Advertisement

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

04:14 PM Feb 13, 2021 | Team Udayavani |

ಬಂಗಾರಪೇಟೆ: ತೈಲಬೆಲೆಗಳನ್ನು ದಿನೇ ದಿನೆ ಏರಿಸುವ ಮೂಲಕ ಸಾಮಾನ್ಯ ವರ್ಗದ ಜನರ ಬದುಕಿಗೆ ಕೊಡಲಿ ಪೆಟ್ಟು ನೀಡುತ್ತಿರುವ ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿದರು.

Advertisement

ಕಾಂಗ್ರೆಸ್‌ ಭವನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖರಸ್ತೆಗಳಲ್ಲಿ ಸಂಚರಿಸಿ ನಂತರ ತಾಲೂಕು ಕಚೇರಿಮುಂದೆ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕೇಂದ್ರ, ರಾಜ್ಯ ಸರ್ಕಾರಗಳು ಸಾಮಾನ್ಯಜನರು ಬಳಸುವ ವಸ್ತುಗಳನ್ನು ಏರಿಕೆ ಮಾಡುವ ಮೂಲಕ ಬರೆ ಎಳೆಯುತ್ತಿದೆ ಎಂದು ದೂರಿದರು.

ಜನರ ಶಾಪಕ್ಕೆ ಗುರಿ: ಶಾಸಕ ಎಸ್‌.ಎನ್‌ .ನಾರಾಯಣಸ್ವಾಮಿ ಮಾತನಾಡಿ, ಪ್ರಧಾನಿ ಮೋದಿ ಎರಡು ಬಾರಿ ಪ್ರಧಾನಿಯಾದರೂ ದೇಶದ ಚಿತ್ರಣಮಾತ್ರ ಬದಲಾಗಿಲ್ಲ. ಮತ್ತೆ 60 ವರ್ಷಗಳ ಹಿಂದೆಹೋಗಿದೆ. ದುರಾಡಳಿತ ನೀಡಿ ಎಲ್ಲಾ ವರ್ಗದ ಜನರ ಶಾಪಕ್ಕೆ ‌ಗುರಿಯಾಗಿದ್ದಾರೆಂದು ಟೀಕಿಸಿದರು.

ಅಚ್ಚೇ ದಿನ್‌ ಬರಲಿಲ್ಲ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶಕ್ಕೆ ಅಚ್ಚೇ ದಿನ್‌ ಬರುತ್ತದೆ ಎಂದು ಹೇಳಿದ್ದ ಮೋದಿಯವರು ಪ್ರಧಾನಿಯಾಗಿ 6ವರ್ಷಗಳಾದರೂ ಜನರಿಗೆ ಅಚ್ಚೇ ದಿನ್‌ ಬಂದಿಲ್ಲ.ಬದಲಾಗಿ ಇಂಧನ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸಿ ಬಡವರು ನೆಮ್ಮೆದಿಯಾಗಿ ಬದುಕಲು ಅಡ್ಡಿಯಾಗಿದ್ದಾರೆಂದು ಆರೋಪಿಸಿದರು. ಪ್ರಧಾನಿ ಮೋದಿ ಸಾಧನೆ ಏನೂ ಇಲ್ಲ. ಬರೀ ಮಾತಿನಲ್ಲೇ ಬಡವರ ಮೂಗಿಗೆ ಬೆಣ್ಣೆ ಸವರುವರು ಎಂದು ಟೀಕಿಸಿದರು.ಅಯೋಧ್ಯೆಯಲ್ಲಿರಾಮಮಂದಿರ ಕಟ್ಟಲು ಮುಂದಾಗಿರುವ ಬಿಜೆಪಿಸರ್ಕಾರ ಮೊದಲು ಕ್ಷೇತ್ರದಲ್ಲಿರುವ ಕೋದಂಡರಾಮ ದೇವಾಲಯ ನಿರ್ಮಾಣಕ್ಕೆ ಹಣ ನೀಡಲಿ ಎಂದು ತಿರುಗೇಟು ನೀಡಿದರು. ಗ್ರಾಪಂ ಚುನಾವಣೆಯಲ್ಲಿ ಮತದಾರರು ಬಿಜೆಪಿ ವಿರುದ್ಧ ತೀರ್ಪು ನೀಡಿದ್ದಾರೆ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬರುವುದು ಖಚಿತ ಎಂದರು.

ಈ ವೇಳೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಪಾರ್ಥಸಾರಥಿ, ಕೆ.ವಿ.ನಾಗರಾಜ್‌, ಪುರಸಭೆ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ಕಪಾಲಿಶಂಕರ್‌, ಪ್ರಭಾಕರ್‌, ವೆಂಕಟೇಶ್‌, ಸಾಧಿಕ್‌, ರಾಜನ್‌, ಮುಖಂಡರಾದ ಆದಿನಾರಾಯಣ, ನಂಜಪ್ಪ,ರಂಗರಾಮಯ್ಯ, ಚಿನ್ನಿವೆಂಕಟೇಶ್‌, ಡಾ. ಮಮತಾರೆಡ್ಡಿ ಇದ್ದರು.

Advertisement

ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರ ಸಹ ಜನವಿರೋಧಿ ಸರ್ಕಾರ ವಾಗಿದೆ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ಧಾಳಿ ನಡೆಸಿದರು. ಹಿಂದಿನ ಸರ್ಕಾರ ಕ್ಷೇತ್ರಕ್ಕೆ ನೀಡಿದ್ದ ಅನುದಾನ ವಾಪಸ್‌ ಪಡೆದು ತಾರತಮ್ಯ ಮಾಡುತ್ತಿದ್ದಾರೆ. ಎಸ್‌.ಎನ್‌.ನಾರಾಯಣಸ್ವಾಮಿ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next