಟ್ಟು 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈಗ 2ನೇ ಪಟ್ಟಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಪಕ್ಷದ ಪ್ರಮುಖರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಅಂಬಿಕಾ ಸೋನಿ, ಅಧೀರ್‌ ರಂಜನ್‌ ಚೌಧರಿ, ಟಿ.ಎಸ್‌. ಸಿಂಗ್‌ ದೇವ್‌ ಮತ್ತು ಮೊಹಮ್ಮದ್‌ ಜವೈದ್‌ ಮತ್ತಿತರು ಭಾಗಿಯಾಗಿದ್ದರು.

ಚಿಂದ್ವಾರಾದಿಂದ ಕಮಲ್‌ನಾಥ್‌ ಪುತ್ರ ನಕುಲ್‌ ಸ್ಪರ್ಧೆ?

ಮಧ್ಯಪ್ರದೇಶದ ಚಿಂದ್ವಾರಾ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಮಾಜಿ ಸಿಎಂ ಕಮಲ್‌ನಾಥ್‌ ಪುತ್ರ ನಕುಲ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಿದೆ ಎಂದು ಹೇಳಲಾಗಿದೆ. ಕಮಲ್‌ 9 ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 29 ಕ್ಷೇತ್ರಗಳ ಪೈಕಿ 28ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಚಿಂದ್ವಾರಾವು ಕಾಂಗ್ರೆಸ್‌ ಗೆದ್ದಿದ್ದ ಏಕೈಕ ಕ್ಷೇತ್ರ ವಾಗಿತ್ತು. ಈ ಬಾರಿ ಕಮಲ್‌ನಾಥ್‌ ಭದ್ರಕೋಟೆಗೆ ಲಗ್ಗೆ ಹಾಕಲು ಬಿಜೆಪಿ ಪಣತೊಟ್ಟಿದೆ.

Advertisement

ಮೋದಿ ಕೀ ಗ್ಯಾರಂಟಿಯ ಕಾಲ ಮುಗಿದುಹೋಗಿದೆ: ಜೈರಾಮ್‌

“ಮೋದಿ ಕೀ ಗ್ಯಾರಂಟಿ’ ಎಂದು ಹೇಳುತ್ತಾ ಅವಿರತವಾಗಿ ಎಷ್ಟೇ ಪ್ರಚಾರ ಮಾಡಿದರೂ, ಮೋದಿ ಅವರ ಗ್ಯಾರಂಟಿಯ ಕಾಲ ಮುಗಿದು ಹೋಗಿದೆ ಮತ್ತು ಚುನಾವಣೆ ಗೆಲ್ಲಲು ಅವರು ಏನು ಬೇಕಾದರೂ ಹೇಳುತ್ತಾರೆ ಎನ್ನುವ ಸತ್ಯವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ. ಪ್ರಧಾನಿ ವಿರುದ್ಧ ಟ್ವೀಟರ್‌ನಲ್ಲಿ ವಾಗ್ಧಾಳಿ ನಡೆಸಿರುವ ಅವರು, ಮೋದಿ ಅವರು ದೇಶಾದ್ಯಂತ ಸಂಚರಿ ಸುತ್ತಾ ತಮ್ಮ ಗ್ಯಾರಂಟಿಗಳ ವರ್ಚಸ್ಸನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಹೊರತಾಗಿ ಈಗಾಗಲೇ 10 ವರ್ಷಗಳ ಕಾಲ ಆಡಳಿತದಲ್ಲಿದ್ದೂ ತಮ್ಮ ಅವಧಿಯಲ್ಲಾಗಿರುವ 10 ಗ್ಯಾರಂಟಿಗಳ ಈಡೇರಿಕೆ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದು ಆರೋಪಿಸಿದರು.

ಕುಸ್ತಿಪಟು ಚಂದ್ರಹಾರ್‌ ಪಾಟೀಲ್‌ ಶಿವಸೇನೆ ಉದ್ಧವ್‌ ಬಣ ಸೇರ್ಪಡೆ

ಲೋಕಸಭಾ ಚುನಾವಣೆ ಸಮೀಪಿ ಸುತ್ತಿರುವಂತೆಯೇ, ಮಹಾರಾಷ್ಟ್ರದ ಖ್ಯಾತ ಕುಸ್ತಿಪ‌ ಟು ಚಂದ್ರಹಾರ್‌ ಪಾಟೀಲ್‌ ಸೋಮವಾರ ಶಿವಸೇನೆ ಉದ್ಧವ್‌ ಠಾಕ್ರೆ ಬಣಕ್ಕೆ ಸೇರ್ಪಡೆಗೊಂಡಿ ದ್ದಾರೆ. ಪ್ರತಿಷ್ಠಿತ ಪಾಟೀಲ್‌ರನ್ನು ಉದ್ಧವ್‌ ಹಾಗೂ ರಾವುತ್‌ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಪಾಟೀಲ್‌ರನ್ನು ಸಾಂಗ್ಲಿಯ ಸಂಯೋಜಕರನ್ನಾಗಿ ಉದ್ಧವ್‌ ನೇಮಕ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬರುವ ಲೋಕಸಭಾ ಚುನಾವಣೆಗೆ ಸಾಂಗ್ಲಿ ಕ್ಷೇತ್ರದಿಂದ “ಮಹಾ ವಿಕಾಸ್‌ಆಘಾಡಿ’ ಮೈತ್ರಿಕೂಟದ ಅಭ್ಯರ್ಥಿ ಯಾಗಿ ಕಣಕ್ಕಿಳಿಯಲಿದ್ದಾ ರೆಯೇ ಎಂಬ ಅನುಮಾನ ಸೃಷ್ಟಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next