Advertisement

ಕಾಂಗ್ರೆಸ್ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದೆ: ಬಿ ವೈ ರಾಘವೇಂದ್ರ

02:55 PM Oct 03, 2020 | keerthan |

ಶಿವಮೊಗ್ಗ: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ಸಹಿಸಿಕೊಳ್ಳದ ಕಾಂಗ್ರೆಸ್ ಪಕ್ಷ ರೈತ ಸಂಘದ ಕೆಲ ಕಾರ್ಯಕರ್ತರು ಹಾಗೂ ಕೆಲ ಸಂಘಟನೆಗಳ ಮೂಲಕ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Advertisement

ನಗರದಲ್ಲಿ ಮಾತನಾಡಿದ ಅವರು, ರೈತರನ್ನು ಸ್ವಾವಲಂಭಿಯಾಗಿಸಲು ಕೃಷಿ ಮಸೂದೆ ಹಾಗೂ ಭೂಸುಧಾರಣಾ‌ಕಾಯ್ದೆ ಜಾರಿಗೆ ತರಲಾಗಿದೆ. ಈ ಮಸೂದೆಯಿಂದ ಎಸ್ ಸಿ, ಎಸ್ ಟಿಗೆ ಸೆರಿದ ಜನರ ಭೂಮಿಯ ಹಕ್ಕನ್ನು ಕಿತ್ತುಕೊಳ್ಳುವ ಉದ್ದೇಶವಿಲ್ಲ ಎಂದರು.

ಇದನ್ನೂ ಓದಿ:ಸತ್ಯವನ್ನು ಮುಚ್ಚಿಟ್ಟು ಸುಳ್ಳನ್ನು ವೈಭವೀಕರಿಸುವುದೇ ಕಾಂಗ್ರೆಸ್ ಕೆಲಸ: ಈಶ್ವರಪ್ಪ

ಪ್ರತಿ ವರ್ಷ ನಾಲ್ಕು ಸಾವಿರ ಕೃಷಿ ಪದವೀಧರರು ಬರುತ್ತಿದ್ದಾರೆ. ಇವರಿಗೂ ಈ ಕಾಯ್ದೆಯಿಂದ ಅನುಕೂಲವಾಗುತ್ತದೆ. ಕೈಗಾರಿಕೆಗಾಗಿ ಕೃಷಿ ಭೂಮಿ ಬಳಸಿಕೊಳ್ಳುತ್ತಿರುವುದು ಕೇವಲ ಶೇಕಡಾ ಎರಡರಷ್ಟು ಮಾತ್ರ. ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಈಗಾಗಲೇ‌ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ರಾಜ್ಯದಲ್ಲಿ‌ ಕೃಷಿ ಮತ್ತು ಕೈಗಾರಿಕೆಗೆ ಸಮಾನ ಅವಕಾಶ ನೀಡುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ. ಆದರೆ‌ ರಾಜಕೀಯ ಉದ್ದೇಶದಿಂದ ವಿಪಕ್ಷಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂದು ರಾಘವೇಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next