Advertisement

ನವ ಸಂಕಲ್ಪ ಶಿಬಿರ: ಕಾಂಗ್ರೆಸ್‌ ಸಂಘಟನೆ, ಗೆಲುವಿನ ಸಂಕಲ್ಪ; ಸಲೀಂ ಅಹ್ಮದ್‌

01:38 AM Jun 15, 2022 | Team Udayavani |

ಮಂಗಳೂರು: ಕಾಂಗ್ರೆಸ್‌ ಪಕ್ಷವನ್ನು ತಳಮಟ್ಟದಿಂದ ಪ್ರಬಲವಾಗಿ ಸಂಘಟಿಸಿ ಮುಂದಿನ ಎಲ್ಲ ಚುನಾವಣೆ
ಗಳಲ್ಲಿ ಗೆಲುವು ಸಾಧಿಸುವ ಸಂಕಲ್ಪವನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ಹೇಳಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಆಶ್ರಯದಲ್ಲಿ ನಗರದ ಅಡ್ಯಾರ್‌ ಗಾರ್ಡನ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ನವ ಸಂಕಲ್ಪ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಕ್ಷದ ವರಿಷ್ಠ ನಾಯಕಿ ಸೋನಿಯಾ ಗಾಂಧಿಯವರ ಆಶಯದಂತೆ ಪಕ್ಷವನ್ನು ಸದೃಢವಾಗಿ ಸಂಘಟಿಸುವ ನಿಟ್ಟಿನಲ್ಲಿ ರಾಷ್ಟ್ರ ಮಟ್ಟದಿಂದ ಜಿಲ್ಲಾ ಮಟ್ಟದ ವರೆಗೆ ನವ ಸಂಕಲ್ಪ ಶಿಬಿರವನ್ನು ಆಯೋಜಿಸ ಲಾಗು ತ್ತಿದೆ. ಈಗಾಗಲೇ ರಾಷ್ಟ್ರ ಮಟ್ಟದ ಹಾಗೂ ರಾಜ್ಯ ಮಟ್ಟದ ಶಿಬಿರ ನಡೆದಿದ್ದು ಇದೀಗ ಜಿಲ್ಲಾಮಟ್ಟದ ಶಿಬಿರ ಆಯೋಜನೆಗೊಳ್ಳುತ್ತಿದೆ ಎಂದರು.

ಕಾರ್ಯಕರ್ತರು ಪಕ್ಷದ ಶಕ್ತಿ. ಪಕ್ಷ ದಲ್ಲಿ ಶೇ. 50ರಷ್ಟು ಯುವಜನತೆ, ಮಹಿಳೆ ಯ ರಿ ಗೆ ಪ್ರಾತಿನಿಧ್ಯ ನೀಡಲು ಈಗಾಗಲೇ ನಿರ್ಧ ರಿಸಲಾಗಿದೆ. ಕಾರ್ಯಕರ್ತರು ಪಕ್ಷ ಸಂಘಟನೆ ಜತೆಗೆ ಬಿಜೆಪಿ ಸರಕಾರದ ಆಡಳಿತ ವೈಫಲ್ಯ, ಕೋಮುವಾದದ ಮೂಲಕ ಸಮಾಜವನ್ನು ವಿಭಜಿಸುವ ಸಂಚುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಯಶಸ್ಸು ತಾತ್ಕಾಲಿಕ
ವಿಧಾನಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ಕಾಂಗ್ರೆಸ್‌ ಸಂವಿಧಾನ, ಪ್ರಜಾಪ್ರಭುತ್ವ ಪರವಾಗಿರುವ ಪಕ್ಷ. ಬಹುತ್ವ ಈ ದೇಶದ ಸಂಸ್ಕೃತಿ. ಬಿಜೆಪಿ, ಸಂಘ ಪರಿವಾರಗಳು ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿಯಾಗಿವೆ. ಧರ್ಮ ವನ್ನು ರಾಜಕಾರಣದಲ್ಲಿ ಮಿಶ್ರಣ ಮಾಡಿ, ಜನರನ್ನು ತಪ್ಪುದಾರಿಗೆ ಎಳೆದಿದೆ. ಹಾಗೆ ಗಳಿಸಿರುವ ಯಶಸ್ಸು ತಾತ್ಕಾಲಿಕವಾದುದು ಎಂದರು.

Advertisement

ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ಮಾತನಾಡಿ, ಪಕ್ಷ ಸಂಘಟನೆ ಕಾರ್ಯದಲ್ಲಿ ಒಗ್ಗೂಡಿ ಶ್ರಮಿಸೋಣ ಎಂದರು.

ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ. ಖಾದರ್‌, ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್‌, ಗಂಗಾಧರ ಗೌಡ, ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಜೆ.ಆರ್‌. ಲೋಬೋ, ಮೊದಿನ್‌ ಬಾವಾ, ಐವನ್‌ ಡಿ’ಸೋಜಾ, ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ಜಿ.ಎ. ಬಾವಾ, ಪಿ.ವಿ. ಮೋಹನ್‌, ಶಶಿಧರ ಹೆಗ್ಡೆ, ಯು.ಕೆ. ಮೋನು, ಶಾಲೆಟ್‌ ಪಿಂಟೋ, ಶಾಹುಲ್‌ ಹಮೀದ್‌, ರಾಕೇಶ್‌ ಮಲ್ಲಿ, ಕೃಪಾ ಆಮರ್‌ ಆಳ್ವ ವಿಶ್ವಾಸ್‌ ದಾಸ್‌ ಉಪಸ್ಥಿತರಿದ್ದರು.ಡಿಸಿಸಿ ಅಧ್ಯಕ್ಷ ಹರೀಶ್‌ ಕುಮಾರ್‌ ಸ್ವಾಗತಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ನಿರೂಪಿಸಿದರು.

ಜಿಲ್ಲೆಗೆ ಪ್ರತ್ಯೇಕ ಚುನಾವಣ ಪ್ರಣಾಳಿಕೆ
ನವಸಂಕಲ್ಪ ಶಿಬಿರದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ, ಶಿಫಾರಸು ಮತ್ತು ಸಲಹೆಗಳನ್ನು ಕ್ರೋಡೀಕರಿಸಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಹಾಗೂ ಸಮಸ್ಯೆಗಳಿಗೆ ಪರಿಹಾರಗಳನ್ನು ಒಳಗೊಂಡು ಪ್ರತ್ಯೇಕ ಚುನಾವಣ ಪ್ರಣಾಳಿಕೆಯನ್ನು ಮಂಡಿಸಲು ನಿರ್ಧರಿಸಲಾಗಿದೆ ಎಂದು ಸಲೀಂ ಅಹಮ್ಮದ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಚಿಂತನ ಶಿಬಿರದಲ್ಲಿ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ 200 ಪ್ರತಿನಿಧಿಗಳು ಭಾಗವಹಿಸಿದ್ದರು. ವಿವಿಧ ವಿಚಾರಗಳಿಗೆ ಸಂಬಂಧಿಸಿ 6 ಸಮಿತಿಗಳನ್ನು ರಚಿಸಲಾಗಿತ್ತು. ರಮಾನಾಥ ರೈ ನೇತೃತ್ವದಲ್ಲಿ ರಾಜಕೀಯ, ಯು.ಟಿ. ಖಾದರ್‌ ನೇತೃತ್ವದಲ್ಲಿ ಸಾಮಾಜಿಕ ನ್ಯಾಯ, ಅಭಯಚಂದ್ರ ಅವರ ನೇತೃತ್ವದಲ್ಲಿ ಕೃಷಿ, ಮಂಜುನಾಥ ಭಂಡಾರಿ ನೇತೃತ್ವದಲ್ಲಿ ಸಂಘಟನೆ, ಶಕುಂತಳಾ ಶೆಟ್ಟಿ ನೇತೃತ್ವದಲ್ಲಿ ಯುವಜನತೆ ಮತ್ತು ಮಹಿಳಾ ಸಶಕ್ತೀಕರಣ, ಜೆ.ಆರ್‌. ಲೋಬೋ ನೇತೃತ್ವದಲ್ಲಿ ಅರ್ಥಿಕ ವ್ಯವಹಾರ ವಿಚಾರಗಳ ಬಗ್ಗೆ ಚರ್ಚೆ ನಡೆದು ಸಮಿತಿಗಳು ವರದಿ ಮಂಡಿಸಿವೆ ಎಂದರು. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಕುರಿತಂತೆಯೂ ಚರ್ಚೆ ನಡೆದಿದೆ ಎಂದರು.

ತನಿಖಾ ಸಂಸ್ಥೆಗಳು ಬಿಜೆಪಿಯ ಘಟಕ
2015ರಲ್ಲಿ ಇತ್ಯರ್ಥವಾಗಿದ್ದ ಪ್ರಕರಣವನ್ನು ಮತ್ತೆ ತೆರೆದು ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಯವರಿಗೆ ಕಿರುಕುಳ ನೀಡುತ್ತಿರುವುದನ್ನು ಕಾಂಗ್ರೆಸ್‌ ತೀವ್ರವಾಗಿ ಖಂಡಿಸುತ್ತದೆ. ಇದು ರಾಜಕೀಯ ಷಡ್ಯಂತ್ರವಾಗಿದೆ ಎಂದ ಅವರು ಸಿಬಿಐ, ಐಟಿ, ಇಡಿ ಬಿಜೆಪಿಯ ಮುಂಚೂಣಿ ಘಟಕಗಳಂತೆ ವರ್ತಿಸುತ್ತಿವೆ ಎಂದು ಸಲೀಂ ಅಹಮ್ಮದ್‌ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next