Advertisement

ಸೈಕಲ್‌ನಲ್ಲಿ ಗ್ಯಾಸ್ ಸಿಲಿಂಡರ್‌ ಕಟ್ಟಿಕೊಂಡು ವಿಭಿನ್ನ ಫಲಕದೊಂದಿಗೆ ಮತಗಟ್ಟೆಗೆ ಬಂದ ಕಾಂಗ್ರೆಸ್ ಶಾಸಕ !

10:51 AM Dec 01, 2022 | Team Udayavani |

ಗುಜರಾತ್: ಗುಜರಾತ್ ವಿಧಾನಸಭಾ ಚುನಾವಣೆ 2022 ರ ಮತದಾನದ ಅವಧಿಯು ರಾಜ್ಯದಲ್ಲಿ ಆರಂಭವಾಗಿದ್ದು, 89 ಕ್ಷೇತ್ರಗಳ ಜನರು 788 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಸಜ್ಜಾಗಿದ್ದಾರೆ. ಜನರು ಎಲ್ಲಾ ರೀತಿಯ ಸಾರಿಗೆ ವಿಧಾನಗಳನ್ನು ಬಳಸಿಕೊಂಡು ಮತ ಚಲಾಯಿಸಲು ಮತಗಟ್ಟೆಗಳನ್ನು ತಲುಪುತ್ತಿದ್ದಾರೆ. ಆದರೆ ಕಾಂಗ್ರೆಸ್ ಶಾಸಕ ಪರೇಶ್ ಧನಾನಿ ತಮ್ಮ ನಿವಾಸದಿಂದ ಗ್ಯಾಸ್ ಸಿಲಿಂಡರ್ ಅನ್ನು ಸೈಕಲ್‌ ಹಿಂದೆ ಕಟ್ಟಿಕೊಂಡು ವಿಭಿನ್ನ  ರೀತಿಯಲ್ಲಿ ಮತದಾನದ ಹಕ್ಕು ಚಲಾಯಿಸಲು ಮತಗಟ್ಟೆಗೆ ಹೋಗಿದ್ದಾರೆ.

Advertisement

ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿರುವ ವೀಡಿಯೊ ಕ್ಲಿಪ್‌ನಲ್ಲಿ, ಪರೇಶ್ ಧನಾನಿ ಗ್ಯಾಸ್ ಸಿಲಿಂಡರ್ ಅನ್ನು ಕಟ್ಟಿಕೊಂಡು ಸೈಕಲ್‌ನಲ್ಲಿ ಸವಾರಿ ಮಾಡುತ್ತಿರುವುದನ್ನು ಕಾಣಬಹುದು ಮತ್ತು ಅದರ ಮೇಲೆ ಇಂದಿನ ಗ್ಯಾಸ್ ಬೆಲೆಯ ಜೊತೆಗೆ 2014ರ ಗ್ಯಾಸ್ ಬೆಲೆಗೆ  ಹೋಲಿಸುವ ಫಲಕ ಅಂಟಿಸಲಾಗಿತ್ತು, ಈ ಮೂಲಕ ಹೆಚ್ಚಾಗಿರುವ ಗ್ಯಾಸ್ ಸಿಲಿಂಡರ್ ದರದ ವಿರುದ್ಧ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿ ಜನರ ಗಮನ ಸೆಳೆದಿದ್ದಾರೆ.

 

ಗುಜರಾತ್‌ನಲ್ಲಿ ಇಂದು (ಡಿಸೆಂಬರ್ 1) ರಂದು 89 ಸ್ಥಾನಗಳಿಗೆ ಮೊದಲ ಹಂತದ ಮತದಾನ ನಡೆಯುತ್ತಿದೆ. ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ 788 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ, ಅದರಲ್ಲಿ 69 ಮಹಿಳಾ ಮತದಾರರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next