Advertisement

ಅಗ್ನಿಪಥ್‌ ವಿರುದ್ಧ  ಕಾಂಗ್ರೆಸ್‌ ಆಕ್ರೋಶ

04:55 PM Jun 29, 2022 | Team Udayavani |

ಮಳವಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ನೀತಿ ನಿಯಮದಿಂದ ದೇಶದ ಸೈನ್ಯದ ಬಲ ಕುಗ್ಗುತ್ತದೆ. ಕೇವಲ ನಾಲ್ಕು ವರ್ಷ ಯುವಶಕ್ತಿ ಯನ್ನು ಬಳಸಿಕೊಂಡು ನಂತರ ವಾಪಸ್‌ ಮನೆಗೆ ಕಳಿಸುವುದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಆತಂಕ ವ್ಯಕ್ತಪಡಿಸಿದರು.

Advertisement

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್‌ ಯೋಜನೆ, ರಾಜ್ಯದ ಪಠ್ಯದಲ್ಲಿನ ಲೋಪದೋಷ ಹಾಗೂ ಐಟಿ, ಬಿಟಿ ಸಂಸ್ಥೆಗಳನ್ನು ದುರುಪಯೋಗ ‌ಪಡಿಸಿಕೊಳ್ಳುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಬೀದಿಪಾಲು ಮಾಡುವ ಹುನ್ನಾರ: 10 ಲಕ್ಷ ಉದ್ಯೋಗ ನೀಡುತ್ತೇವೆ ಎಂದು ಅಗ್ನಿಪಥ್‌ ಯೋಜನೆ ಮೂಲಕ ನಾಲ್ಕು ವರ್ಷ ಸೇನೆಯಲ್ಲಿ ದುಡಿಸಿ ಕೊಂಡು ನಂತರ ಲಕ್ಷಾಂತರ ಯುವಕರನ್ನು ಬೀದಿ ಪಾಲು ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು. ಕಿರುಕುಳ: ಕೇಂದ್ರ ಸರ್ಕಾರದ ದುರಾಡಳಿತದ ಧ್ವನಿ ಅಡಗಿಸುವ ಉದ್ದೇಶದಿಂದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ  ಹಾಗೂ ರಾಹುಲ್‌ ಗಾಂಧಿ ವಿರುದ್ಧ ಇಡಿ, ಐಟಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದೆ ಎಂದು ಕಿಡಿಕಾರಿದರು.

ಚಕ್ರತೀರ್ಥರನ್ನು ಬಂಧಿಸಿ: ರಾಜ್ಯ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ಚಕ್ರತೀರ್ಥ ಎಂಬವನ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌, ವಿಶ್ವಗುರು ಬಸವಣ್ಣ, ರಾಷ್ಟ್ರಕವಿ ಕುವೆಂಪು, ಭಕ್ತ ಕನಕದಾಸರು ಸೇರಿದಂತೆ ಹಲವು ಮಹಾನ್‌ ನಾಯಕರಿಗೆ ಅವಮಾನ ಮಾಡಿರುವುದು ಸರಿಯಲ್ಲ, ನಾಡಪ್ರಭು ಹಾಗೂ ನಾಡ ಧ್ವಜಕ್ಕೆ ಅವಮಾನ ಮಾಡಿರುವ ಚಕ್ರತೀರ್ಥನನ್ನು ಕೂಡಲೇ ಬಂಧಿ ಸಬೇಕು ಎಂದು ಆಗ್ರಹಿಸಿದರು.

ರಸ್ತೆ ತಡೆ: ಪಟ್ಟಣದ ಕಾಂಗ್ರೆಸ್‌ ಕಚೇರಿಯಿಂದ ಮೆರ ವಣಿಗೆಯಲ್ಲಿ ಸಾಗಿದ ನೂರಾರು ಕಾರ್ಯಕರ್ತರು ಅನಂತ್‌ ರಾಂ ಸರ್ಕಲ್‌ ಬಳಿ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿ ರಸ್ತೆ ತಡೆ ನಡೆಸಿದರು.

Advertisement

ನಂತರ ತಾಲೂಕು ಕಚೇರಿಗೆ ತೆರಳಿ ಶಿರಸ್ತೇದಾರ್‌ ಕುಮಾರ್‌ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಕಾಂಗ್ರೆಸ್‌ ಉಸ್ತು ವಾರಿ ಅಜ್ಜಹಳ್ಳಿ ರಾಮಕೃಷ್ಣ, ಕಾಂಗ್ರೆಸ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಕೆ.ಜೆ.ದೇವರಾಜು, ಎಸ್‌. ಪಿ. ಸುಂದರ್‌ ರಾಜ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ಕೆ.ಎಸ್‌. ದ್ಯಾಪೇಗೌಡ, ಪುರಸಭೆ ಸದಸ್ಯರಾದ ಎಂ. ಎನ್‌.ಶಿವಸ್ವಾಮಿ, ರಾಜಶೇಖರ್‌, ತಾಪಂ ಮಾಜಿ ಅಧ್ಯಕ್ಷರಾದ ಆರ್‌.ಎನ್‌.ವಿಶ್ವಾಸ್‌, ವಿ.ಪಿ. ನಾ ಗೇಶ್‌, ಪುಟ್ಟಸ್ವಾಮಿ, ಚಿಕ್ಕಲಿಂಗಣ್ಣ, ತಾಲೂಕು ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಹುಸ್ಕೂರು ಎಚ್‌. ಕೆ.ಕೃಷ್ಣಮೂರ್ತಿ, ಮುಖಂಡರಾದ ಎಂ. ಬಸವರಾಜು, ಲಿಂಗರಾಜು, ಪ್ರಕಾಶ್‌, ರಾಮಣ್ಣ, ವೇದ ಮೂರ್ತಿ, ಬಿ.ಮಹದೇವು ಉಪಸ್ಥಿತರಿದ್ದರು.

ಯೋಧರಿಗೆ ಅವಮಾನ : ದೇಶದ ಗಡಿ ಕಾಯುವ ಸೈನಿಕರ ಹಿತ ಕಾಪಾಡುವ ಬದಲು ಅವರನ್ನು ಕೇವಲ ನಾಲ್ಕು ವರ್ಷ ಬಳಸಿಕೊಂಡು ಅವಮಾನಿಸಲು ಹೊರಟಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೇರಿದಂತೆ ಹಲವು ಸುಳ್ಳು ಭರವಸೆಗಳೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದಲ್ಲಿನ ಉದ್ಯೋಗಾವಕಾಶಗಳನ್ನು ಹಂತ-ಹಂತವಾಗಿ ನಾಶ ಮಾಡುತ್ತಿದ್ದಾರೆಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next