ಉಡುಪಿ: ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವ ಅನರ್ಹಗೊಳಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಜ್ಜರಕಾಡಿನ ಹುತಾತ್ಮರ ಸ್ಮಾರಕದ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ನಾಯಕರು ಮಾತನಾಡಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಘೋಷಣೆ ಕೂಗುವ ಮೂಲಕ ಕೇಂದ್ರದ ಕ್ರಮವನ್ನು ಖಂಡಿಸಿದರು.
ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರಮುಖರಾದ ಎಂ.ಎ. ಗಪೂರ್, ವೆರೊನಿಕಾ ಕರ್ನೆಲಿಯೋ, ಮುರಳಿ ಶೆಟ್ಟಿ, ಭುಜಂಗ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ಕುಶಾಲ್ ಶೆಟ್ಟಿ, ರಮೇಶ್ ಕಾಂಚನ್, ಪ್ರಸಾದ್ ರಾಜ್ ಕಾಂಚನ್, ಪ್ರಖ್ಯಾತ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ಅಮೃತ್ ಶೆಣೈ, ಸಾಯಿ ರಾಜ್, ನಾಗೇಶ್ ಕುಮಾರ್ ಉದ್ಯಾವರ, ಸುರೇಶ್ ಶೆಟ್ಟಿ ಬನ್ನಂಜೆ, ಸೌರವ್ ಬಲ್ಲಾಳ್, ಸಂಜಯ ಆಚಾರ್ಯ, ಯತೀಶ್ ಕರ್ಕೆರ, ಇಸ್ಮಾಯಿಲ್ ಆತ್ರಾಡಿ, ಕೀರ್ತಿ ಶೆಟ್ಟಿ, ಸತೀಶ್ ಕೊಡವೂರು, ಹಮೀದ್, ಸದಾಶಿವ ಕಟ್ಟಕುಡ್ಡೆ, ಶಶಿಧರ ಶೆಟ್ಟಿ ಎಲ್ಲೂರು, ಸದಾಶಿದ ದೇವಾಡಿಗ, ಗಣೆಶ್ ನೆರ್ಗಿ, ಮಹಾಬಲ ಕುಂದರ್, ಅಬೀಬ್ ಅಲಿ, ವಿಜಯ ಪೂಜಾರಿ, ಜಯಾನಂದ, ಉಪೇಂದ್ರ ಭಾಗವಹಿಸಿದ್ದರು.