ಹೊಸದಿಲ್ಲಿ: ಅದಾನಿ ಗ್ರೂಪ್ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್ ವರದಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೋಮವಾರ ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ.
Advertisement
ಎಲ್‌ಐಸಿ, ಎಸ್‌ಬಿಐನ ಪ್ರಮುಖ ಕಚೇರಿಗಳ ಮುಂದೆ ಪಕ್ಷದ ಮುಖಂಡರು ಧರಣಿ ನಡೆಸಲು ತೀರ್ಮಾನಿಸಿದ್ದಾರೆ. ಅದಕ್ಕೆ ಪೂರಕವಾಗಿ ಕಾಂಗ್ರೆಸ್‌ನ ಸಂಸದರು ಸಂಸತ್ ಭವನದ ಮುಂಭಾಗದಲ್ಲಿ ಇರುವ ಮಹಾತ್ಮಾ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಕೂಡ ಧರಣಿ ನಡೆಸಲಿದ್ದಾರೆ. ಇದೇ ವೇಳೆ ರವಿವಾರ ಮಾತನಾಡಿದ ಸಂಸದ ಜೈರಾಮ್ ರಮೇಶ್ ಹಾಲಿ ಬೆಳವಣಿಗೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವೇ ಪ್ರಶ್ನಾರ್ಹ ಎಂದರು.