Advertisement

ರಾಹುಲ್‌ ಗಾಂಧಿ ಅನರ್ಹತೆ ಖಂಡಿಸಿದ ಅಮೆರಿಕ ಕಾಂಗ್ರೆಸ್‌ ನಾಯಕರು

02:54 PM Mar 25, 2023 | Team Udayavani |

ವಾಷಿಂಗ್ಟನ್‌: ಕಾಂಗ್ರೆಸ್‌ ನಾಯಕ, ವಯನಾಡ್‌ನ ಸಂಸದ ರಾಹುಲ್‌ ಗಾಂಧಿಯನ್ನು ಲೋಕಸಭೆಯ ಸದ್ಯ ಸ್ಥಾನದಿಂದ ಅನರ್ಹಗೊಳಿಸಿರುವುದು ʻಗಾಂಧಿ ತತ್ವಕ್ಕೆ ಎಸಗಿದ ದ್ರೋಹʼ ಎಂದು ಭಾರತೀಯ ಮೂಲದ ಅಮೆರಿಕ ಕಾಂಗ್ರೆಸ್‌ ಸದಸ್ಯ ರೋ ಖನ್ನಾ ಹೇಳಿದ್ದಾರೆ.

Advertisement

ʻರಾಹುಲ್‌ ಅವರನ್ನು ಸಂಸತ್ತಿನಿಂದ ಹೊರಹಾಕಿರುವುದು ಗಾಂಧಿ ತತ್ವಗಳಿಗೆ ಮತ್ತು ಬಾರತದ ಮೌಲ್ಯಗಳಿಗೆ ಮಾಡಿದ ದ್ರೋಹʼ ಎಂದು ರೋ ಖನ್ನಾ ಟ್ವೀಟ್‌ ಮಾಡಿದ್ಧಾರೆ.

ʻನನ್ನ ಅಜ್ಜ ಹಲವಾರು ವರ್ಷ ಜೈಲಿನಲ್ಲಿದ್ದದ್ದು, ತ್ಯಾಗ ಮಾಡಿದ್ದು ಇದಕ್ಕಾಗಿ ಅಲ್ಲ. ರಾಹುಲ್‌ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹ ಮಾಡಿದ್ದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕುʼ ಎಂದು ಖನ್ನಾ ತಮ್ಮ ಟ್ವಿಟ್‌ನಲ್ಲಿ ಪ್ರಧಾನಿ ಮೋದಿ ಅವರ ಬಳಿಯಲ್ಲಿ  ಮನವಿ ಮಾಡಿಕೊಂಡಿದ್ದಾರೆ.

 

Advertisement

ʻಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ನಿರ್ಧಾರ ಕೈಗೊಗೊಳ್ಳುವ ಶಕ್ತಿ ನಿಮಗಿದೆʼ ಎಂದು ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಕುರಿತು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಅಭಿವೃದ್ಧಿಯಲ್ಲಿ ಸಾಮಾಜಿಕ- ಧಾರ್ಮಿಕ ಸಂಸ್ಥೆಗಳ ಪಾತ್ರ ಮಹತ್ವದ್ದು: ನರೇಂದ್ರ ಮೋದಿ

ಅದಲ್ಲದೆ, ಈ ವಿಚಾರಕ್ಕೆ ಕುರಿತಂತೆ ಅಮೆರಿಕದ ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ನ ಉಪಾಧ್ಯಕ್ಷ ಜಾರ್ಜ್‌ ಅಬ್ರಹಾಂ ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ʻಇದು ಭಾರತದ ಪ್ರಜಾಪ್ರಭುತ್ವದ ಕರಾಳ ದಿನವಾಗಿದೆ. ರಾಹುಲ್‌ ಗಾಂಧಿಯನ್ನು ಅನರ್ಹಗೊಳಿಸುವ ಮೂಲಕ ಮೋದಿ ಸರ್ಕಾರ ಭಾರತೀಯರ ವಾಕ್‌ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿದೆʼ ಎಂದು ಜಾರ್ಜ್‌ ಅಬ್ರಹಾಂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next