Advertisement

ನಾನೂ ಟಿಕೆಟ್‌ ಪ್ರಬಲ ಆಕಾಂಕ್ಷಿ: ಭೀಮಣ್ಣ

09:38 PM Jul 06, 2021 | Team Udayavani |

 

Advertisement

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಗಮ್‌ ಹಚ್ಚಿಕೊಂಡು ಕೂತಿಲ್ಲ­ಪಕ್ಷದ ಬಲವರ್ಧನೆಗೆ ಎಲ್ಲರೂ ಒಂದಾಗಿ ಕಾರ್ಯ

ಶಿರಸಿ: ನಾನು ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಟಿಕೆಟ್‌ ನೀಡುವಂತೆ ಕೇಳುವ ಪ್ರಬಲ ಆಕಾಂಕ್ಷಿ. ಈ ಕ್ಷೇತ್ರದ ಜನರ ಸಂಕಷ್ಟಕ್ಕೆ ಸದಾ ಸ್ಪಂದಿಸುತ್ತಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು.

ಅವರು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ, ಕಳೆದ ಅವ  ಧಿಯಲ್ಲಿ ಸೋತ ಅಭ್ಯರ್ಥಿಗಳು ಆಯಾ ಕ್ಷೇತ್ರದಲ್ಲಿ ಕೆಲಸ ಮಾಡಲು, ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ಪಕ್ಷದ ವರಿಷ್ಠರೇ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ, ಸ್ಪಂದನೆಯಲ್ಲಿ ತೊಡಗಿಕೊಂಡಿದ್ದೇವೆ. ಇಷ್ಟಾಗಿಯೂ ಪಕ್ಷ ಸೂಚಿಸಿದಂತೆ ನಡೆದುಕೊಳ್ಳಲು ಸಿದ್ಧ. ವಿಧಾನಸಭಾ ಚುನಾವಣೆ ಎರಡು ವರ್ಷ ದೂರ ಇದೆ. ಆದರೂ ವಿಷಯ ಪ್ರಸ್ತಾಪ ಆಗುತ್ತಿದ್ದರಿಂದ ಹೇಳಿರುವೆ. ಪಕ್ಷದ ಕಾರ್ಯಕರ್ತರೆಲ್ಲರೂ ಟಿಕೆಟ್‌ ಕೇಳಲು ಆಕಾಂಕ್ಷಿತರೇ. ತೀರ್ಮಾನ ವರಿಷ್ಠರದ್ದು. ಪಕ್ಷದ ಶಿಸ್ತಿನ ಸಿಪಾಯಿ ನಾನು ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಬದಲಾವಣೆ ಪ್ರಸ್ತಾಪ ಇದೆ. ನಾನು ರಾಜೀನಾಮೆ ನೀಡಿಯೇ ಎರಡು ವರ್ಷ ಆಗಿದೆ. ವರಿಷ್ಠರು ಸ್ವೀಕಾರ ಮಾಡಿಲ್ಲ. ನಾನೇ ಮುಂದುವರಿಯುವಂತೆ ಹೇಳಿದ್ದರಿಂದ ಕೆಲಸ ಮಾಡುತ್ತಿದ್ದೇವೆ. ಪಕ್ಷದ ಸಂಘಟನೆ ಜಿಲ್ಲೆಯಲ್ಲಿ ಬಲವಾಗಿದೆ. ಕೋವಿಡ್‌ ಅಲೆ ಸಂದರ್ಭದಲ್ಲೂ ಕಾಂಗ್ರೆಸ್‌ ಬಹುಮುಖೀಯಾಗಿ ಸ್ಪಂದಿಸಿದೆ. ನಾನೇನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಗಮ್‌ ಹಚ್ಚಿಕೊಂಡಿಲ್ಲ. ಪಕ್ಷದ ವರಿಷ್ಠರ ಸೂಚನೆ ನೀಡಿದರೆ ಹಸ್ತಾಂತರಿಸಲು ಸಿದ್ಧ. ಕಳೆದ ಹನ್ನೆರಡು ವರ್ಷಗಳಿಂದ ಪಕ್ಷದ ಸೇವಕನಾಗಿ ಕಾರ್ಯ ಮಾಡುತ್ತಿದ್ದೇನೆ.

