Advertisement

ಕುಮಾರಗೆ ಹಣಕಾಸು ಖಾತೆ ಹಂಚಿಕೆ ಸೂತ್ರ ಪ್ರಕಟ

06:00 AM Jun 02, 2018 | |

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರಕ್ಕೆ ಮೊದಲ ಸವಾಲಾಗಿದ್ದ “ಖಾತೆ’ಗಳ ಹಂಚಿಕೆ ಸಮಸ್ಯೆ ಬಗೆಹರಿದಿದೆ. ಮುಂದಿನ ದಿನಗಳಲ್ಲಿ ನಿಗಮ ಮಂಡಳಿ ನೇಮಕಾತಿ ಸೇರಿ ಸರ್ಕಾರದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲು ಸಮನ್ವಯ ಸಮಿತಿಯೂ ಅಸ್ತಿತ್ವಕ್ಕೆ ಬಂದಿದೆ. ಜತೆಗೆ, ಕುಮಾರಸ್ವಾಮಿ ಐದು ವರ್ಷ ಮುಖ್ಯಮಂತ್ರಿಯಾಗಿರುವುದು ಹಾಗೂ ಲೋಕಸಭೆ ಚುನಾವಣೆಯನ್ನೂ ಮೈತ್ರಿಯೊಂದಿಗೆ ಎದುರಿಸಲು ತೀರ್ಮಾನ ಕೈಗೊಳ್ಳಲಾಗಿದೆ.

Advertisement

ಬುಧವಾರ ಮಧ್ಯಾಹ್ನ 2 ಗಂಟೆಗೆ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದ್ದು, ಹಣಕಾಸು, ಇಂಧನ, ಲೋಕೋಪಯೋಗಿ ಖಾತೆ ಸೇರಿ 12 ಖಾತೆ ಪಡೆಯುವಲ್ಲಿ ಜೆಡಿಎಸ್‌ ಯಶಸ್ವಿಯಾಗಿದೆ. ಗುಪ್ತದಳ ಹೊರತುಪಡಿಸಿದ ಗೃಹ, ಜಲಸಂಪನ್ಮೂಲ, ಕೈಗಾರಿಕೆ, ಕಂದಾಯ, ಸಮಾಜ
ಕಲ್ಯಾಣ ಸೇರಿ 22 ಖಾತೆಗಳಿಗೆ ಕಾಂಗ್ರೆಸ್‌ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಸಮನ್ವಯ ಸಮಿತಿಗೆ ಸಿದ್ದರಾಮಯ್ಯ ಅಧ್ಯಕ್ಷರಾಗಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ನಿಗಮ ಮಂಡಳಿಗಳಿಗೂ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಮಾಡುವ ಸಂಬಂಧವೂ ಸೂತ್ರ ಸಿದಟಛಿಗೊಂಡಿದ್ದು, ಒಟ್ಟು ಸ್ಥಾನಗಳ ಪೈಕಿ 3ನೇ ಎರಡರಷ್ಟು ಕಾಂಗ್ರೆಸ್‌ಗೆ, 3ನೇ ಒಂದರಷ್ಟು ಜೆಡಿಎಸ್‌ಗೆ ದೊರೆಯಲಿವೆ. ರಾಜ್ಯ  ಪಾಲರು ದೆಹಲಿಯಿಂದ ಜೂನ್‌ 5ರ ಬಳಿಕ ಬರುವ ಹಿನ್ನೆಲೆಯಲ್ಲಿ ಬುಧವಾರ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

ಶುಕ್ರವಾರ ಇಡೀ ದಿನ ಖಾತೆ ಹಂಚಿಕೆ, ಸಮನ್ವಯ ಸಮಿತಿ, ಸಮ್ಮಿಶ್ರ ಸರ್ಕಾರದ ಮಾರ್ಗಸೂಚಿ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿಯೇ ಎರಡೂ ಪಕ್ಷಗಳ ನಾಯಕರು ಸಮ್ಮಿಶ್ರ ಸರ್ಕಾರಕ್ಕೆ ಸರಳ ಸೂತ್ರಗಳನ್ನು ರಚಿಸಿ ಎರಡು ಪುಟಗಳ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು. ನಂತರ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎರಡೂ ಪಕ್ಷಗಳ ನಾಯಕರ ಸಮ್ಮುಖದಲ್ಲಿ ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಸುದ್ದಿಗೋಷ್ಠಿ ನಡೆಸಿ ಸಮ್ಮಿಶ್ರ ಸರ್ಕಾರದ ಸೂತ್ರ ಪ್ರಕಟಿಸಿದರು. 

ಸಮನ್ವಯ ಸಮಿತಿಗೆ ಸಿದ್ದರಾಮಯ್ಯ ಅಧ್ಯಕ್ಷ
ಸಮ್ಮಿಶ್ರ ಸರ್ಕಾರ ಸುಗಮವಾಗಿ ಕಾರ್ಯನಿರ್ವಹಿಸಲು ಮೇಲುಸ್ತುವಾರಿಗೆ ಐದು ಜನರ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ. ನಿರೀಕ್ಷೆಯಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮನ್ವಯ ಸಮಿತಿಯ ಅಧ್ಯಕ್ಷರ ನ್ನಾಗಿ ನೇಮಿಸಲಾಗಿದೆ. ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಅಲಿಯವರನ್ನು ಸಮನ್ವಯ ಸಮಿತಿಯ ಸಂಯೋಜಕರಾಗಿ ನೇಮಿಸಲಾಗಿದೆ.

