Advertisement
ಕೋವಿಡ್ ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಗಮನಹರಿಸುವುದರ ಜತೆಗೆ ಹೊಣೆ ಗಾರಿಕೆ ನಿಭಾಯಿಸುವಂತಹ ಕಾರ್ಯದಲ್ಲಿ ತೊಡಗಬೇಕೆಂದು ಎಐಸಿಸಿರಾಜ್ಯ ಘಟಕಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 100 ಮಂದಿ ತಜ್ಞ ವೈದ್ಯರು ಹಾಗೂ 1,000 ಸೇವಾದಳಕಾರ್ಯಕರ್ತರನ್ನೊಳಗೊಂಡ ತಂಡ ರಚಿಸಿ ಟೆಲಿ ಮೆಡಿಸಿನ್ ಸೇವೆ ಒದಗಿಸಲು ರೂಪು-ರೇಷೆ ಸಿದ್ಧ ಪಡಿಸುತ್ತಿದೆ.
Related Articles
Advertisement
ತಾಲೂಕು ಕೇಂದ್ರಗಳಲ್ಲಿ ಆಸ್ಪತ್ರೆಗಳ ಸುಸಜ್ಜಿತ ಆಸ್ಪತ್ರೆಗಳ ಸಂಖ್ಯೆ ಕಡಿಮೆ ಇರುವುದರಿಂದ ಅಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಇದರ ಬಗ್ಗೆ ತಾಲೂಕು ಹಾಗೂ ಜಿಲ್ಲಾಕಾಂಗ್ರೆಸ್ ಸಮಿತಿ. ಪ್ರಮುಖವಾಗಿ ಯುವ ಕಾಂಗ್ರೆಸ್ ಹೆಚ್ಚು ಗಮನಹರಿಸಬೇಕು ಎಂದು ನಿರ್ದೇಶನ ನೀಡಲಾಗಿದ್ದು, ಜಿಲ್ಲಾಮತ್ತು ತಾಲೂಕು ಮಟ್ಟದಲ್ಲಿ ಒಂದೊಂದು ತಂಡ ರಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಣ್ಣ ಸಣ್ಣ ಆಡಿಯೊ, ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚುರ ಪಡಿಸಿ. ಅವಕಾಶ ಇದ್ದ ಕಡೆ ಸ್ಯಾನಿಟೈಸರ್,ಮಾಸ್ಕ್ ವಿತರಿಸಿ. ವೈದ್ಯರ ಘಟಕ ಹಾಗೂ ಯುವ ಘಟಕಕೈಗೊಳ್ಳುವ ಕಾರ್ಯಕ್ರಮಗಳನ್ನು ಸಣ್ಣ ವರದಿ ರೂಪದಲ್ಲಿ ಕೆಪಿಸಿಸಿಗೆ ರವಾನಿಸಿ ಎಂದು ತಿಳಿಸಲಾಗಿದೆ.
ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವ ಕೃಷ್ಣ ಬೈರೇಗೌಡ ಸಹಿತ ಕಾಂಗ್ರೆಸ್ ಶಾಸಕರು ರೈತರ ಹೊಲಗಳಿಗೆ ಹೋಗಿ ಹಣ್ಣು, ತರಕಾರಿ ಖರೀದಿಸಿ ಬಡವರಿಗೆ ಹಂಚಿಕೆ ಮಾಡಿದ್ದರು. ಈ ವರ್ಷ ವೈದ್ಯಕೀಯ ನೆರವು
ಕೆಪಿಸಿಸಿ ವತಿಯಿಂದ ಕೋವಿಡ್ಪೀಡಿತರು ಹಾಗೂ ಕುಟುಂಬ ವರ್ಗದವರಿಗೆ ನೆರವಾಗಲು ವಿಶೇಷ ವೈದ್ಯರತಂಡ ರಚಿಸಲಾಗುತ್ತಿದೆ. ಸಹಾಯವಾಣಿ ಕೇಂದ್ರಗಳನ್ನೂ ತೆರೆಯಲು ಸಿದ್ಧತೆ ನಡೆಸಲಾಗಿದೆ .ವೈದ್ಯರ ಘಟಕ ಹಾಗೂ ಯುವ ಕಾಂಗ್ರೆಸ್ ಘಟಕಕ್ಕೆ ಇದರ ಜವಾಬ್ದಾರಿ ನೀಡಲಾಗುವುದು. –ಸಲೀಂ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ
–ಎಸ್. ಲಕ್ಷ್ಮಿನಾರಾಯಣ