Advertisement
ನಗರದ ಅನಂತಪುರ ರಸ್ತೆಯಲ್ಲಿನ ಖಾಸಗಿ ಸಭಾಂಗಣವೊಂದರಲ್ಲಿ ಸೇರಿದ ಪಾಲಿಕೆಯ ಕಾಂಗ್ರೆಸ್ 21, ಪಕ್ಷೇತರ 4 ಸೇರಿ ಒಟ್ಟು 25 ಸದಸ್ಯರು ಬೂರಿ ಭೋಜನ ಸವೆದರು. ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಜಿಲ್ಲಾಧ್ಯಕ್ಷ ಜಿ.ಎಸ್.ಮಹ್ಮದ್ ರಫೀಕ್ ಅವರು, ಸದಸ್ಯರೆಲ್ಲರನ್ನು ಹವಾನಿಯಂತ್ರಿತ ಬಸ್ ಹತ್ತಿಸಿ, ಕೆಪಿಸಿಸಿ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಮಾಜಿ ಮೇಯರ್ ವೆಂಕಟರಮಣ ಅವರೊಂದಿಗೆ ಬೀಳ್ಕೊಟ್ಟರು. ಮಹಿಳಾ ಸದಸ್ಯರೊಂದಿಗೆ ಅವರ ಪತಿಯವರು, ಸಹೋದರರು, ಪೋಷಕರು ಸಹ ರೆಸಾರ್ಟ್‌ಗೆ ತೆರಳಿ ಕುತೂಹಲ ಮೂಡಿಸಿದ್ದಾರೆ. ಕಾಂಗ್ರೆಸ್ ಸದಸ್ಯರನ್ನೆಲ್ಲ ಹಿಡಿದಿಟ್ಟುಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಂತೆ ಎಲ್ಲರನ್ನೂ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಮೇಯರ್ ಆಕಾಂಕ್ಷಿಗಳ ಉಪಮೇಯರ್ ಪೈಪೋಟಿ
ಈ ಹಿಂದೆ ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ಒಡ್ಡಿದ್ದ ಮುಲ್ಲಂಗಿ ನಂದೀಶ್ ಕುಮಾರ್, ಪಿ.ಗಾದೆಪ್ಪ ಇದೀಗ ಉಪಮೇಯರ್ ಸ್ಥಾನಕ್ಕೂ ಇಬ್ಬರ ನಡುವೆ ಪೈಪೋಟಿ ನಡೆಸುತ್ತಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ 23ನೇ ವಾರ್ಡ್‌ನ ಗಾದೆಪ್ಪ ಒಬ್ಬರೇ ಉಪಮೇಯರ್ ಸ್ಥಾನವನ್ನು ತಮಗೆ ನೀಡುವಂತೆ ಕೋರಿದ್ದರು. ಆದರೀಗ ಬದಲಾದ ಮೀಸಲಾತಿಯಿಂದಾಗಿ ಮುಲ್ಲಂಗಿ ನಂದೀಶ್ ಅವರು ಸಹ ಪ್ರಬಲ ಆಕಾಂಕ್ಷಿಯಾಗಿದ್ದು, ವರಿಷ್ಠರ ಮುಂದೆ ತಮ್ಮ ಬೇಡಿಕೆ ಇಟ್ಟಿದ್ದಾರಂತೆ ಎಂದು ತಿಳಿದು ಬಂದಿದೆ.
Related Articles
Advertisement
ಮುಸ್ಲಿಂ ಸಮುದಾಯದ 28 ನೇ ವಾರ್ಡಿನ ಸದಸ್ಯೆ ಮೊಬಿನ ಬೀ ಅವರು ತಮ್ಮ ಮೂರು ತಿಂಗಳ ಮಗುವಿನೊಂದಿಗೆ ರೆಸಾರ್ಟ್‌ಗೆ ತೆರಳಿದ್ದಾರೆ. ಇವರು ಡಿಪ್ಲೊಮಾ ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸ ಮಾಡಿದ್ದು. ಪಕ್ಷದಲ್ಲಿ ಕಳೆದ ಮೂರು ದಶಕದಿಂದ ದುಡಿದಿರುವ ಅಲ್ಲಬಕಾಷ್ ಅವರ ಪುತ್ರಿಯಾಗಿದ್ದಾರೆ. ತಮಗೆ ಮೇಯರ್ ಸ್ಥಾನ ನೀಡುವಂತೆ ಕೋರಿದ್ದಾರೆ. ಇನ್ನು ತಮ್ಮ ಸಮುದಾಯದ 34ನೇ ವಾರ್ಡಿನ ರಾಜೇಶ್ವರಿ ಸುಬ್ಬರಾಯುಡು ಅವರು ಸಹ ಮೇಯರ್ ಸ್ಥಾನದ ಪ್ರಭಲ ಆಕಾಂಕ್ಷಿಗಳಾಗಿದ್ದಾರೆ. ಆದರೆ ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತೆದೆ ಕಾದು ನೋಡಬೇಕಿದೆ.
ಬಳ್ಳಾರಿ ಪಾಲಿಕೆಗೆ ಮೇಯರ್- ಉಪಮೇಯರ್ ಚುನಾವಣೆ ಮಾ. 19ಕ್ಕೆ ನಡೆಯಲಿದೆ. ಹೀಗಾಗಿ ಅಧಿಕೃತ ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್‌ನ 21, ಪಕ್ಷೇತರ 4 ಸೇರಿ ಒಟ್ಟು 25 ಸದಸ್ಯರು ಬೆಂಗಳೂರಿಗೆ ತೆರಳಿದ್ದಾರೆ. ಆಪರೇಷನ್ ಕಮಲ ಭೀತಿಯಿಲ್ಲ. ನಾಲ್ಕು ದಿನಗಳ ಹಿಂದೆಯೇ ಹೋಗಬೇಕಿತ್ತು. ದುರ್ಗಮ್ಮ ಸಿಡಿ ನಿಮಿತ್ತ ಇಂದು ತೆರಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ನಿರ್ದೇಶನದಂತೆ ತೆರಳಿದ್ದಾರೆ – ಜಿ.ಎಸ್.ಮಹ್ಮದ್ ರಫೀಕ್, ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಬಳ್ಳಾರಿ