Advertisement
ಕಾಂಗ್ರೆಸ್‌ನ ಕೆಲವು ಸಚಿವರು ತಮ್ಮ ಮೇಲೆ ಮಾಡಿರುವ ಆರೋಪ ಮತ್ತು ಅದಕ್ಕೆ ಸಂಬಂಧಿಸಿದಂತೆ ಸೀಡಿ ಬಿಡುಗಡೆ ಮಾಡಿರುವ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಹೈಕಮಾಂಡ್‌ಗೆ 1 ಸಾವಿರ ಕೋಟಿ ರೂ. ಕಪ್ಪ ಸಲ್ಲಿಸಿರುವುದು ಮತ್ತು ಉಕ್ಕಿನ ಮೇಲ್ಸೇತುವೆ ಕಾಮಗಾರಿಯಲ್ಲಿ ಮುಖ್ಯಮಂತ್ರಿಗಳು ಮತ್ತು ಅವರ ಶಿಷ್ಯ ವರ್ಗಕ್ಕೆ ಕಮಿಷನ್ ಸಂದಾಯವಾಗಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು ಅವರ ಡೈರಿಯಲ್ಲಿದೆ ಎಂಬ ಆರೋಪವನ್ನು ಅರಗಿಸಿಕೊಳ್ಳಲು ಕಾಂಗ್ರೆಸ್ಗೆಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದ್ದಾರೆ.
ಶಿಷ್ಯರಿಗೆ 65 ಕೋಟಿ ರೂ. ಸಂದಾಯವಾಗಿದೆ ಎಂಬ ತಮ್ಮ ಆರೋಪವನ್ನು ಪುನರುಚ್ಚರಿಸಿರುವ ಮಾಜಿ ಸಿಎಂ ಬಿ.ಎಸ್
.ಯಡಿಯೂರಪ್ಪ, ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಹಾಕುವ ಸವಾಲುಗಳನ್ನು ಎದುರಿಸಲು ಸಿದ್ಧವಿರುವುದಾಗಿ
ಹೇಳಿದ್ದಾರೆ. ವೀಡಿಯೋ ತಿರುಚಿರುವ ಕಾಂಗ್ರೆಸ್: ಗೋ.ಮಧುಸೂಧನ್ ಹೈಕಮಾಂಡ್‌ಗೆ ಹಣ ಸಂದಾಯ ಮಾಡುವ ಕುರಿತು ಸಿದ್ದರಾಮಯ್ಯ ತಮ್ಮೊಂದಿಗೆ ನಡೆಸಿದ ಮಾತುಕತೆ ವಿವರಗಳನ್ನು ಕೇಂದ್ರ ಸಚಿವ ಅನಂತಕುಮಾರ್ ಅವರು ಬಿ.ಎಸ್ .ಯಡಿಯೂರಪ್ಪ ಅವರೊಂದಿಗೆ ಹಂಚಿಕೊಂಡಿದ್ದನ್ನು ತಿರುಚಿ, ಅವರಿಬ್ಬರ ವಿರುದ್ಧವೇ ಆರೋಪ ಮಾಡುತ್ತಿರುವ ಕಾಂಗ್ರೆಸ್ ಆತಂಕಕ್ಕೆ ಒಳಗಾಗಿ ಹೇಳಿಕೆ ನೀಡುತ್ತಿದೆ ಎಂದು ಬಿಜೆಪಿ ವಕ್ತಾರ ಗೋ. ಮಧುಸೂಧನ್ ಹೇಳಿದ್ದಾರೆ.