Advertisement

ಕಾಂಗ್ರೆಸ್‌ ಪಿಎಫ್‌ಐ ಸಂಘಟನೆಯ ತಾಯಿ ಇದ್ದಂತೆ: ಸಚಿವ ಈಶ್ವರಪ್ಪ

07:59 PM Oct 03, 2022 | Team Udayavani |

ಕಲಬುರಗಿ: ಕಾಂಗ್ರೆಸ್‌ ಪಿಎಫ್‌ಐ ಸಂಘಟನೆಯ ತಾಯಿ ಇದ್ದಂತೆ. ಈ ಹಿಂದೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಪಿಎಫ್‌ಐ ಮೇಲಿನ ಕೇಸ್‌ ರದ್ದು ಮಾಡಿ ಅವರು ಬೆಳೆಯಲು ಅನುವು ಮಾಡಿಕೊಟ್ಟಿದೆ. ಅದು ತಾಯಿ ಮಮಕಾರ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಆಪಾದಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಿಎಫ್‌ಐ ಬೆಳೆಸುವುದರ ಹಿಂದೆ ಮುಸ್ಲಿಂ ಮತಗಳ ಮೇಲಿನ ಮಮಕಾರವೂ ಇದೆ. ಒಂದೆಡೆ ಮುಸ್ಲಿಮರನ್ನು ಓಲೈಸುತ್ತಾ, ಇನ್ನೊಂದೆಡೆ ಒಬಿಸಿಗಳನ್ನು ಅಹಿಂದ ಹೆಸರಿನಲ್ಲಿ ಉಸಿರುಗಟ್ಟಿಸಿ ಸಾಯಿಸಲಾಗುತ್ತಿದೆ. ಇದು ಕಾಂಗ್ರೆಸ್‌ ದ್ವಿಮುಖ ನೀತಿ. ಇದು ಸರಿಯಾದುದ್ದಲ್ಲ ಎಂದರು.

ಕಾಂಗ್ರೆಸ್‌ ಸೇರಿದಂತೆ ಇತರೆ ಸಂಘಟನೆಗಳು ಆರೋಪ ಮಾಡುವಂತೆ ಆರ್‌ಎಸ್‌ಎಸ್‌ ಯಾವುದೇ ಶಸ್ತ್ರಾಸ್ತ್ರ ಹಾಗೂ ಬಾಂಬ್‌ ಸ್ಫೋಟದ ತರಬೇತಿ ನೀಡಿಲ್ಲ. ಪಿಎಫ್‌ಐ ಬಾಂಬ್‌ ಸ್ಫೋಟದ ತರಬೇತಿ ನೀಡಿರುವುದು ಎಲ್ಲರಿಗೂ ತಿಳಿದ ವಿಷಯ. ನಮಗೆ ದೇಶಪ್ರೇಮ ಬಿಟ್ಟು ಬೇರೇನೋ ಗೊತ್ತಿಲ್ಲ. ಪಿಎಫ್ಐಗೆ ರಾಷ್ಟ್ರದ್ರೋಹ ಬಿಟ್ಟು ಬೇರೇನೂ ಗೊತ್ತಿಲ್ಲ. ದೇಶದ್ರೋಹಿ ಚಟುವಟಿಕೆಗಳನ್ನು ಮಾಡ್ತಿರೋದು ಪಿಎಫ್‌ಐ ಬ್ಯಾನ್‌ ಆದಂತೆ, ಮುಂದಿನ ದಿನಗಳಲ್ಲಿ ಎಸ್‌ಡಿಪಿಐ ಕೂಡ ಬ್ಯಾನ್‌ ಆಗಲಿದೆ ಎಂದರು.

ಎಲ್ಲ ಹೆಣ್ಣನ್ನು ತಾಯಿ ಎಂದು ಕರೆಯೋಕ್ಕಾಗಲ್ಲ. ಕೋಟ್ಯಂತರ ಜನರ ತಾಯಿ ಆರ್‌ಎಸ್‌ಎಸ್‌. ಅವರಿಗೆಲ್ಲಾ ರಾಷ್ಟ್ರಪ್ರೇಮವನ್ನು ಕಲಿಸಿದೆ. ದೇಶ ಹೀಗೆ ಇರಬೇಕು ಎನ್ನುವ ಅಭಿಮಾನ ಹುಟ್ಟಿಸಿದೆ. ಅದೆಲ್ಲದಕ್ಕೂ ಮುಖ್ಯವಾಗಿ ಪ್ರತಿ ಪ್ರಜೆಯೊಳಗೆ ನನ್ನ ದೇಶ, ನಾನು ಹಿಂದೂ ಎನ್ನುವ ಉಮೇದು ಹುಟ್ಟಿಸಿದೆ. ಅದಕ್ಕಾಗಿ ಬ್ಯಾನ್‌ ಮಾಡಬೇಕಾ? ಇದೆಲ್ಲವೂ ತಲೆ ಸರಿ ಇಲ್ಲದ ಸಿದ್ದರಾಮಯ್ಯ ಲೆಕ್ಕಾಚಾರ. ನಾನ್ಯಾವಾಗ ಸಚಿವ ಸ್ಥಾನ ಕೊಡಿ ಅಂತಾ ಕೇಳಿದೀªನಿ, ಅದು ಪಕ್ಕದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅದರಲ್ಲಿ ನಾನೂ ಏನೂ ಡಿಮ್ಯಾಂಡ್‌ ಮಾಡಿಲ್ಲ. ನನಗೆ ಕೀÉನ್‌ಚಿಟ್‌ ಸಿಕ್ಕಿದೆ. ದೊಡ್ಡ ಆರೋಪದಿಂದ ನಾನು ಮುಕ್ತನಾಗಿದ್ದೇನೆ. ಬಳಿಕ ನನಗೆ ಯಡಿಯೂರಪ್ಪ, ಬೊಮ್ಮಾಯಿ, ಕಟೀಲ್‌ ಕಾಲ್‌ ಮಾಡಿ ಅಭಿನಂದಿಸಿದರು. ಅಷ್ಟು ಸಾಕು ಎಂದರು.

