Advertisement

ಪ್ರಧಾನಿ ಮೋದಿಯಿಂದ ಮಾರಕ ಆಡಳಿತ: ಸೊರಕೆ

11:51 PM Nov 14, 2019 | Team Udayavani |

ಉಡುಪಿ: ಮಾಜಿ ಪ್ರಧಾನಿ ಯಾಗಿದ್ದ ಜವಾಹರಲಾಲ್‌ ನೆಹರೂ ಅವರು ದೇಶಕ್ಕೆ ಸಮರ್ಥ ನಾಯಕತ್ವ ವನ್ನು ಕೊಟ್ಟು ಮುಂಚೂಣಿಗೆ ತಂದಿದ್ದರು. ಆದರೆ ಈಗ ದೇಶಕ್ಕೆ ಮಾರಕವಾಗುವ ಆಡಳಿತ ವ್ಯವಸ್ಥೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ನಡೆಯುತ್ತಿದೆ ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಆರೋಪಿಸಿದರು.

Advertisement

ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಅಜ್ಜರಕಾಡು ಭುಜಂಗ ಪಾರ್ಕ್‌ ಬಳಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

2014ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿಯ ವರು ನೀಡಿದ ಆಶ್ವಾಸನೆಗಳಲ್ಲಿ ಯಾವುದೂ ಕೂಡ ಈಡೇರಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಬ್ಯಾಂಕ್‌ಗಳ ವಿಲೀನ ಮಾಡುವ ಮೂಲಕ ಹೆಸರೇ ಇಲ್ಲದಂತೆ ಮಾಡಲಾಗಿದೆ. ಜಿಡಿಪಿ ಮಟ್ಟ ಕುಸಿದಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಬಡ ಜನರ ಏಳಿಗೆಗಾಗಿ ಯಾವ ಕೆಲಸವೂ ನಡೆಯುತ್ತಿಲ್ಲ. ರೈತರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ; ಸಣ್ಣ ಕೈಗಾರಿಕೆಗಳು ನಿರ್ಮೂಲನೆಯಾಗುತ್ತಿವೆ. ಕೇಂದ್ರ ಸರಕಾರ ಇಡಿ, ಐಟಿ, ಸಿಬಿಐಗಳ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ವಿಪಕ್ಷ ಸರಕಾರವನ್ನು ನಿರ್ಮೂಲನೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಭಾರತದಲ್ಲಿ 93ನೇ ಸ್ಥಾನದಲ್ಲಿದ್ದ ಹಸಿವಿನ ಪ್ರಮಾಣ ಇಂದು 102ಕ್ಕೆ ತಲುಪಿದೆ. ನಾಪತ್ತೆಯಾದ ಮೀನುಗಾರರ ಪ್ರಕರಣವೂ ಮುಚ್ಚಿಹೋಗಿದ್ದು, ಮೀನುಗಾರಿಕೆಯೂ ಸಂಕಷ್ಟದ ಸ್ಥಿತಿಯಲ್ಲಿದೆ ಎಂದರು.

ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ಸುಳ್ಳು ಭರವಸೆಗಳ ಮೂಲಕ ಜನರನ್ನು ನಂಬಿಸಿ ಮೋದಿ ಸರಕಾರ ಆಡಳಿತಕ್ಕೆ ಬಂದಿದೆ. ಆದರೆ ಈಗ ಮೋದಿ ಸರಕಾರ ಜನರಿಗೆ ಎಷ್ಟು ಹೊಡೆತ ನೀಡಿದೆ ಎಂಬುವುದು ಅರ್ಥವಾಗುತ್ತಿದೆ. ಮೋದಿ ಒಬ್ಬರನ್ನು ಬಿಟ್ಟರೆ ಉಳಿದವರೆಲ್ಲ ಕಷ್ಟದಲ್ಲಿದ್ದಾರೆ. ಸಬ್ಸಿಡಿ ಹಣ ಸಹಿತ ಯಾವುದೇ ಕಾಮಗಾರಿಗಳಿಗೂ ಹಣ ಬಿಡುಗಡೆಯಾಗುತ್ತಿಲ್ಲ. ಈಗಿನ ಸಂಸದರು, ಶಾಸಕರು ಒಂದು ರೂ. ಕೂಡ ಅನು ದಾನ ನೀಡಿಲ್ಲ. ಕಾಂಗ್ರೆಸ್‌ ಆಡಳಿತದಲ್ಲಿ ಕೈಗೊಳ್ಳಲಾದ ಕಾಮಗಾರಿಗಳಷ್ಟೇ ಈಗ ನಡೆಯುತ್ತಿವೆ ಎಂದರು.

