Advertisement

Congress: ಕುರುಡುಮಲೆ ದೇವಸ್ಥಾನದಿಂದ “ಪ್ರಜಾಧ್ವನಿ-2’ಕ್ಕೆ ನಾಳೆ ಚಾಲನೆ

11:44 PM Apr 04, 2024 | Team Udayavani |

ಬೆಂಗಳೂರು: ಕೋಲಾರ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಉಂಟಾದ ಗೊಂದಲದಿಂದ ಮುಂದೂಡಲ್ಪಟ್ಟಿದ್ದ ಕಾಂಗ್ರೆಸ್‌ನ ಲೋಕಸಭಾ ಚುನಾವಣ ಪ್ರಚಾರ ಕಾರ್ಯಕ್ರಮ ಶನಿವಾರ (ಎ. 6) ನಿಗದಿಯಾಗಿದ್ದು, ಅಂದು ಕುರುಡುಮಲೆ ದೇವಸ್ಥಾನದಿಂದ  “ಪ್ರಜಾಧ್ವನಿ-2’ಕ್ಕೆ ಚಾಲನೆ ದೊರೆಯಲಿದೆ.

Advertisement

ಅಂದು ಬೆಳಗ್ಗೆ 10.30ಕ್ಕೆ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿರುವ ಕುರುಡುಮಲೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಚುನಾವಣ ಪ್ರಚಾರಕ್ಕೆ ಕೆಪಿಸಿಸಿ ಅಧಿಕೃತ ಚಾಲನೆ ನೀಡಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಪಕ್ಷದ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ಈ ಮೊದಲು ಮಾ.29ರಂದು ಮುಳಬಾಗಿಲಿನ ಕುರುಡುಮಲೆ ಹಾಗೂ ಮಾ.30ರಂದು ಹಾಸನದ ಹೊಳೆನರಸೀಪುರದಿಂದ  “ಪ್ರಜಾಧ್ವನಿ-2’ಕ್ಕೆ ಚಾಲನೆ ನೀಡಲು ಕಾಂಗ್ರೆಸ್‌ ಉದ್ದೇಶಿಸಿತ್ತು. ಈ ಸಂಬಂಧ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದ್ದವು. ಆದರೆ ಕೋಲಾರದಲ್ಲಿ ಪಕ್ಷದ ನಾಯಕರ ಭಿನ್ನಮತ ಸ್ಫೋಟಗೊಂಡು, ಅದು ರಾಜೀನಾಮೆ ಪ್ರಹಸನಕ್ಕೂ ತಲುಪಿದ್ದ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯಕ್ರಮ ಮುಂದೂಡಿಕೆಯಾಗಿತ್ತು.

ಅದಕ್ಕೂ ಮುನ್ನ ಮಾ. 26ರಂದು ಬೀದರ್‌ನ ಬಸವಕಲ್ಯಾಣ ಮತ್ತು ಕುರುಡುಮಲೆಯಿಂದ ಹೊರಟು ಶಿವಮೊಗ್ಗದಲ್ಲಿ ಮೊದಲ ಹಂತದ ಪ್ರಚಾರ ಅಂತ್ಯಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಘೋಷಣೆ ಬಳಿಕ ಅಸಮಾಧಾನ ಸ್ಫೋಟಗೊಂಡಿದ್ದರಿಂದ ಪ್ರಚಾರದ ವೇಳೆ ದುಷ್ಪರಿಣಾಮ ಬೀರಬಾರದೆಂದು, ಅತೃಪ್ತಿ ಶಮನಕ್ಕೆ ಮೊದಲ ಆದ್ಯತೆ ನೀಡಿ, ಎ. 1ರಿಂದ ಪ್ರವಾಸ ಕೈಗೊಳ್ಳಲು ಸಿಎಂ ಚಿಂತನೆ ನಡೆಸಿದ್ದರು. ಅಂತಿಮವಾಗಿ ಈಗ ಎ. 6ಕ್ಕೆ ಮುಹೂರ್ತ ನಿಗದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next