Advertisement

ಸರ್ಕಾರಗಳಿಂದ ಜನ ವಿರೋಧಿ ನೀತಿ: ಕಾಂಗ್ರೆಸ್‌ ಆಕ್ರೋಶ

03:08 PM Feb 13, 2021 | Team Udayavani |

ನಂಜನಗೂಡು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಕಾಯ್ದೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ನಂಜನಗೂಡಿನಲ್ಲಿ ಕಾಂಗ್ರೆಸ್‌ನಿಂದ ಬೃಹತ್‌ ಪ್ರತಿಭಟನೆ ನಡೆಯಿತು.

Advertisement

ವರುಣಾ ಹಾಗೂ ನಂಜನಗೂಡು ಕಾಂಗ್ರೆಸ್‌ ಘಟಕಗಳು ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅವರ ನೇತೃತ್ವದಲ್ಲಿ ಶುಕ್ರವಾರ ತಾಲೂಕು ಕಚೇ ರಿಗೆ ಆಗಮಿಸಿ ಪ್ರತಿಭಟನೆ ಕೈಗೊಂಡರು. ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಮೂರು ಕೃಷಿ ಕಾನೂನುಗಳು ಬಡ ರೈತರ ಪಾಲಿಗೆ ಮಾರಣಾಂತಿಕ. ಬಿಜೆಪಿ ಸರ್ಕಾರ ಕಾರ್ಪೊರೇಟರ್‌ಗಳ ಕೈಗೊಂಬೆಯಾಗಿದೆ. ಆಡಳಿತದಲ್ಲಿರುವ ಸರ್ಕಾರಗಳ ನೀತಿಗಳೇ ಅಗತ್ಯ ವಸ್ತಗಳ ಬೆಲೆ ಹೆಚ್ಚಳಕ್ಕೆ ಕಾರಣ. ಈಗಾಗಲೇ ಕೊರೊನಾದಿಂದ ಸಂಕಷ್ಟ ಅನುಭವಿಸಿರುವ ಜನ, ಈಗ ಬೆಲೆ ಏರಿಕೆ ಬಿಸಿ ಅನುಭವಿಸುವಂತಾಗಿದೆ ಎಂದರು.

ರೈತರ ಪಾಲಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜಧಾನಿ ಹೆಬ್ಟಾಗಿಲಿನಲ್ಲಿ ಅನೆಕ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಿ ಅನ್ನದಾತರನ್ನು ಮಾತನಾಡಿಸುವ ಕನಿಷ್ಠ ಸೌಜನ್ಯವನ್ನೂ ತೋರಿಲ್ಲ ಎಂದು ದೂರಿದರು. ಕಾರ್ಪೋರೆಟ್‌ ಕಂಪನಿಗಳ ಅಹವಾಲನ್ನಾದರೆ ಕ್ಷಣಾರ್ಧಲ್ಲಿ ಆಲಿಸುವ ಪ್ರಧಾನಿಗೆ ರೈತರ ಗೋಳು ಅರ್ಥವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು. ಕೃಷಿ ನೀತಿಗೆ ಮಾರಕವಾಗುವ ಈ ಕಾನೂನುಗಳನ್ನು ವಾಪಸ್‌ ಪಡೆಯುವವರಿಗೂ ಕಾಂಗ್ರೆಸ್‌ ಎಲ್ಲಡೆ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ. ಗ್ರಾಮಗಳಲ್ಲಿಜನಜಾಗೃತಿ ಸಮಾವೇಶ ನಡೆಸಿ ಬಿ ಜೆಪಿಯ ಬಣ್ಣ ಬಯಲು ಮಾಡುವುದಾಗಿ ತಿಳಿಸಿದರು.

ಇಂದಿನ ಪಾದಯಾತ್ರೆಗೆ ತಡೆಯೊಡ್ಡಿದ್ದು ಜಿಲ್ಲಾಡಳಿತದ ಸರ್ವಾಧಿಕಾರಕ್ಕೆ ಸಾಕ್ಷಿ. ಕೆಂಪು ಕೋಟೆ ಮೇಲೆ ಖಲಿಸ್ಥಾನ ಹಾರಿಸಿದವರು ರೈತರಲ್ಲ. ರೈತ ಚಳವಳಿಗೆ ಮಸಿ ಬಳಿಯಲು ಬಿಜೆಪಿ ನಡೆಸಿದ ಹುನ್ನಾರ ಎಂದು ದೂರಿದರು.

ಮಾಜಿ ಶಾಸಕ ಕಳಲೆ ಕೇಶವಮುರ್ತಿ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಸರ್ಕಾರದ ಮಾರಕ ನೀತಿ ಜಾರಿಯಾದಲ್ಲಿಎಪಿಎಂಸಿ ಗಳು ನಮ್ಮಿಂದ ಕಣ್ಮರೆಯಾಗುತ್ತವೆ. ಇದಕ್ಕೆ ಜನ ಅವಕಾಶ ನೀಡಬಾರದೆಂದರು.

Advertisement

ನಂತರ ಸ್ಥಳಕ್ಕೆ ಆಗಮಿಸಿದ ತಾಲೂಕು ದಂಡಾಧಿಕಾರಿ ಮೋಹನ ಕುಮಾರಿ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್‌.ಸಿ.ಬಸವರಾಜು, ತಗಡೂರು ಬ್ಲಾಕ್‌ಕಾಂಗ್ರೆಸ್‌ ಅಧ್ಯಕ್ಷ ಹಾಡ್ಯರಂಗಸ್ವಾಮಿ, ನಂಜನ ಗೂಡು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ಎಂ.ಶಂಕರ್‌, ಕುರಹಟ್ಟಿಮಹೇಶ್‌, ಹೆಜ್ಜಿಗೆ ಇಂಧನ್‌ಬಾಬು, ಶ್ರೀಕಂಠನಾಯಕ,ಕಾಂಗ್ರೆಸ್‌ ಮುಖಂಡರಾದ ಗಂಗಾಧರ್‌, ಗಾಯಿತ್ರಿಮೋಹನ್‌, ಜಿಪಂ ಮಾಜಿ ಸದಸ್ಯ ಕೆ.ಮಾರುತಿ,ತಾ.ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ, ಬೊಕ್ಕಹಳ್ಳಿ ಲಿಂಗಯ್ಯ, ತಾಪಂ ಸದಸ್ಯೆ ದೇವನೂರು ಮಹ ದೇವಮ್ಮ, ಲಕ್ಷ್ಮೀ ಬಿ.ಪಿ.ಮಹ ದೇವು, ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next