Advertisement
ಈ ಮೊದಲು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಈ ಯೋಜನೆ ಯುವಕರ ಭವಿಷ್ಯವನ್ನು ನಾಶ ಮಾಡಲು ಕೇಂದ್ರ ನಡೆಸಿದ ಹುನ್ನಾರವಾಗಿದೆ. 17 ವರ್ಷ ದಾಟಿದ ಅಪ್ರಾಪ್ತರಿಗೆ ಸೇನೆಯಲ್ಲಿ ಹುದ್ದೆ ಕೊಡುತ್ತೇವೆ ಎನ್ನುವುದೇ ಅವೈಜ್ಞಾನಿಕವಾಗಿದೆ. ಅಗ್ನಿಪಥ್ ಹೆಸರೇ ವಿಚಿತ್ರವಾಗಿದ್ದು, ಯುವಕರನ್ನು ಬೆಂಕಿಗೆ ತಳ್ಳುತ್ತೇವೆ ಎನ್ನುವ ಸಂದೇಶವನ್ನು ಕೇಂದ್ರ ಪ್ರತಿಪಾದಿಸಲು ಮುಂದಾಗಿದೆ. ಇಂತಹ ಯುವಜನ ವಿರೋಧಿ ಯೋಜನೆಯನ್ನು ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಖಂಡಿಸುವ ಅಗತ್ಯವಿದೆ. ಯೋಜನೆಯನ್ನು ಹಿಂದಕ್ಕೆ ಪಡೆಯುವಂತೆ ಸಹಸ್ರಾರು ಜನರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರಜಾಪ್ರಭುತ್ವದ ಕತ್ತುಹಿಸುಕುವ ಕೆಲಸ ಮಾಡುತ್ತಿದ್ದು, ರಾಷ್ಟ್ರಾದ್ಯಂತ ಅವರು ಅಧಿಕಾರದಿಂದ ಕೆಳಗೆ ಇಳಿದರೆ ಸಾಕು ಎಂದು ಪ್ರಾರ್ಥಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
Related Articles
Advertisement
ಸಭೆಯನ್ನು ಉದ್ದೇಶಿಸಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ಎನ್‌ಎಸ್‌ಯುಐ ಅಧ್ಯಕ್ಷ ಮನೋಜ್ ಕುಗ್ವೆ ಇನ್ನಿತರರು ಮಾತನಾಡಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶಬಾಬು, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಮಧಮಾಲತಿ, ಸುಮಂಗಲ, ಪ್ರಮುಖರಾದ ರಫೀಕ್ ಬಾಬಾಜಾನ್, ಮಹಾಬಲ ಕೌತಿ, ರವಿಕುಮಾರ್ ಎಚ್.ಎಂ., ಕೆ.ಸಿದ್ದಪ್ಪ, ಎಲ್.ಚಂದ್ರಪ್ಪ, ಅನ್ವರ್ ಭಾಷಾ, ಆನಂದ್ ಭೀಮನೇರಿ, ಸಂತೋಷ್, ಕಿರಣ್ ದೊಡ್ಮನೆ, ತುಕಾರಾಮ್ ಸಿರವಾಳ ಇನ್ನಿತರರು ಹಾಜರಿದ್ದರು.