Advertisement

Congress Manifesto; ಕಣಿವೆ ರಾಜ್ಯದ ಭೂರಹಿತ ಕೃಷಿಕರಿಗೆ 99 ವರ್ಷ ಭೂಗುತ್ತಿಗೆ

12:42 AM Sep 17, 2024 | Team Udayavani |

ಶ್ರೀನಗರ: ಜಮ್ಮು -ಕಾಶ್ಮೀರ ಚುನಾವಣೆಗೆ 2 ದಿನ ಇರುವಂತೆಯೇ ಸೋಮವಾರ ಕಾಂಗ್ರೆಸ್‌ ತನ್ನ ಪ್ರಣಾ ಳಿಕೆ ಬಿಡುಗಡೆ ಮಾಡಿದೆ. ಕಣಿವೆಯ ಭೂರಹಿತ ಕೃಷಿಕರಿಗೆ 99 ವರ್ಷ ಗಳವರೆಗೆ ಭೂಮಿ ಗುತ್ತಿಗೆ, ಕೃಷಿ ಕುಟುಂಬಗಳಿಗೆ ಮಾಸಿಕ 4,000 ರೂ. ಸಹಾಯಧನ, ಜಿಲ್ಲಾ ಮಟ್ಟದ ನೀರಾವರಿ ಯೋಜನೆಗೆ 2,500 ಕೋ.ರೂ. ಮೀಸಲಿನಂಥ ಪ್ರಮುಖ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ.

Advertisement

ಪಂಚ ಗ್ಯಾರಂಟಿಗಳಲ್ಲಿ ಘೋಷಿಸಲಾದ ಮನೆ ಒಡತಿಗೆ ಮಾಸಿಕ 3000 ರೂ. ಮಹಿಳಾ ಉದ್ಯಮಿಗಳಿಗೆ 5 ಲಕ್ಷ ಬಡ್ಡಿರಹಿತ ಸಾಲ ಸೇರಿ ಹಲವು ಭರವಸೆಗಳನ್ನೂ ಪ್ರಣಾಳಿಕೆ ಹೊಂದಿದೆ. ಕೆ.ಜಿ. ಸೇಬಿಗೆ 72 ರೂ. ಕನಿಷ್ಠ ಬೆಂಬಲ ಬೆಲೆ ಘೋಷಿಸಲಾಗಿದೆ. “ಹಸ್ತವು ಪರಿಸ್ಥಿತಿ ಬದಲಿಸುತ್ತದೆ (ಹಾಥ್‌ ಬದ್ಲೆಗಾ ಹಾಲತ್‌)’ ಪ್ರಣಾಳಿಕೆಯನ್ನು ಕಾಂಗ್ರೆಸ್‌ ಪ್ರಧಾನ ವಕ್ತಾರ ಪವನ್‌ ಖೇರಾ ಮತ್ತು ರಾಜ್ಯಾಧ್ಯಕ್ಷ ತಾರಿಖ್‌ ಹಮೀದ್‌ ಕರ್ರಾ ಬಿಡುಗಡೆಗೊಳಿಸಿದ್ದು, ಇದು ರೈತರು, ಮಹಿಳೆಯರು, ಯುವಜನರ ಪರ ಪ್ರಣಾಳಿಕೆ ಎಂದಿದ್ದಾರೆ. ಇನ್ನು,ಕಣಿವೆಯ ಆರ್ಹ ನಿರುದ್ಯೋಗಿಗಳಿಗೆ ಮಾಸಿಕ 3500 ರೂ. ನಿರುದ್ಯೋಗ ಭತ್ತೆ, 1 ಲಕ್ಷ ಸರಕಾರಿ ಹುದ್ದೆಗಳಿಗೆ ನೇಮಕಾತಿ ಮಾಡುವ ಭರವಸೆಯನ್ನೂ ನೀಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next