Advertisement

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ
ಕೆ.ಸಿ. ವೇಣುಗೋಪಾಲ್‌ ಸಮನ್ವಯ ಸಮಿತಿ ಸದಸ್ಯರಾಗಿರುತ್ತಾರೆ. ಸಮಿತಿ ಪ್ರತಿ ತಿಂಗಳು ಸಭೆ ಸೇರಿ ಸರ್ಕಾರದಲ್ಲಿನ ಗೊಂದಲಗಳ ನಿವಾರಣೆಗೆ ಕಾರ್ಯ ನಿರ್ವಹಿಸಲಿದೆ. ಈ ಸಮಿತಿ ಮತ್ತೂಂದು ಶಕ್ತಿ ಕೇಂದ್ರವಾಗಿ ಕಾರ್ಯ ನಿರ್ವಹಿಸದೆ ಸರ್ಕಾರದಲ್ಲಿ ಸಣ್ಣಪುಟ್ಟ ಗೊಂದಲಗಳು ಉಂಟಾದರೆ ಪರಿಹರಿಸುವ ಕಾರ್ಯ ಮಾಡುತ್ತದೆ ಎಂದು ಸ್ಪಷ್ಟ ಪಡಿಸಿದರು. ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ಕೆ.ಎಚ್‌.ಮುನಿಯಪ್ಪ, ರೆಹಮಾನ್‌ಖಾನ್‌, ಡಿ.ಕೆ. ಶಿವಕುಮಾರ್‌ ಹಾಗೂ ಜೆಡಿಎಸ್‌ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಅಲಿ ಉಪಸ್ಥಿತರಿದ್ದರು. 

ಯಾವ ಖಾತೆ ಯಾರ್ಯಾರಿಗೆ?
ಜೆಡಿಎಸ್‌ಗೆ 12 ಸಚಿವ ಸ್ಥಾನ 
ಮುಖ್ಯಮಂತ್ರಿ, ಹಣಕಾಸು, ಲೋಕೋಪಯೋಗಿ, ಇಂಧನ, ಸಹಕಾರ, ಪ್ರವಾಸೋದ್ಯಮ, ಉನ್ನತ, ಪ್ರಾಥಮಿಕ ಶಿಕ್ಷಣ, ಪಶು ಸಂಗೋಪನೆ, ತೋಟಗಾರಿಕೆ ಮತ್ತು ರೇಷ್ಮೆ, ಸಣ್ಣ ಕೈಗಾರಿಕೆ, ಸಾರಿಗೆ, ಸಣ್ಣ ನೀರಾವರಿ, ವಾರ್ತಾ ಇಲಾಖೆ, ಗುಪ್ತಚರ, ಯೋಜನೆ ಮತ್ತು ಸಾಂಖೀಕ ಇಲಾಖೆ.

ಕಾಂಗ್ರೆಸ್‌ಗೆ 22 ಸಚಿವ ಸ್ಥಾನ
ಉಪ ಮುಖ್ಯಮಂತ್ರಿ, ಗೃಹ, ಜಲ ಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ, ಬೃಹತ್‌ ಕೈಗಾರಿಕೆ ಮತ್ತು ಸಕ್ಕರೆ, ಆರೋಗ್ಯ, ಕಂದಾಯ, ಮುಜರಾಯಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಕೃಷಿ, ವಸತಿ, ವೈದ್ಯಕೀಯ ಶಿಕ್ಷಣ, ಸಮಾಜ ಕಲ್ಯಾಣ, ಅರಣ್ಯ-ಪರಿಸರ, ಕಾರ್ಮಿಕ, ಗಣಿ-ಭೂ ವಿಜ್ಞಾನ, ಮಹಿಳಾ -ಮಕ್ಕಳ ಕಲ್ಯಾಣ, ಆಹಾರ-ನಾಗರಿಕ ಪೂರೈಕೆ, ಹಜ್‌, ವಕ್ಫ್, ಅಲ್ಪಸಂಖ್ಯಾತ ಇಲಾಖೆ, ಕಾನೂನು-ಸಂಸದೀಯ ವ್ಯವಹಾರ, ಐಟಿ-ಬಿಟಿ, ವಿಜ್ಞಾನ -ತಂತ್ರಜ್ಞಾನ, ಯುವಜನ ಸೇವೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಂದರು.

ರಾಜ್ಯಪಾಲರು ಭಾನುವಾರ ದೆಹಲಿಗೆ ತೆರಳುತ್ತಿರುವುದರಿಂದ, ಬುಧವಾರ ಮಧ್ಯಾಹ್ನ 2 ಗಂಟೆಗೆ ರಾಜಭವನದಲ್ಲಿ ಪ್ರಮಾಣ ವಚನ ಕಾರ್ಯ ಕ್ರಮ ನಡೆಯಲಿದೆ.
● ಕುಮಾರಸ್ವಾಮಿ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next