Advertisement

ಕೈ ಅಧ್ಯಕ್ಷ ಚುನಾವಣೆ: ಕಣಕ್ಕೆ ಇಳಿಯಲಿದ್ದಾರೆ ತಿವಾರಿ, ಕಮಲ್‌

08:51 PM Sep 22, 2022 | Team Udayavani |

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಗೆ ವೇಳಾ ಪಟ್ಟಿ ಗುರುವಾರ ಪ್ರಕಟವಾಗಿದೆ. ಅದಕ್ಕೆ ಪೂರಕವಾಗಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೆ. ಹೊಸತಾಗಿ ಸ್ಪರ್ಧೆಗೆ ಮುಂದಾಗಿರುವವರಲ್ಲಿ ಕಮಲ್‌ನಾಥ್‌, ಮನೀಶ್‌ ತಿವಾರಿ ಸೇರಿದ್ದಾರೆ.

Advertisement

ಹಿಂದಿನ ಸಂದರ್ಭದಲ್ಲಿ ಕಮಲ್‌ನಾಥ್‌ ಸ್ಪರ್ಧೆಗೆ ಮನಸ್ಸು ಮಾಡಿರಲಿಲ್ಲ. ಆದರೆ, ಬದಲಾಗಿರುವ ಸನ್ನಿವೇಶದಲ್ಲಿ ಮಧ್ಯಪ್ರದೇಶದ ಮಾಜಿ ಸಿಎಂ ತಮ್ಮ ಇರಾದೆ ಬದಲಾಯಿಸಿದ್ದಾರೆ ಎಂದು ಹೇಳಲಾಗಿದೆ.  ಪಂಜಾಬ್‌ನ ಆನಂದಪುರ್‌ ಸಾಹಿಬ್‌ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಮನೀಶ್‌ ತಿವಾರಿ ಅವರು, ತಮ್ಮ ಕ್ಷೇತ್ರದ ಜನರ ಜತೆಗೆ ಈ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.  ಸಂದರ್ಶನವೊಂದರಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ದಿಗ್ವಿಜಯ್‌ ಸಿಂಗ್‌ ವ್ಯಕ್ತಪಡಿಸಿದ್ದಾರೆ.

ಸಿಎಂ ಹುದ್ದೆಗೆ ಸಿ.ಪಿ.ಜೋಶಿ?:

ಅಧ್ಯಕ್ಷ ಸ್ಥಾನದ ಹುದ್ದೆಗೆ ಸ್ಪರ್ಧಿಸಲು ಮುಂದಾಗಿರುವ ರಾಜಸ್ಥಾನ ಸಿಎಂ ಅಶೋಕ್‌ ಗೆಹೊÉàಟ್‌ ಅವರು, ತಮ್ಮ ಸಂಭಾವ್ಯ ರಾಜೀನಾಮೆಯಿಂದ ತೆರವಾಗಲಿರುವ ಹುದ್ದೆಗೆ ‌ ವಿಧಾನಸಭೆಯ ಸ್ಪೀಕರ್‌ ಸಿ.ಪಿ.ಜೋಶಿ ಅವರನ್ನು ಮುಂದಿನ ಸಿಎಂ ಸ್ಥಾನಕ್ಕೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next