Advertisement

ಗೋವಾ: ಸರ್ಕಾರ ವಿದ್ಯುತ್ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ: ಮೈಕಲ್ ಲೋಬೊ ಆರೋಪ

02:49 PM Apr 19, 2022 | Team Udayavani |

ಪಣಜಿ: ವಿದ್ಯುತ್ ಲೋಡ್ ಶೆಡ್ಡಿಂಗ್‍ನಿಂದಾಗಿ ಬಾರದೇಸ್ ಮತ್ತು ಪೆಡ್ನೆ ತಾಲೂಕಿನ ಜನರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಕೂಡಲೇ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಈ ಕುರಿತಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಪ್ರತಿಪಕ್ಷದ ನಾಯಕ ಮೈಕಲ್ ಲೋಬೊ ಹೇಳಿದರು.

Advertisement

ಉತ್ತರ ಗೋವಾದ ಕಾಂಗ್ರೆಸ್ ಕಛೇರಿಯಲ್ಲಿ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ- ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರೀಕರ್ ನಿಧನದ ನಂತರ ಅಧಿಕಾರಕ್ಕೆ ಬಂದ ಸರ್ಕಾರ ವಿದ್ಯುತ್ ಸಮಸ್ಯೆಯನ್ನು ನಿರ್ಲಕ್ಷಿಸಿದೆ. ಮುಖ್ಯಮಂತ್ರಿಗಳು ವಿತ್ತ ಸಚಿವರಾಗಿದ್ದರೂ ಕೂಡ 300 ರಿಂದ 500 ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ನೀಡದೆಯೇ ವಿದ್ಯುತ್ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಮನೋಹರ್ ಪರೀಕರ್ ರವರು ಕರಾವಳಿ ಭಾಗದ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಮುಂದದಾಗಿದ್ದರು. ಕಾಮಗಾರಿ ಟೆಂಡರ್ ಕೂಡ ನೀಡಲಾಗಿತ್ತು. ಆದರೆ ಪರೀಕರ್ ರವರ ನಿಧನದ ನಂತರ ನೂತನ ವಿದ್ಯುತ್ ಸಚಿವರು ಈ ಕಡತವನ್ನು ಕಣ್ಮರೆಯಾಗಿಸಿದರು. ಹಾಲಿ ಮುಖ್ಯಮಂತ್ರಿಗಳು ಹಣಕಾಸು ಸಚಿವರಾಗಿದ್ದರೂ ಕೂಡ 300 ರಿಂದ 500 ಕೋಟಿ ರೂಗಳ ಕಾಮಗಾರಿಗೆ ಅನುಮೋದನೆ ನೀಡುತ್ತಿಲ್ಲ ಎಂದು ಮೈಕಲ್ ಲೋಬೊ ಆರೋಪಿಸಿದರು.

ಸದ್ಯ ಬಿಸಿಲು ಹೆಚ್ಚಾಗಿದ್ದು ವಿದ್ಯುತ್ ಕಡಿತದಿಂದಾಗಿ ಜನತೆಗೆ ಹೆಚ್ಚಿನ ತೊಂದರೆಯುಂಟಾಗುತ್ತಿದೆ. ರಾಜ್ಯವು ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಪ್ರವಾಸೋದ್ಯಮದಲ್ಲಿ ರಾಜ್ಯವು ಹೆಚ್ಚಿನ ಆದಾಯ ಪಡೆದುಕೊಳ್ಳುತ್ತದೆ. ಆದರೆ ನೀರು ಮತ್ತು ವಿದ್ಯುತ್ ಯೋಜನೆಗಳಿಗಾಗಿ ಸರ್ಕಾರವು ಸಾಲ ಮಾಡಬೇಕಾಗಲಿದೆ ಎಂದು ಪ್ರತಿಪಕ್ಷದ ನಾಯಕ ಮೈಕಲ್ ಲೋಬೊ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next