Advertisement

ಜಿಲ್ಲಾ ಪ್ರಮುಖರು, ಜನಪ್ರತಿನಿಧಿಗಳು, ನಾಯಕ ಆರ್‌.ವಿ. ದೇಶಪಾಂಡೆ, ಪಕ್ಷದ ಅಧ್ಯಕ್ಷರ, ಪ್ರಮುಖರ ಮಾರ್ಗದರ್ಶನದಲ್ಲಿ ಮಾಡುತ್ತಿದ್ದೇವೆ. ಪಕ್ಷದ ಬಲವರ್ಧನೆಗೆ ಎಲ್ಲರೂ ಒಂದಾಗಿ ಕಾರ್ಯ ಮಾಡಬೇಕು. ಈ ಸಂಗತಿಗಳು ನಾಲ್ಕು ಗೋಡೆಯೊಳಗ ಚರ್ಚೆ ಆಗಬೇಕು. ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಗೂ ಕಾಂಗ್ರೆಸ್‌ ಸಜ್ಜಾಗಿದೆ ಎಂದು ಹೇಳಿದರು. ಕೇಂದ್ರ ರಾಜ್ಯ ಸರಕಾರಗಳು ಕೋವಿಡ್‌ ನಿರ್ವಹಣೆಯಲ್ಲಿ ಪೂರ್ಣಪ್ರದವಾಗಿಲ್ಲ. ಮೋದಿ ಅವರು ಉದ್ಯೋಗ ಕೊಡುತ್ತೇನೆ ಹೇಳಿ ಬಜೆ ಮಾರಿ ಅನ್ನುವಂತೆ ಆಗಿದೆ. ಕೋವಿಡ್‌ನಿಂದ ಮೃತಪಟ್ಟವರಿಗೆ ನೆರವಾಗಲು ಸರಕಾರ ಹೇಳಿದಂತೆ ಒಂದು ಲಕ್ಷ ರೂ. ಸಿಕ್ಕಿತೋ ಇಲ್ಲವೋ ಎಂದು ಕಾಂಗ್ರೆಸ್‌ ಚೆಕ್‌ ಮಾಡುತ್ತಿದೆ. ಕೋವಿಡ್‌ನಿಂದ ಮೃತಪಟ್ಟವರಿಗೆ ಸರ್ಟಿಫಿಕೆಟ್‌ ಇರೋದೂ ಡೌಟಿದೆ. ಅದರ ಚೆಕ್‌ ಕೂಡ ಮಾಡುವುದಾಗಿ ಹೇಳಿದರು.

ಶಿರಸಿಗೆ ಡಿ.ಕೆ. ಶಿವಕುಮಾರ ಅವರು ಜು. 7ರಂದು ಬೆಳಗ್ಗೆ 11ಕ್ಕೆ ಬರುತ್ತಾರೆ. ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ ಕೇಂದ್ರ ಹಾಗೂ ರಾಜ್ಯ ಸರಕಾರ ತೈಲ ಬೆಲೆ ಏರಿಕೆ ಮಾಡಿದ್ದನ್ನು ಖಂಡಿಸಿ ಸೈಕಲ್‌ ಜಾಥಾ ನಡೆಸಲಿದೆ. ಮಾರಿಕಾಂಬಾ ದೇವಸ್ಥಾನದಿಂದ ಡೆವಲಪ್‌ಮೆಂಟ್‌ ಪೆಟ್ರೋಲ್‌ ಬಂಕ್‌ ತನಕ ಶಿವಕುಮಾರ ಅವರು ಸೈಕಲ್‌ ತುಳಿಯಲಿದ್ದಾರೆ. ಪೆಟ್ರೋಲ್‌ ಏರಿಕೆಯಿಂದ ವಾಹನ ಓಡಿಸಲು ಪೆಟ್ರೋಲ್‌ ಹಾಕಲೂ ಆಗದಷ್ಟು ದುಬಾರಿ ಆಗಿದೆ ಎಂದೂ ಹೇಳಿದ ಭೀಮಣ್ಣ, ಮಧ್ಯಾಹ್ನ 3ಕ್ಕೆ ಕೋವಿಡ್‌ ನಿರ್ವಹಣೆ, ಮೂರನೇ ಅಲೆ ಎದುರಿಸಲು ಕಾಂಗ್ರೆಸ್‌ ಪಾತ್ರದ ಕುರಿತು ಸಂವಾದ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಸಲಿದ್ದಾರೆ ಎಂದರು. ಪಕ್ಷದ ವೀಕ್ಷಕ ವಿ.ಎಸ್‌. ಆರಾಧ್ಯ, ಜಿಲ್ಲಾ ವಕ್ತಾರ ದೀಪಕ ದೊಡ್ಡೊರು, ಉಪಾಧ್ಯಕ್ಷ ಎಸ್‌. ಕೆ. ಭಾಗವತ್‌, ಜಗದೀಶ ಗೌಡ, ಅಬ್ಟಾಸ ತೋನ್ಸೆ, ಶ್ರೀನಿವಾಸ ನಾಯ್ಕ, ಬಸವರಾಜ್‌ ದೊಡ್ಮನಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next