Advertisement

ಸೋನಿಯಾ ವಿಚಾರಣೆ ಪ್ರಶ್ನಿಸಿ ಕಾಂಗ್ರೆಸ್‌ ಪ್ರತಿಭಟನೆ

05:39 PM Jul 23, 2022 | Team Udayavani |

ಹಾಸನ: ಕಾಂಗ್ರೆಸ್‌ ನಾಯಕಿ ಸೋನಿಯಾಗಾಂಧಿ ಅವರನ್ನು ಇಡಿ ಮೂಲಕ ವಿಚಾರಣೆಗೆ ಒಳಪಡಿಸಿರು ವುದನ್ನು ಖಂಡಿಸಿ ಹಾಸನದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ರಸ್ತೆ ಮಧ್ಯೆಯೇ ಪ್ರತಿಭಟನೆ ಮಾಡಿ ನಂತರ ಮುಖ್ಯ ಅಂಚೆ ಕಚೇರಿಗೆ ಮುತ್ತಿಗೆ ಹಾಕುವಾಗ ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ಒಂದು ಬಸ್‌ ಮತ್ತು ಎರಡುಟೆಂಪೊ ಮೂಲಕ ಮೂರು ವಾಹನದಲ್ಲಿ ನೂರಾರು ಜನರನ್ನು ಕರೆ ದೊಯ್ದರು.

Advertisement

ನಗರದ ಬಿ.ಎಂ. ರಸ್ತೆಯಲ್ಲಿರುವ ಕಾಂಗ್ರೆಸ್‌ ಜಿಲ್ಲಾ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್‌.ಆರ್‌.ವೃತ್ತದ ಮೂಲಕ ನಗರ ಬಸ್‌ ನಿಲ್ದಾಣ ಬಳಿಇರುವ ಪ್ರಧಾನ ಅಂಚೆ ಕಚೇರಿ ಮುಂದೆರಸ್ತೆ ಮಧ್ಯೆ ಜಮಾಯಿಸಿ ಬಹಿರಂಗಪ್ರತಿಭಟನಾ ಭಾಷಣ ಮೂಲಕ ಬಿಜೆಪಿ ನಡೆಯನ್ನು ಖಂಡಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌: ಕಾಂಗ್ರೆಸ್‌ ಪಕ್ಷದ ಮಾಜಿ ಸಚಿವ ಶಿವಶಂಕರ್‌ ರೆಡ್ಡಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ ಸಿಕ್ಕಿ ಇದೀಗ ಅಮೃತ ಮಹೋತ್ಸವ ಸಂಭ್ರಮಆಚರಣೆ ಮಾಡಲಾಗುತ್ತಿದ್ದು, ಈ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು ಯಾರುಎಂದು ಅವಲೋಕನ ಮಾಡಿದಾಗ ಕಾಂಗ್ರೆಸ್‌ನ ಹೋರಾಟ ಕೂಡ ಸೇರಿದೆ.

ನೆಹರು ಅವರು ಮೊದಲ ಪ್ರಧಾನಿ ಆದ ಮೇಲೆ ಅನೇಕ ಸುಧಾರಣೆ ಕೆಲಸ ಮಾಡಿದ್ದಾರೆ. ಪ್ರಸ್ತುತದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹತ್ತಿಕ್ಕುವ ಕೆಲಸವನ್ನು ದೇಶದ ಪ್ರಧಾನಿಮಾಡುತ್ತಿದ್ದಾರೆ. ನ್ಯಾಷನಲ್‌ ಹೆರಾಲ್ಡ್‌ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಸೋನಿಯಾ ಗಾಂಧಿ ವಿಚಾರಣೆ ನಡೆಸುತ್ತಿದ್ದು, ಗುರುವಾರ ಕಾಂಗ್ರೆಸ್‌ನಾಯಕಿ ಸೋನಿಯಾ ಗಾಂಧಿ ವಿಚಾರಣೆ ಆರಂಭಿಸಿದೆ.

ತನಿಖೆ ಸಂಸ್ಥೆ ದುರ್ಬಳಕೆ ಆರೋಪ: ಬಿಜೆಪಿ ದುರುದ್ದೇಶದ ರಾಜಕಾರಣ ಮಾಡುತ್ತಿದ್ದು ಅಧಿಕಾರ ಹಾಗೂ ತನಿಖಾಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆಎಂದು ಆರೋಪಿಸಿ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.

Advertisement

ದೇಶದ ಎಲ್ಲೆಡೆ ಸೋನಿಯಾ ಬೆಂಬಲಿಸಿ ಕಾಂಗ್ರೆಸ್‌ ಕಾರ್ಯಕರ್ತರು, ಬೆಂಬಲಿಗರು ನಾಮಫ‌ಲಕಹಿಡಿದು ಬೀದಿಗಿಳಿದಿದ್ದಾರೆ. ಇಡಿ ವಿಚಾರಣೆ, ಹಗರಣದಲ್ಲಿ ಕೇಂದ್ರ ಸರ್ಕಾರದ ನಡೆಸರಿಯಲ್ಲ ಕೂಡಲೇ ಸೋನಿಯಾ ಗಾಂಧಿವಿಚಾರಣೆ ನಿಲ್ಲಿಸದಿದ್ದರೇ ಮುಂದಿನದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರಾದ ಎಚ್‌.ಕೆ. ಜವರೇಗೌಡ, ಎಚ್‌.ಪಿ. ಮೋಹನ್‌, ಎಚ್‌.ಕೆ. ಮಹೇಶ್‌,ದೇವರಾಜೇಗೌಡ, ಬನವಾಸೆ ರಂಗಸ್ವಾಮಿ,ಬಾಗೂರು ಮಂಜೇಗೌಡ, ರಂಗಸ್ವಾಮಿ, ತಾರಾಚಂದನ್‌, ಶಿವಪ್ಪ, ಲಕ್ಷ್ಮಣ್‌,ಗೊರೂರು ರಂಜಿತ್‌, ವಿನಯ್‌ ಗಾಂಧಿ,ಶೇಷೇಗೌಡ, ರಾಘವೇಂದ್ರ, ಕೆಲವತ್ತಿಸೋಮಶೇಖರ್‌ ಸೇರಿದಂತೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next