Advertisement
ಸೋಮವಾರ ಬೆಳಗ್ಗೆ ನಗರದ ಊಟಿ ರಸ್ತೆಯಲ್ಲಿರುವ ಚಿಂತಾಮಣಿ ಗಣಪತಿ ದೇವಾಲಯಕ್ಕೆ ಬೆಳಗ್ಗೆ 11ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿ ಕೇಶವ ಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ, ಸಂಸದ ಆರ್ ಧ್ರುವನಾರಾಯಣ ಹಾಗೂ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶಗುಂಡುರಾವ್ ಅವರೊಂದಿಗೆ ಚಿಂತಾಮಣಿ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
Related Articles
Advertisement
ಜಿಲ್ಲಾ ಪೊಲೀಸ್ ಅಧಿಕಾರಿ ರವಿ ಚೆನ್ನಣ್ಣನವರ್ ಹಾಜರಿದ್ದು ನಾಮಪತ್ರ ಸಲ್ಲಿಸಲು ಕೇವಲ ಐದು ಜನರಿಗೆ ಮಾತ್ರ ಅವಕಾಶ ಎಂದು ಹೇಳಿದಾಗ ಅಭ್ಯರ್ಥಿ ಕೇಶವಮೂರ್ತಿ, ಉಸ್ತುವಾರಿ ಸಚಿವ ಡಾ ಎಚ್.ಸಿ ಮಹದೇವಪ್ಪ, ದಿನೇಶ ಗುಂಡುರಾವ್ ಹಾಗೂ ಕಾಗಲಾವಾಡಿ ಮಾದಪ್ಪ ಒಳಹೋಗಿ ಚುನಾವಣಾಧಿಕಾರಿ ಜಗದೀಶ್ ಅವರಿಗೆ ನಾಮ ಪತ್ರ ಸಲ್ಲಿಸಿದರು.
ಕಾಂಗ್ರೆಸ್ ಗೆಲ್ಲುವ ವಿಶ್ವಾಸ: ನಂತರ ಡಾ ಎಚ್.ಸಿ ಮಹದೇವಪ್ಪ ಮಾತನಾಡಿ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭೂತಪೂರ್ವ ಜಯ ಗಳಿಸಲಿದೆ ಎಂದರು. 8 ವರ್ಷದ ಅಧಿಕಾರದ ಕೆಲಸ ಹಾಗೂ 6 ತಿಂಗಳಿನ ಅಭಿವೃದ್ಧಿ ಕ್ಷೇತ್ರದ ಜನತೆಯ ಮುಂದಿದೆ ಇದನ್ನು ಮುಂದಿಟ್ಟುಕೊಂಡೆ ತಾವು ಹಾಗೂ ಸಂಸದ ಆರ್ ಧ್ರುವ ನಾರಾಯಣ ಎರಡೆರಡು ಬಾರಿ ತಾಲೂಕನ್ನು ಸುತ್ತಿದ್ಧೇವೆ. ಜನತೆಗೆ ಕೆಲಸ ಮಾಡುವವರು ಯಾರು ಸೋಮಾರಿಗಳು ಯಾರು ಎನ್ನುವುದು ತಿಳಿದಿದೆ.
ಜನತೆ ಕಾಂಗ್ರೆಸ್‌ನ್ನೆ ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು. ಕಳಲೆ ಕೇಶವಮೂರ್ತಿ ಮಾತನಾಡಿ, 2 ಬಾರಿ ಜೆಡಿಎಸ್ ನಿಂದ ನಿಂತು ಸೋತು ಬಳಲಿದ್ದೆœàನೆ ಇದೊಂದು ಬಾರಿ ಅಧಿಕಾರ ಬೇಡುತ್ತಿದ್ದೆœàನೆ ಜನತೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ಚಾಮರಾಜನಗರ ಉಸ್ತುವಾರಿ ಸಚಿವ ಯು.ಟಿ ಖಾದರ್, ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ವಾಸು, ಸೋಮಣ್ಣ, ಪುಟ್ಟರಂಗಶೆಟ್ಟಿ, ಕಾಂಗ್ರೆಸ್ ಯುವ ಮುಖಂಡ ಸುನಿಲ್ ಬೋಸ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ|ವಿಜಯ್ ಕುಮಾರ್, ಮುಖಂಡರಾದ ಕೆ.ಮರಿಗೌಡ, ಮೂಗಶೆಟ್ಟಿ, ಕೆ.ಮಾರುತಿ, ಸೀತಾರಾಮ್, ಇಂಧನ್ ಬಾಬು, ಗುರುಪಾದಸ್ವಾಮಿ ಇತರರು ಇದ್ದರು.