Advertisement

ಸರ್ವ ಧರ್ಮಗಳನ್ನು ಸಮಭಾವದಿಂದ ಕಾಣುವ ಏಕೈಕ ಪಕ್ಷ ಕಾಂಗ್ರೆಸ್‌ –ಮಹಮ್ಮದ್‌ ಶೀಶ್‌

01:07 PM May 01, 2023 | Team Udayavani |

ಉಡುಪಿ : ಮತದಾರರು ಅನ್ಯ ಪಕ್ಷಗಳ ಬಣ್ಣದ ಮಾತುಗಳಿಗೆ, ಧಾರ್ಮಿಕ ಪ್ರಚೋದನಾಕಾರಿ ಮಾತುಗಳಿಗೆ ಈ ಬಾರಿ ಮರುಳಾಗಬಾರದು. ದೇಶದ ಪರಿಸ್ಥಿತಿ ಬಿಜೆಪಿ ಸರಕಾರದಿಂದ ಬಿಗಡಾಯಿಸಿದೆ. ಸಮಾಜದ ಸೌಹಾರ್ದತೆಗೆ ಬಿಜೆಪಿ ಹಾಗೂ ಅದರ ಬೆಂಬಲಿತ ಸಂಘಟನೆಗಳು ಕೊಳ್ಳಿ ಇಟ್ಟಿವೆ. ಉತ್ತರ ಪ್ರದೇಶವಂತೂ ಗೂಂಡಾ ರಾಜ್ಯ ಆಗಿದೆ. ನಳಿನ್‌ ಕುಮಾರ್‌ ಕಟೀಲು ಹಾಗೂ ಬೊಮ್ಮಾಯಿಯಂತಹ ನಾಯಕರು ಸಂವೇದನೆಯನ್ನು ಕಳೆದು ಕೊಂಡು ಮಾತಾಡುತ್ತಾ ಇದ್ದಾರೆ. ಬಿಜೆಪಿಯನ್ನು ದೂರ ಇಡಲು ಕ್ಷೇತ್ರದ ಎಲ್ಲಾ ಮತದಾರರು ಕೇವಲ ಕಾಂಗ್ರೆಸ್‌ಗೆ ಮತ ಹಾಕಿದರೆ ಮಾತ್ರ ಸಾಧ್ಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ಮುಖಂಡ ಮಹಮ್ಮದ್‌ ಶೀಶ್‌ ಹೇಳಿದರು.

Advertisement

ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ್‌ ರಾಜ್‌ ಕಾಂಚನ್‌ ಪರ ಇಂದಿರಾ ನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಉಡುಪಿ ಬ್ಲಾಕ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮಹಾಬಲ ಕುಂದರ್‌ ಮಾತನಾಡಿ, ಈ ದೇಶದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ ಪಕ್ಷವೇ ಕಾಂಗ್ರೆಸ್‌, ಅತ್ಯಂತ ಕಷ್ಟದಲ್ಲಿದ್ದ ಭಾರತವನ್ನು ಸ್ವಾತಂತ್ರ್ಯದ ಬಳಿಕ ವಿಶ್ವ ಮಟ್ಟಕ್ಕೆ ಏರಿಸಿದ್ದೇ ಕಾಂಗ್ರೆಸ್‌ ಆದರೆ ಈಗ ಬಿಜೆಪಿ ಸರಕಾರ ವಿಶ್ವದಲ್ಲೇ ಭಾರತದ ಹೆಸರನ್ನು ಕೆಡಿಸುತ್ತ ಇದೆ ಎಂದರು.

ಡಾ| ಸುನೀತಾ ಶೆಟ್ಟಿ ಅವರು ಬಿಜೆಪಿಯ ಭೇಟಿ ಬಚಾವೋ ಭೇಟಿ ಪಡಾವೋ ಬರೀ ಬೋಗಸ್‌ ಘೋಷಣೆ ಎಂದರು. ಉಡುಪಿ ಬ್ಲಾಕ್‌ ಎಸ್‌ ಸಿ ಘಟಕದ ಅಧ್ಯಕ್ಷ ಗಣೇಶ್‌ ನೆರ್ಗಿಅವರು ಉಡುಪಿಯ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿ ಗಳನ್ನು ಮತದಾರರು ತುಲನೆ ಮಾಡಿ ಈ ಬಾರಿ ಪ್ರಬುದ್ಧ ನಿರ್ಧಾರ ಕೈಗೊಳ್ಳಬೇಕೆಂದು ಕರೆ ನೀಡಿದರು.

ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಸುಕೇಶ್‌ ಕುಂದರ್‌, ನಗರಸಭಾ ಸದಸ್ಯ ವಿಜಯ ಪೂಜಾರಿ, ಶರತ್‌ ಶೆಟ್ಟಿ, ಶಶಿರಾಜ್‌ ಕುಂದರ್‌, ಸುರೇಶ್‌ ಶೆಟ್ಟಿ ಬನ್ನಂಜೆ, ಕೀರ್ತಿ ಶೆಟ್ಟಿ ಅಂಬಲಪಾಡಿ, ಚಂದ್ರಮೋಹನ, ಆರ್‌. ಕೆ. ರಮೇಶ್‌ ಪೂಜಾರಿ, ಕೇಶವ ಕೋಟ್ಯಾನ್‌, ಮಾಜಿ ನಗರಸಭಾ ಸದಸ್ಯ ಸತೀಶ್‌ ಪುತ್ರನ್‌, ನಾಸೀರ್‌, ಹಮ್ಮದ್‌, ಸತೀಶ್‌ ಮಂಚಿ, ಸುರೇಂದ್ರ ಆಚಾರ್ಯ, ಪ್ರಭಾಕರ ನಾಯಕ್‌, ಮಮತಾ ಶೆಟ್ಟಿ, ಡಿಯೋನ್‌, ಜಯಾನಂದ್‌, ಪುರಂದರ ಸಾಲ್ಯಾನ್‌, ಶ್ರೀನಿವಾಸ ಹೆಬ್ಟಾರ್‌, ಜಯಶ್ರೀ ಶೇಟ್‌, ಲಕ್ಷ್ಮಣ ಶೆಣೈ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Advertisement

ಡಬಲ್‌ ಎಂಜಿನ್‌ ಕಿತ್ತು ಬಿಸಾಡಿ:
ಡಬಲ್‌ ಇಂಜಿನ್‌ ಸರಕಾರ ಎಂದು ಜನರಿಗೆ ಬಿಜೆಪಿ ಮರುಳು ಮಾಡಿದೆ. ಕೇಂದ್ರ ಸರಕಾರ ರಾಜ್ಯ ಸರಕಾರ ಉಡುಪಿ ನಗರ ಸಭೆ ಉಡುಪಿ ಜಿಲ್ಲಾ ಪಂಚಾಯತ್‌ ಎಲ್ಲವೂ ಬಿಜೆಪಿ ಬಳಿ ಇದ್ದೂ ಜನರಿಗೆ ವಿಶೇಷವಾದ ಲಾಭ ಏನೂ ಆಗಿಲ್ಲ. ಎಲ್ಲಾ ಇಂಜಿನ್‌ಗಳನ್ನು ಜನರು ಕಿತ್ತು ಬಿಸಾಡಬೇಕು, ಶುದ್ದ, ಪ್ರಾಮಾಣಿಕ ಹಾಗೂ ಪಾರದರ್ಶಕ ಸರಕಾರ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಾಧ್ಯ.
ಅಮೃತ್‌ ಶೆಣೈ,
ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ

ಪ್ರತಿಯೊಂದಕ್ಕೂ ಲಂಚ:
ಎಲ್ಲ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದೆ , ಜನ ಜೀವನ ಸಂಕಷ್ಟ ದಲ್ಲಿ ಇದೆ. ಬಿಜೆಪಿ ವ್ಯಾಪಕವಾದ ಭ್ರಷ್ಟಾಚಾರ ದಲ್ಲಿ ತೊಡಗಿದೆ. ಸರಕಾರಿ ನೌಕರಿ ಪಡೆಯಲೂ ಲಂಚ ಕೊಡಬೇಕಾದ ದಾರುಣ ಪರಿಸ್ಥಿತಿ ಯುವ ಜನತೆಗೆ ಒದಗಿದೆ.
ಪ್ರಶಾಂತ್‌ ಪೂಜಾರಿ, ಪ್ರಚಾರ ಸಮಿತಿ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next