ಮೂಲ್ಕಿ: ಕಿನ್ನಿಗೋಳಿಯ ಮೂರು ಕಾವೇರಿ ಬಳಿ ವಾಸವಿರುವ ಕೆಪಿಸಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಮೂಡುಬಿದಿರೆ -ಮೂಲ್ಕಿಯ ಪಕ್ಷದ ಚುನಾವಣ ಉಸ್ತುವಾರಿ ಮಿಥುನ್ ರೈ ಅವರಿಗೆ ಜೀವ ಬೆದರಿಕೆ ಹಾಕಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರಗಿಸಿ ಸೂಕ್ತ ಭಧ್ರತೆ ಒದಗಿಸುವಂತೆ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೋಹನ್ ಕೋಟ್ಯಾನ್ ಮೂಲ್ಕಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
Advertisement
ಮುಂಬಯಿ ಹನಿ ಹಿಂದೂಸ್ಥಾನಿ ಎಂಬ ಹೆಸರಿನಲ್ಲಿ ಮಿಥುನ್ ರೈ ಗುಂಡಿನೂಟ ಮಾಡಿಸುವುದಾಗಿ ಪೋಸ್ಟ್ ಹಾಕಿ ಇತರ ಬರವಣಿಗೆಯಲ್ಲಿ ಜೀವ ಭಯವನ್ನು ಮಾಡಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಿ ಅವರಿಗೆ ರಕ್ಷಣೆ ಒದಗಿಸುವಂತೆ ಮನವಿ ಸಲ್ಲಿಸಿದೆ.