ರಾಂಚಿ: ಬಾಲಿವುಡ್ ನಟಿ ಕಂಗನಾ ರಣಾವುತ್ ಕೆನ್ನೆಗಿಂತ ನಯವಾದ ರಸ್ತೆಯನ್ನು ನನ್ನ ಕ್ಷೇತ್ರದಲ್ಲಿ ಮಾಡಿಸುತ್ತೇನೆ ಎಂದು ಜಾರ್ಖಂಡ್ ಕಾಂಗ್ರೆಸ್ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಂತಾರಾ ವಿಧಾನಸಭಾ ಕ್ಷೇತ್ರದ ಶಾಸಕ ಇರ್ಫಾನ್ ಅನ್ಸಾರಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಜಂತಾರಾದಲ್ಲಿ 14 ವಿಶ್ವ ದರ್ಜೆಯ ರಸ್ತೆಗಳ ನಿರ್ಮಾಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಚಲನಚಿತ್ರ ನಟಿ ಕಂಗನಾ ರಣಾವತ್ ಅವರ ಕೆನ್ನೆಗಿಂತ ರಸ್ತೆಗಳು ನಯವಾಗಿರುತ್ತವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ” ಎಂದು ಇರ್ಫಾನ್ ಅನ್ಸಾರಿ ವಿಡಯೋದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಕದ್ರಿ ಪಾರ್ಕ್: ಬಾಲ ಮಂಗಳ ಎಕ್ಸ್‌ಪ್ರೆಸ್ ರೈಲಿಗೆ ಸಿಗುತ್ತಿಲ್ಲ ನಿರೀಕ್ಷಿತ ಸ್ಪಂದನೆ
ಹೆಚ್ಚು ಹೊತ್ತು ಯಾರೂ ಮಾಸ್ಕ್ ಧರಿಸಿಕೊಂಡು ಇರಬಾರದು. ಇದರಿಂದ ಇಂಗಾಲದ ಡೈ ಆಕ್ಸೈಡ್ ಸೇವನೆ ಹೆಚ್ಚುತ್ತದೆ. ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ವಾರದ ಹಿಂದೆ ಇದೇ ಶಾಸಕ ಅನ್ಸಾರಿ ಹೇಳಿರುವುದು ಸುದ್ದಿಯಾಗಿತ್ತು.
ರಾಜಕಾರಣಿಗಳು ತಮ್ಮ ರಸ್ತೆಗಳನ್ನು ನಟಿಯರ ಕೆನ್ನೆಗೆ ಹೋಲಿಸುವುದು ಹೊಸದೇನಲ್ಲ. 2005 ರಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ರಸ್ತೆಗಳನ್ನು ನಟಿ ಹೇಮಾ ಮಾಲಿನಿ ಅವರ ಕೆನ್ನೆಯಂತೆ ಸುಂದರಗೊಳಿಸುವುದಾಗಿ ಹೇಳಿದ್ದರು.