Advertisement

ಜನರ ಭಾವನೆಗಳ ಜತೆ ಚೆಲ್ಲಾಡುವ ಟ್ರಂಪ್‌, ಮೋದಿ ತಂತ್ರಗಾರಿಕೆ: ಸ್ಯಾಮ್‌ ಪಿತ್ರೋಡ

08:55 AM Apr 10, 2019 | Sathish malya |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಚುನಾವಣಾ ಪ್ರಚಾರಾಭಿಯಾನ ತಂತ್ರಗಾರಿಕೆ ಮತ್ತು ವಾಕ್‌ ಶೈಲಿ ಒಂದೇ ರೀತಿಯದ್ದಾಗಿದೆ. ಇಬ್ಬರೂ ಜನರ ಭಾವನೆಗಳ ಜತೆ ಚೆಲ್ಲಾಟವಾಡುತ್ತಾರೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಮುಖ್ಯಸ್ಥರಾಗಿರುವ ಸ್ಯಾಮ್‌ ಪಿತ್ರೋಡ ಹೇಳಿದ್ದಾರೆ.

Advertisement

ಡಿಜಿಟಲ್‌ ಯುಗದಲ್ಲಿ ರಾಜಕೀಯ ಪ್ರಚಾರಾಭಿಯಾನದ ಕುರಿತು ಮಾತನಾಡುತ್ತಿದ್ದ ಪಿತ್ರೋಡ (ಇವರು ದೀರ್ಘ‌ಕಾಲದಿಂದ ಗಾಂಧಿ ಕುಟುಂಬದ ಸಲಹೆಗಾರರಾಗಿದ್ದಾರೆ) ಆಧುನಿಕ ಡಿಜಿಟಲ್‌ ಯುಗವು ಕಾಲೋಚಿತ ಬೈಟ್‌, ಗಿಮಿಕ್‌ ಮತ್ತು ವಿಡಿಯೋ ಗಳನ್ನು ಒಳಗೊಂಡಿದ್ದು ಇದು ಪತ್ರಕರ್ತರು ಕೈಗೊಳ್ಳುವ ಸಾಂಪ್ರದಾಯಿಕ ಆಳ ವಿಶ್ಲೇಷಣೆಗೆ ವಿರುದ್ಧವಾಗಿದೆ ಎಂದು ಹೇಳಿದರು.

ಒಬಾಮಾ ಕಾಲದಲ್ಲೇ ಚುನಾವಣಾ ಪ್ರಚಾರಾಭಿಯಾನಕ್ಕೆ ಡಿಜಿಟಲ್‌ ಟೆಕ್ನಾಲಜಿಯ ನೈಜ ಬಳಕೆ ಆರಂಭವಾಗಿತ್ತು ಎಂದು ಹೇಳಿದ ಪಿತ್ರೋಡ, ಯುವ ಜನರನ್ನು ಸೆಳೆಯುವ ಉದ್ದೇಶದಿಂದ ಡಿಜಿಟಲ್‌ ತಂತ್ರಜ್ಞಾನವನ್ನು ಪ್ರಚಾರಾಭಿಯಾನಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಂಡವರಲ್ಲಿ ಬರಾಕ್‌ ಒಬಾಮಾ ಅವರೇ ಮೊದಲ ನಾಯಕರು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next