ಖರ್ಗೆ ಅಧ್ಯಕ್ಷರಾದರೆ ಕಾಂಗ್ರೆಸ್‌ ಗೆಲ್ಲುತ್ತಾ?
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದರೆ ಕಾಂಗ್ರೆಸ್‌ ಗೆದ್ದು ಅಧಿಕಾರಕ್ಕೆ ಬರುತ್ತಾ? ಇಂತಹ ಭ್ರಮೆಯಿಂದ ಕಾಂಗ್ರೆಸ್‌ ಹೊರ ಬರಬೇಕು. ಅದೆಲ್ಲ ಕನಸಿನ ಮಾತು. ಯಾರು ಅಧ್ಯಕ್ಷರಾದರೂ ಕಾಂಗ್ರೆಸ್‌ ದೇಶದಲ್ಲಿ ಅಧಿಕಾರಕ್ಕೆ ಬರುವುದಿರಲಿ, ರಾಜ್ಯದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡರೆ ಸಾಕು. ಸೋನಿಯಾ, ರಾಹುಲ್‌ ಏನೇ ಸರ್ಕಸ್‌ ಮಾಡಿದರೂ ಅಧಿಕಾರಕ್ಕೆ ಬರಲ್ಲ. ಪಾದಯಾತ್ರೆ, ಭಾರತ್‌ ಜೋಡೋ ಏನೇ ಮಾಡಿದರೂ ಸಾಧ್ಯವಿಲ್ಲ. ಇವರು ಕಾಲಿಟ್ಟಲ್ಲೆಲ್ಲಾ ಪಕ್ಷ ಸೋಲುತ್ತಿದೆ. ಕರ್ನಾಟಕದಲ್ಲೂ ಸೋಲು ಕಟ್ಟಿಟ್ಟ ಬುತ್ತಿ. ಅಂದಿನ ಗಾಂಧಿ ಕುಟುಂಬವೇ ಬೇರೆ, ಇಂದು ಅಧಿಕಾರಕ್ಕಾಗಿ ರಸ್ತೆಗಳಲ್ಲಿ ಓಡಾಡುವ ಗಾಂಧಿ ಕುಟುಂಬವೇ ಬೇರೆ. ಪರಮೇಶ್ವರ ಸೋಲಿಸಿದ್ದು ಸಿದ್ದರಾಮಯ್ಯ ಅಲ್ಲವೇ? ಈಗಲಾದರೂ ಸಿದ್ದರಾಮಯ್ಯ ಚಾಮುಂಡಿ ಮೇಲೆ ಆಣೆ ಮಾಡಿ ಹೇಳಲಿ ನಾನು ಸೋಲಿಸಿಲ್ಲ ಅಂತಾ. ಪರಮೇಶ್ವರ ಸಿಎಂ ರೇಸ್‌ನಲ್ಲಿ ಇದ್ದ ಕಾರಣ ಸೋಲಿಸಿದ್ದು ಇವರೇ ಎಂದು ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ಕಲಬುರಗಿಯಲ್ಲಿ ಅ.30ರಂದು ಒಬಿಸಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ಮಾಡಲಾಗುತ್ತಿದೆ. ಸಮಾವೇಶದಲ್ಲಿ 5 ಲಕ್ಷ ಜನ ಭಾಗಿಯಾಗಲಿದ್ದಾರೆ. ಪ್ರತಿ ವಿಧಾನಸಭೆ ಕ್ಷೇತ್ರದಿಂದ ಪಕ್ಷದ ಮುಖಂಡರು ಭಾಗಿಯಾಗಲಿದ್ದಾರೆ. ಇದು ಕಾಂಗ್ರೆಸ್‌ಗೆ ಟಕ್ಕರ್‌ ಕೊಡುವುದಕ್ಕೆ ಅಲ್ಲ. ಬಿಜೆಪಿಯ ಆಶಯವಾಗಿದೆ.
– ಕೆ.ಎಸ್‌.ಈಶ್ವರಪ್ಪ ಮಾಜಿ ಸಚಿವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next