Advertisement

ಕಾಂಗ್ರೆಸ್ ಮುಳುಗುವ ಹಡಗು; ಪರಮೇಶ್ವರ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ: ಸಿಎಂ ಬೊಮ್ಮಾಯಿ

07:49 PM Mar 16, 2023 | Team Udayavani |

ಕೊರಟಗೆರೆ: ಕಾಂಗ್ರೆಸ್ ಪಕ್ಷವು ಮುಳುಗುವ ಹಡಗಿನ ಪಕ್ಷವಾಗಿದ್ದು ಕರ್ನಾಟಕ ರಾಜ್ಯದಲ್ಲೂ ಅದನ್ನು ಮುಳುಗಿಸಿ ಬಿಜೆಪಿ ಪಕ್ಷದ ಕೈ ಬಲಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಬಿಜೆಪಿ ವಿಜಯಸಂಕಲ್ಪ ರಥಯಾತ್ರೆಯಲ್ಲಿ ಪಾಲ್ಗೊಂಡು ಎಸ್.ಎಸ್.ಆರ್.ವೃತ್ತದಲ್ಲಿ ಮಾತನಾಡಿ, ದೇಶದಲ್ಲಿ ಬಿಜೆಪಿ ಪಕ್ಷದ ಕೇಂದ್ರದ ಆಡಳಿತ ಸುಭದ್ರವಾಗಿದೆ, ರಾಜ್ಯದಲ್ಲಿ ಬಿಜೆಪಿ ಪಕ್ಷ ಅಭಿವೃದ್ದಿಗಳ ಸಾಧನೆ ಮಾಡಿದೆ, ನೀವೆಲ್ಲರೂ ಬಿಜೆಪಿಯನ್ನು ಬೆಂಬಲಿಸಿ ಕಾಂಗ್ರೆಸ್ ನ್ನು ಸೊಲಿಸಿ, ಕಾಂಗ್ರೆಸ್ ಪಕ್ಷದವರು ಡಿ,ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯರವರ ಸಹಿಯ ಭರವಸೆಗಳನ್ನು ಗ್ಯಾರೆಂಟಿ ಕಾರ್ಡ್ ಗಳನ್ನು ಜನರಿಗೆ ನೀಡುತ್ತಿದ್ದು ಅದು ಕೇವಲ ವಿಸಿಟಿಂಗ್ ಕಾರ್ಡ್ ಆಗಿದೆ, ಕಾಂಗ್ರೆಸ್ ಪಕ್ಷವು ಜಾತಿ ಜಾತಿಗಳ ನಡುವೆ ಧರ್ಮಗಳ ನಡುವೆ ಒಡಕು ಉಂಟುಮಾಡುತ್ತಿದೆ, ಆದ್ದರಿಂದ ತಾವೆಲ್ಲರೂ ಬಿಜೆಪಿ ಪಕ್ಷಕ್ಕೆ ಮತ ನೀಡಿ ಮತ್ತೆ ಅಭಿವೃದ್ದಿ ಸರ್ಕಾರ ತನ್ನಿ ಎಂದರು.

ಡಾ.ಜಿ.ಪರಮೇಶ್ವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ
ಕೊರಟಗೆರೆ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ಇಲ್ಲಿ ಅಭ್ಯರ್ಥಿಯಾಗಿದ್ದಾರೆ, ಅವರು ವಿರೋಧ ಪಕ್ಷದವರಿಗಿಂತ ಅವರ ಪಕ್ಷದವರ ಜೊತೆಯೇ ಹೋರಾಡುತ್ತಿದ್ದಾರೆ, 2013 ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲಿಸಿದ ಹಾಗೆ ಎಲ್ಲಿ ಮತ್ತೆ ಬಂದು ಸೋಲಿಸುತ್ತಾರೋ ಎಂದು ಕಾದುಕುಳಿತ್ತಿದ್ದಾರೆ, ಬಿಜೆಪಿ ಪಕ್ಷದ ಕಾರ್ಯಕರ್ತರೆ ನೀವುಗಳು ಡಾ.ಜಿ.ಪರಮೇಶ್ವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಅವರನ್ನು ಕಾಂಗ್ರೆಸ್ ನವರೇ ಸೋಲಿಸುತ್ತಾರೆ, ನೀವು ಜನರ ಬಳಿ ಹೋಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಮತ ಕೇಳಿ ಗೆಲ್ಲಿಸಿಕೊಳ್ಳಿ, ಕೊರಟಗೆರೆ ಕ್ಷೇತ್ರಕ್ಕೂ ಸಹ ಬಿಜೆಪಿ ಸರ್ಕಾರ ಅಭಿವೃದ್ದಿಗೆ ಹಣ ನೀಡಿದೆ ಎಂದರು.

ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಬಿಜೆಪಿಗೆ ನೀವು ಮತ್ತೆ ಅಧಿಕಾರ ನೀಡಿದರೆ ಅದು ಪವರ್‌ಪುಲ್ ಡಬಲ್ ಇಂಜಿನ್ ಸರ್ಕಾರವಾಗುತ್ತದೆ, ಕಾಂಗ್ರೆಸ್ ಪಕ್ಷವು ಸುಳ್ಳಿನ ಕಂತೆಯ ಪಕ್ಷವಾಗಿದೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಿಂದ ಪ್ರಧಾನಿ ನರೇಂದ್ರಮೋದಿ ಕಳುಹಿಸುತ್ತಿದ್ದ ಅಕ್ಕಿಗೆ ಅವರ ಸೀಲ್ ಹಾಕಿ 7 ಕೆ.ಜಿ.ನೀಡುತ್ತಿದ್ದರು, ಆಗ 10 ಕೆ.ಜಿ.ಅಕ್ಕಿ ಕೊಡಲು ಕೈಲಾಗದವರು ಈಗ ಕೊಡುತ್ತೀನಿ ಅಂತ ಸುಳ್ಳು ಹೇಳುತ್ತಿದ್ದಾರೆ, ಡಿ,ಕೆ.ಶಿವಕುಮಾರ್ ಇಂಧನ ಸಚಿರಾಗಿದ್ದಾಗ ಎಕೆ ಉಚಿತ ವಿದ್ಯುತ್ ಜನರಿಗೆ ನೀಡಲಿಲ್ಲ, ಈಗ ಕುಟುಂಬಕ್ಕೆ200 ಯೂನಿಟ್ ಎಂದು ಸುಳ್ಳು ಹೇಳುತ್ತಿದ್ದಾರೆ, ಇಂತಹ ಸುಳ್ಳುಗಾರರ ಪಕ್ಷ ಅಧಿಕಾರಕ್ಕೆ ಬರಬೇಕಾ ಹೇಳಿ ಎಂದರು.

ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಸಚಿವ ಬಿ.ಸಿ.ನಾಗೇಶ್, ಸಂಸದ ಜಿ.ಎಸ್.ಬಸವರಾಜು, ಮಾಜಿ ಶಾಸಕ ಗಂಗಹನುಮಯ್ಯ, ಬಿಜೆಪಿ ಮಧುಗಿರಿ ಜಿಲ್ಲಾ ಅಧ್ಯಕ್ಷ ಬಿ.ಕೆ.ಮಂಜುನಾಥ್, ಮಂಡಲ ಅಧ್ಯಕ್ಷ ಪವನ್‌ಕುಮಾರ್, ಸಂಚಾಲಕ ಪಾವಗಡ ರವಿಕುಮಾರ್, ಮುಖಂಡರುಗಳಾದ ಡಾ.ಲಕ್ಷ್ಮ್ಮೀಕಾಂತ್, ಅನಿಲ್‌ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next