ಮಾಜಿ ಶಾಸಕ ಯು.ಆರ್‌.ಸಭಾಪತಿ, ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಕೆಪಿಸಿಸಿ ಸದಸ್ಯ ಪಿ.ವಿ. ಮೋಹನ್‌, ಪ್ರಮುಖರಾದ ಎಂ.ಎ. ಗಫ‌ೂರ್‌, ನೀರೆಕೃಷ್ಣ ಶೆಟ್ಟಿ, ವೆರೋನಿಕಾ ಕರ್ನೇಲಿಯೊ, ಸರಸು ಡಿ.ಬಂಗೇರ, ಗೀತಾ ವಾಗೆÛ, ಬಿ. ನರಸಿಂಹ ಮೂರ್ತಿ, ಭಾಸ್ಕರ ರಾವ್‌ ಕಿದಿಯೂರು, ಹಿರಿಯಣ್ಣ, ಡಾ| ಸುನೀತಾ ಶೆಟ್ಟಿ, ಶಬ್ಬಿರ್‌ ಅಹಮ್ಮದ್‌, ಸತೀಶ್‌ ಅಮೀನ್‌ ಪಡುಕೆರೆ, ಪ್ರಖ್ಯಾತ್‌ ಶೆಟ್ಟಿ, ಜ್ಯೋತಿ ಹೆಬ್ಟಾರ್‌, ಕೀರ್ತಿ ಶೆಟ್ಟಿ, ಹರೀಶ್‌ ಕಿಣಿ, ರಮೇಶ್‌ ಕಾಂಚನ್‌, ದಿನೇಶ್‌ ಪುತ್ರನ್‌, ಗಣೇಶ್‌ ನೆರ್ಗಿ, ಅಮೃತಾ ಕೃಷ್ಣಮೂರ್ತಿ, ಹರಿಪ್ರಸಾದ್‌, ಚಂದ್ರಿಕಾ ಶೆಟ್ಟಿ, ಬಾಲಕೃಷ್ಣ ಪೂಜಾರಿ, ಮಂಜುನಾಥ ಪೂಜಾರಿ, ಕಿಶೋರ್‌ ಎರ್ಮಾಳು, ಯತೀಶ್‌ ಕರ್ಕೇರ, ಶೇಖರ ಮಡಿವಾಳ, ನಾಗೇಶ್‌ ಉದ್ಯಾವರ, ಇಸ್ಮಾಯಿಲ್‌ ಆತ್ರಾಡಿ, ಸುಧಾಕರ ಕೋಟ್ಯಾನ್‌, ಪ್ರವೀಣ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್‌ ಕಚೇರಿಯಿಂದ ಭುಜಂಗ ಪಾರ್ಕ್‌ವರೆಗೆ ಪ್ರತಿಭಟನ ಮೆರವಣಿಗೆ ನಡೆಯಿತು.

Advertisement

ಯುವಕರು ಬೀದಿಗೆ
ಹಿಂದುತ್ವ ಹಾಗೂ ಮೋದಿ ಮಂತ್ರದಿಂದಾಗಿ ಇಂದು ವಿದ್ಯಾಭ್ಯಾಸ ಪಡೆದ ಯುವಕರೆಲ್ಲ ಬೀದಿಗೆ ಬಂದಿದ್ದಾರೆ. ಭಾರತಕ್ಕಿಂತ ವೇಗವಾಗಿ ನೇಪಾಳ, ಬಾಂಗ್ಲಾದೇಶದಂತಹ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿವೆ. ನಮೋ ಎಂದರೆ, ನಮಗೆ ಮೋಸ ಎಂದಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಆಡಳಿತದಲ್ಲಿ ಸಂಪೂರ್ಣ ವಿಫ‌ಲವಾಗಿದೆ. ಕಾಂಗ್ರೆಸ್‌ ಪಕ್ಷದಿಂದ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಿದೆ ಎಂದು ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next