Advertisement

ಕಾಂಗ್ರೆಸ್‌ನದ್ದು ಪರಿವಾರವಾದ, ನಮ್ಮದು ರಾಷ್ಟ್ರವಾದ: ನಳಿನ್ ಕುಮಾರ್ ಕಟೀಲ್

10:52 PM Sep 12, 2022 | Team Udayavani |

ಮೈಸೂರು: ಕಾಂಗ್ರೆಸ್‌ನದ್ದು ಪರಿವಾರವಾದ, ನಮ್ಮದು ರಾಷ್ಟ್ರವಾದ. ಹೀಗಾಗಿ ಪರಿವಾರವಾದಕ್ಕೆ ತಿಲಾಂಜಲಿ ಇಟ್ಟು, ಪರಮವೈಭವ ಸ್ಥಿತಿಗೆ ತಾಯಿ ಭಾರತಾಂಬೆಯನ್ನು ತೆಗೆದುಕೊಂಡು ಹೋಗುವುದೇ ನಮ್ಮ ಗುರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ತಿಳಿಸಿದರು.

Advertisement

ಬಿಜೆಪಿ ರಾಜ್ಯ ಅಲ್ಪಸಂಖ್ಯಾಕ ಮೋರ್ಚಾದಿಂದ ನಗರದ ಖಾಸಗಿ ಹೊಟೇಲ್‌ನಲ್ಲಿ ಹಮ್ಮಿಕೊಂಡಿರುವ 2 ದಿನಗಳ ಪ್ರಶಿಕ್ಷಣ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ನಮ್ಮ ಪರಿಕಲ್ಪನೆ. ಸ್ವಾತಂತ್ಯದ ಬಳಿಕ ಭಾರತ ಹೇಗಿರಬೇಕು ಎಂಬ ಪರಿಕಲ್ಪನೆಯನ್ನು ಗಾಂಧೀಜಿ ಕೊಟ್ಟಿದ್ದರು. ಸುದೀರ್ಘ‌ ಅವಧಿಗೆ ಕಾಂಗ್ರೆಸ್‌ ಆಳಿದರೆ ಮನೆ ಮನೆಗಳಲ್ಲಿ ರಾವಣರು ನಿರ್ಮಾಣವಾಗುತ್ತಾರೆ ಎನ್ನುವುದು ಗಾಂಧೀಜಿಗೆ ಗೊತ್ತಿತ್ತು. ಹೀಗಾಗಿ ರಾಮರ ಅವಶ್ಯವಿದೆ ಎಂದು ಬಯಸಿದ್ದರು. ಆದ್ದರಿಂದ ರಾಜ್ಯದ ಪರಿಕಲ್ಪನೆ ಕೊಟ್ಟರು ಎಂದರು.

ಜನಸಂಘ ಪ್ರಾರಂಭವಾದಾಗ ಯಾವ ವಿಚಾರಧಾರೆ ಸಿದ್ಧಾಂತ ಇದ್ದವೋ ಈಗಲೂ ಇವೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಅಧಿಕಾರ ಹಿಡಿದ ಮೇಲೂ ಸಿದ್ಧಾಂತದಲ್ಲಿ ರಾಜಿಯಾಗಿಲ್ಲ. ರಾಜಕಾರಣದ ಸುದೀರ್ಘ‌ ಪಯಣದಲ್ಲಿ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳದ ಏಕೈಕ ಪಕ್ಷವಿದ್ದರೆ ಬಿಜೆಪಿ. ಸಚ್ಚಾರಿತ್ರ್ಯವಂತ ರಾಜಕಾರಣ ಸೃಷ್ಟಿ ನಮ್ಮ ಗುರಿ ಎಂದು ಹೇಳಿದರು.

ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸಯ್ಯದ್‌ ಸಲಾಂ, ಸಂಸದ ಪ್ರತಾಪ ಸಿಂಹ, ವಿಧಾನಪರಿಷತ್‌ ಸದಸ್ಯ ರವಿಕುಮಾರ್‌ ಸಹಿತ ಪ್ರಮುಖರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next