Advertisement

ಸುನೀಲಗೌಡರನು ಹಿಂದೆ ಒತ್ತಾಯದಿಂದ ಕಣಕ್ತಿಳಿಸದ್ದೆವು: ನಾಡಗೌಡ

02:56 PM Nov 24, 2021 | Suhan S |

ವಿಜಯಪುರ: 2018ರಲ್ಲಿ ಸ್ಥಳೀಯ ಸಂಸ್ಥೆಗಳ ಮೇಲ್ಮನೆಯ ವಿಜಯಪುರ ಕ್ಷೇತ್ರದ ತೆರವಾಗಿದ್ದ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸುನೀಲಗೌಡ ಪಾಟೀಲ ಅವರನ್ನು ಒತ್ತಾಯಪೂರ್ವಕ ಕಣಕ್ಕಿಳಿಸಿದ್ದೇವು. ಅಲ್ಲದೇ ಮುಂದಿನ ಬಾರಿಯೂ ನಿಮಗೆ ಅವಕಾಶ ನೀಡುವುದಾಗಿ ನೀಡಿದ್ದ ಭರವಸೆಯನ್ನು ಪಕ್ಷದಿಂದ ಇದೀಗ ಈಡೇರಿಸಲಾಗಿದೆ ಎಂದು ಮಾಜಿ ಸಚಿವ ಸಿ.ಎಸ್‌. ನಾಡಗೌಡ ಹೇಳಿದರು.

Advertisement

ಮಂಗಳವಾರ ನಗರದಲ್ಲಿರುವ ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷೇತರ ಶಾಸಕರಾಗಿದ್ದ ಬಸನಗೌಡ ಪಾಟೀಲ ಅವರು 2018 ರಲ್ಲಿ ರಾಜೀನಾಮೆ ನೀಡಿದ್ದರಿಂದ ಒಂದು ಸ್ಥಾನ ತೆರವಾಗಿತ್ತು. ಆಗ ನಡೆದ ಉಪ ಚುನಾವಣೆ ಘೋಷಣೆಯಲ್ಲಿ ಸುನೀಲಗೌಡ ಪಾಟೀಲ ಅವರು ಸ್ಪ ರ್ಧಿಸಲು ಆಸಕ್ತಿ ತೋರಿರಲಿಲ್ಲ. ಸಚಿವರಾಗಿದ್ದ ಅವರ ಸಹೋದರ ಎಂ.ಬಿ. ಪಾಟೀಲ ಅವರೂ ನನ್ನ ಸಹೋದರನಿಗೆ ಬೇಡ, ಪಕ್ಷದ ನಿಷ್ಠಾವಂತ ಬೇರೆ ಕಾರ್ಯಕರ್ತರಿಗೆ ಅವಕಾಶ ನೀಡಿ ಎಂದು ಸಲಹೆ ನೀಡಿದ್ದರು ಎಂದು ವಿವರಿಸಿದರು.

ಆದರೆ ಕಾಂಗ್ರೆಸ್‌ ಪಕ್ಷ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಪಕ್ಷದ ನಾಯಕರು ಒತ್ತಾಯಪೂರ್ವಕವಾಗಿ ಸುನೀಲಗೌಡ ಪಾಟೀಲ ಅವರಿಗೆ ಟಿಕೆಟ್‌ ನೀಡಿತ್ತು. ಅಲ್ಲದೇ ಮುಂದಿನ ಬಾರಿಯೂ ನಿಮಗೆ ಅವಕಾಶ ನೀಡುವುದಾಗಿ ಸ್ಪಷ್ಟ ಭರವಸೆ ಕೊಟ್ಟಿದ್ದೇವು. ಅದರಂತೆ ಈ ಬಾರಿ ಕಾಂಗ್ರೆಸ್‌ ಪಕ್ಷದಿಂದ ವಿಜಯಪುರ ಜಿಲ್ಲೆಗೆ ಅದರಲ್ಲೂ ಸುನೀಲಗೌಡ ಪಾಟೀಲ ಅವರಿಗೆ ಅವಕಾಶ ನೀಡುವಂತೆ ಪಕ್ಷದ ನಾಯಕರನ್ನು ಆಗ್ರಹಿಸಿದ್ದೆವು. ಮತ್ತೂಂದೆಡೆ ಸಹಜವಾಗಿ ಬಾಗಲಕೋಟೆ ಮುಖಂಡರು ತಮ್ಮ ಜಿಲ್ಲೆಗೆ ಅವಕಾಶ ನೀಡುವಂತೆ ಕೇಳಿದ್ದರು ಎಂದು ವಿವರಿಸಿದರು.

ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ಎರಡು ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ಅಭ್ಯರ್ಥಿಯನ್ನು ಹಾಕಲು ನಿರ್ಧರಿಸಿತು. ನೀಡುವ ಒಂದೇ ಟಿಕೆಟ್‌ನ್ನು ಸುನೀಲಗೌಡ ಪಾಟೀಲ ಅವರಿಗೆ ನೀಡುವ ಮೂಲಕ ವಿಜಯಪುರ ಜಿಲ್ಲೆಗೆ ಆದ್ಯತೆ ನೀಡಿದೆ ಎಂದು ಸ್ಪಷ್ಟಪಡಿಸಿದರು. ಮತ್ತೂಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಈಗಾಗಲೇ ಟಿಕೆಟ್‌ ವಂಚಿತರಾದ ಎಸ್‌.ಆರ್‌. ಪಾಟೀಲ ಅವರ ಭವಿಷ್ಯ ಇಲ್ಲಿಗೆ ಕೊನೆಯಾಗಿಲ್ಲ. ಪಕ್ಷದಲ್ಲಿ ಅವರಿಗೆ ಅತಿ ಹೆಚ್ಚಿನ ಗೌರವವಿದೆ. ಭವಿಷ್ಯದಲ್ಲಿ ಅವರಿಗೆ ಯೋಗ್ಯ ಸ್ಥಾನಮಾನ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಯಾರೂ ಅಪಸ್ವರ ತೆಗೆಯುವಂತಿಲ್ಲ. ಅವಳಿ ಜಿಲ್ಲೆಗಳ ಎಲ್ಲ ನಾಯಕರು, ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿ ಸುನೀಲಗೌಡ ಅವರನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕಿದೆ ಎಂದರು.

ಮಾಜಿ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಸೋಮವಾರ ರಾತ್ರಿ ತಡವಾಗಿ ಟಿಕೆಟ್‌ ಘೋಷಣೆ ಮಾಡಿದ್ದು, ನಾಮಪತ್ರ ಸಲ್ಲಿಕೆ ಬಳಿಕ ತುರ್ತು ಸಭೆ ನಡೆಸಿದ್ದೇವೆ. ಶೀಘ್ರದಲ್ಲಿ ಎಲ್ಲ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರ ಬೃಹತ್‌ ಸಭೆ ಮಾಡೋಣ ಎಂದು ಹೇಳಿದರು. ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಸದರಿ ಚನಾವಣೆಯಲ್ಲಿ ಸುನೀಲಗೌಡ ಅವಿರೋಧವಾಗಿ ಆಯ್ಕೆಯಾಗುವ ಅವಕಾಶಗಳು ಹೆಚ್ಚಿವೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡು ಸ್ಥಾನಗಳಿಗೆ ಒಬ್ಬರನ್ನೇ ಕಣಕ್ಕಿಳಿಸಿದ್ದು, ಪಕ್ಷೇತರರನ್ನು ಮನವೊಲಿಸಿದಲ್ಲಿ ಸುನೀಲಗೌಡ ಅವರ ಅವಿರೋಧ ಆಯ್ಕೆ ಅವಕಾಶವಿದೆ. ಈ ವಿಷಯದಲ್ಲಿ ಅವಳಿ ಜಿಲ್ಲೆಗಳ ನಾಯಕರು ಶ್ರಮಿಸುವಂತೆ ಮನವಿ ಮಾಡಿದರು.

