Advertisement

ಮೋದಿ ಪ್ರಧಾನಿಯಾಗಲು ಕಾಂಗ್ರೆಸ್‌ ಕಾರಣ: ಮಲ್ಲಿಕಾರ್ಜುನ ಖರ್ಗೆ

10:09 PM Jan 05, 2023 | Team Udayavani |

ಪಾಟ್ನಾ:ಕಾಂಗ್ರೆಸ್‌ ದೇಶಕ್ಕೆ ಏನು ಮಾಡಿದೆ ಅಂತ ಬಿಜೆಪಿಗರು ಕೇಳುತ್ತಿರುತ್ತಾರೆ.ಆದರೆ, ನರೇಂದ್ರ ಮೋದಿ ಇಂದು ಪ್ರಧಾನಿಯಾಗಿರುವುದಕ್ಕೆ ಕಾರಣವೇ ಕಾಂಗ್ರೆಸ್‌ ಎಂದು ಆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Advertisement

ಬಿಹಾರದ ಬಂಕಾಜಿಲ್ಲೆಯಲ್ಲಿ ಸಾವಿರ ಕಿ.ಮೀ. ಕಾಲುನಾಡಿಗೆ ಮೆರವಣಿಗೆಗೆ ಚಾಲನೆ ನೀಡಿ, ಮಾತನಾಡಿದ ಅವರು, ಸ್ವಾತಂತ್ರ್ಯ ಬಳಿಕ ಕಾಂಗ್ರೆಸ್‌ ಏನೂ ಸಾಧಿಸಿಲ್ಲ ಎನ್ನುವ ಆರೋಪ ಆಗಾಗ ಕೇಳಿಬರುತ್ತಿರುತ್ತದೆ.ಆದರೆ, ಕಳೆದ 70 ವರ್ಷದಿಂದ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕಾಂಗ್ರೆಸ್‌ ಪೋಷಿಸಿದ್ದರಿಂದಲೇ, ನರೇಂದ್ರ ಮೋದಿ ಪ್ರಧಾನಿಯಾಗಲು ಸಾಧ್ಯವಾಗಿದೆ.

ಬಡವರ ಮಗನಾದ ನನ್ನಂಥವನು ಕೂಡ ರಾಷ್ಟ್ರೀಯ ಪಕ್ಷವನ್ನು ಮುನ್ನಡೆಸಲು ಸಾಧ್ಯವಾಗಿದೆ ಎಂದಿದ್ದಾರೆ.ಜತೆಗೆ ದೇಶವನ್ನು ಸ್ವತಂತ್ರ್ಯಗೊಳಿಸಲು ಹೋರಾಡಿದ್ದು ಕೂಡ ಕಾಂಗ್ರೆಸ್‌ ಹೊರತು, ಪ್ರಶ್ನಿಸುವವರಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ಚಾಟಿ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next