Advertisement

ರಾಜ್ಯದಲ್ಲಿ ಕಾಂಗ್ರೆಸ್‌ ಜಾತ್ರೆ ಆರಂಭ: ಡಿ.ಕೆ.ಶಿವಕುಮಾರ್‌

11:49 PM Dec 02, 2021 | Team Udayavani |

ಬೆಂಗಳೂರು: ಕಾಂಗ್ರೆಸ್‌ ಪಕ್ಷದಲ್ಲಿ ದೊಡ್ಡ ಸಂಚಲನ ಶುರುವಾಗಿದ್ದು, ಕಾಂಗ್ರೆಸ್‌ ಜಾತ್ರೆ ಪ್ರಾರಂಭವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಜೆಡಿಎಸ್‌ನ ಸಿ.ಆರ್‌.ಮನೋಹರ್‌, ಅಮರನಾಥ್‌ ಹಾಗೂ ಬಿಜೆಪಿ ಎ.ನಾಗರಾಜು ಅವರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದರು.

ಹಲವರ ಸೇರ್ಪಡೆ
ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಸಹಿತ ಹಲವಾರು ಜಿಲ್ಲಾ ಮಟ್ಟದ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಕಾಂಗ್ರೆಸ್‌ ಸೇರಿದರು.

ಬಿಜೆಪಿ ಕೋಮುವಾದಿ ಪಕ್ಷ
ಬಿಜೆಪಿ ಕೋಮುವಾದಿ ಪಕ್ಷ ಅದರ ನಾಯಕರು ಧರ್ಮಾಧಾರಿತವಾಗಿ ರಾಜ ಕಾರಣ ಮಾಡುವವರು. ನಮ್ಮ ಪಕ್ಷ ಎಲ್ಲರನ್ನ ಸಮಾನವಾಗಿ ಕಾಣುತ್ತದೆ. ಬಿಜೆಪಿಯಲ್ಲಿ ಅಲ್ಪಸಂಖ್ಯಾಕರಿಗೆ ಅವಕಾಶವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ

Advertisement

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಸಹಿತ ಹಲವು ನಾಯಕರು ಉಪಸ್ಥಿತರಿದ್ದರು.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ ಯಾರಿಗೆ ಬೆಂಬಲ ಸೂಚಿಸಲಿದೆ ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ಅದರ ಜೆಡಿಎಸ್‌ ಬೆಂಬಲ ಕೇಳುವುದು ತಪ್ಪಲ್ಲ.
– ಶೋಭಾ ಕರಂದ್ಲಾಜೆ,
ಕೇಂದ್ರ ಸಚಿವೆ

ನನ್ನ ಬೆಂಬಲಿಗರು ಹಿಂದೆ ಯಾರನ್ನು ಬೆಂಬಲಿಸುತ್ತಿದ್ದರೋ ಅವರಿಗೇ ನಿಷ್ಠೆ ತೋರಲಿದ್ದಾರೆ. ಇಂಥವರಿಗೇ ಮತ ನೀಡಿ ಎಂದು ಸೂಚಿಸುವುದಿಲ್ಲ. ನಾನು ಯಾರನ್ನೂ ಬೆಂಬಲಿಸುವುದಿಲ್ಲ.
– ಸುಮಲತಾ, ಮಂಡ್ಯ ಸಂಸದೆ

ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ಗೆ 6 ಸ್ಥಾನಗಳನ್ನೂ ಗೆಲ್ಲುವ ಅನಿವಾರ್ಯತೆಯಿದೆ. ಈ ಚುನಾವಣೆಯ ಫ‌ಲಿತಾಂಶವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಭದ್ರ ಬುನಾದಿಗೆ ಕಾರಣವಾಗಲಿದೆ.
– ಎಚ್‌. ಡಿ. ಕುಮಾರಸ್ವಾಮಿ,
ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next