Advertisement

ಹಣ ಕೊಟ್ಟು ಮತ ಖರೀದಿಸಲು ಕಾಂಗ್ರೆಸ್‌ ಪ್ಲಾನ್‌

04:28 PM Jan 09, 2023 | Team Udayavani |

ಕೋಲಾರ: ಕೋಲಾರದಲ್ಲಿ ಕಾಂಗ್ರೆಸ್‌ನವರು ಹಣಕೊಟ್ಟು ಮತ ಖರೀದಿಸಲು ಪ್ಲಾನ್‌ ರೂಪಿಸಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ನಂಬಬೇಡಿ ಎಂದು ಮಾಜಿ ಸಚಿವ ಆರ್‌. ವರ್ತೂರ್‌ ಪ್ರಕಾಶ್‌ ಹೇಳಿದರು.

Advertisement

ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಚನ್ನಸಂದ್ರ ಗ್ರಾಮದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ತೊರೆದ ಕಾರ್ಯಕರ್ತರನ್ನು ಬಿಜೆಪಿಗೆ ಸ್ವಾಗತಿಸಿ ಮಾತನಾಡಿದ ಅವರು, 70 ವರ್ಷಗಳಿಂದ ಕಾಂಗ್ರೆಸ್‌ಗೆ ಮತ ನೀಡಿದ್ರೂ, ದೇಶಕ್ಕೆ ಅವರು ಏನು ಮಾಡಲಿಲ್ಲ. ಗ್ರಾಮ ಅಭಿವೃದ್ಧಿಯೂ ಮಾಡಲಿಲ್ಲ. ಕೇವಲ ಪಕ್ಷದ ಮುಖಂಡರನ್ನು ಅಭಿವೃದ್ಧಿಪಡಿಸುತ್ತ ಹೋಗುತ್ತಿದೆ.

ದೇಶಕ್ಕಾಗಿ ಜೈ ಎನ್ನುವ ಪದ ಕಾಂಗ್ರೆಸ್‌ಗೆಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಆ ಪಕ್ಷ ದೇಶದಲ್ಲಿ ಧೂಳಿಪಟವಾಗಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.

ದೇಶ, ಸಂಸ್ಕೃತಿ ಉಳಿಯಬೇಕಾದರೆ, ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಬಿಜೆಪಿ ಬೆಂಬಲಿಸಬೇಕು. ಮುಂದಿನ
ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಿದರೆ ಕೋಲಾರ ಕ್ಷೇತ್ರವನ್ನು ರಾಜ್ಯದಲ್ಲೇ ನಂಬರ್‌ ಒನ್‌ ಮಾಡುತ್ತೇನೆ ಎಂದು ಹೇಳಿದರು. ಕಾಂಗ್ರೆಸ್‌ ಜೆಡಿಎಸ್‌ ತೊರೆದ ಮುಖಂಡರಾದ ಅಪ್ಪಯ್ಯನ್ನ, ಆಂಜನೇಯ, ವೆಂಕಟದಾಸಪ್ಪ,ರಾಮಣ್ಣ, ಆದ್ಯಪ್ಪ, ಡೇರಿ ಅಧ್ಯಕ್ಷ ಮುನಿರಾಜು, ಸಿ.ಎನ್‌.ರಮೇಶ್‌, ನಾಗರಾಜಪ್ಪ, ರಮೇಶ್‌, ಆಂಜಿನಪ್ಪ, ಮುರಳಿ, ರವಿ, ಶಂಕರ್‌, ಆನಂದ್‌, ನರಸಿಂಹ, ರಾಜಣ್ಣ,ಟಿ.ಸಿ.ನಾರಾಯಣಸ್ವಾಮಿ, ದಳಸಗೆರೆ ರವಿ,ವೆಂಕಟರೆಡ್ಡಿ, ನಾರಾಯಣಸ್ವಾಮಿ ಶೆಟ್ಟಿ, ಚಿಕ್ಕನಾರಾಯಣಸ್ವಾಮಿ, ಆಟೋ ಮುನೇಗೌಡ, ಸತೀಶ, ಸಿ.ಎಸ್‌.ನಾಗೇಶ್‌,ಮನೋಜ್‌, ಕೃಷ್ಣಪ್ಪ ಹೆಗಡೆ, ಹೋಟೆಲ್‌ ಸುರೇಶ್‌,ರಾಮಕೃಷ್ಣ, ನಾಗರಾಜ್‌, ನಾರಾಯಣಪ್ಪ, ಮಧು, ಮುನಿರಾಜು, ಮಂಜುನಾಥ್‌, ಕೆಂಚಪ್ಪ, ರಮೇಶ್‌, ಸುನೀಲ್‌,ವಿನೋದ್‌, ಮುಖಂಡರಾದ ಬೆಗ್ಲಿ ಸೂರ್ಯ ಪ್ರಕಾಶ್‌,ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರಗೌಡ, ಕುರುಬರ ಸಂಘದ ಜಿಲ್ಲಾಧ್ಯಕ್ಷ ತಂಬಳ್ಳಿ ಮುನಿಯಪ್ಪ, ಚನ್ನಸಂದ್ರ ಗ್ರಾಪಂ ಅಧ್ಯಕ್ಷರಾದ ಮುರಳಿ ಭವ್ಯಶ್ರೀ, ಕಡುಗಟ್ಟೂರು ಗ್ರಾಪಂ ಸದಸ್ಯ ದೇವರಾಜ್‌, ತಾಲೂಕು ಮಾಜಿ ಅಧ್ಯಕ್ಷ ಸೂಲೂರು ಆಂಜನಪ್ಪ, ಅಗ್ರಹಾರ ಪಿ.ವೆಂಕಟೇಶ್‌, ದಿಲೀಪ್‌, ಚನ್ನಕೇಶವ, ರವಿ ಭಾಗವಹಿಸಿದ್ದರು.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next