Advertisement

ಮಾಜಿ ಸಚಿವರಾದ ಅಜಯಕುಮಾರ ಸರನಾಯಕ, ಆರ್‌.ಬಿ. ತಿಮ್ಮಾಪುರ ಮಾತನಾಡಿ, ವಿಜಯಪುರ-ಬಾಗಲಕೋಟೆ ಜಿಲ್ಲೆಗಳು ಭೌಗೋಳಿಕವಾಗಿ ಬೇರೆ ಆಗಿದ್ದರೂ ಭಾವನಾತ್ಮಕವಾಗಿ ಅವಿಭಜಿತ ವಿಜಯಪುರ ಒಂದೇ ಜಿಲ್ಲೆಯ ಸಹೋದರರು. ಈ ಹಿಂದೆ ಬಾಗಲಕೋಟೆ ಜಿಲ್ಲೆಗೆ ಅವಕಾಶ ನೀಡಿದಾಗ ವಿಜಯಪುರ ಜಿಲ್ಲೆಯ ಮತದಾರರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಈ ಬಾರಿ ವಿಜಯಪುರ ಜಿಲ್ಲೆಯ ಸುನೀಲಗೌಡ ಪಾಟೀಲ ಅವರಿಗೆ ಅವಕಾಶ ಸಿಕ್ಕಿದ್ದು, ಅವಳಿ ಜಿಲ್ಲೆಗಳ ಎಲ್ಲರೂ ಒಗ್ಗಟ್ಟಾಗಿ ಗೆಲ್ಲಿಸಲು ನಾವು ಬದ್ಧರಾಗಿದ್ದೇವೆ ಎಂದರು.

ಮಾಜಿ ಶಾಸಕರಾದ ವಿಠ್ಠಲ ಕಟಕಧೋಂಡ, ರಾಜು ಆಲಗೂರ, ಮುಖಂಡರಾದ ಹಮೀದ ಮುಶ್ರೀಫ್‌, ಮಲ್ಲಣ್ಣ ಸಾಲಿ, ಬಿ.ಎಸ್‌. ಪಾಟೀಲ ಯಾಳಗಿ, ವಿದ್ಯಾರಾಣಿ ತುಂಗಳ ಮಾತನಾಡಿದರು. ಅಭ್ಯರ್ಥಿ ಸುನೀಲಗೌಡ ಪಾಟೀಲ ಮಾತನಾಡಿ, ಹಾಲಿ ಸದಸ್ಯನಾಗಿ ನನಗೆ ಸಿಕ್ಕ 3 ವರ್ಷಗಳ ಅಲ್ಪಾವ ಧಿಯಲ್ಲಿ ಅವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಜನಪ್ರತಿನಿ ಧಿಗಳ ಗೌರವ ಧನ ಹೆಚ್ಚಳ, ಪಿಂಚಣಿ ಹಾಗೂ ಉಚಿತ ಬಸ್‌ಪಾಸ್‌ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತಿದ್ದೇನೆ. ಭವಿಷ್ಯದಲ್ಲಿ ಈ ಬಗ್ಗೆ ಸದನದ ಹೊರಗೆ, ಒಳಗೆ ಧ್ವನಿಯಾಗುತ್ತೇನೆ ಎಂದರು.

ಮಾಜಿ ಸಚಿವೆ ಉಮಾಶ್ರೀ, ಅಶೋಕ ಮನಗೂಳಿ, ಐ.ಸಿ. ಪಟ್ಟಣಶೆಟ್ಟಿ, ಇಲಿಯಾಸ್‌ ಬೋರಾಮಣಿ, ಸುರೇಶ ಘೋಣಸಗಿ, ಎಸ್‌.ಎಂ. ಪಾಟೀಲ ಗಣಿಯಾರ, ಈರಗೊಂಡ ಬಿರಾದಾರ, ಸಿದ್ದು ಗೌಡನವರ, ವೈಜನಾಥ ಕರ್ಪೂರಮಠ, ಸಜಾದ ಪೀರಾ ಮುಶ್ರೀಫ್‌, ವಸಂತ ಹೊನಮೊಡೆ, ಅಭಯಕುಮಾರ ನಾಂದ್ರೆಕರ, ಸುಭಾಷ್‌ ಛಾಯಾಗೋಳ, ಸಂಗಮೇಶ ಬಬಲೇಶ್ವರ, ಡಾ| ಗಂಗಾಧರ ಸಂಬಣ್ಣಿ, ಟಪಾಲ ಇಂಜಿಯರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next