Advertisement

“ಅಂಬೇಡ್ಕರ್‌ಗೆ ಕಾಂಗ್ರೆಸ್‌ ಮಾಡಿದ ಅವಮಾನ ತಿಳಿಸಿ’

07:55 AM Oct 04, 2017 | Team Udayavani |

ಬೆಂಗಳೂರು: ಅಂಬೇಡ್ಕರ್‌ಗೆ ಅವಮಾನ ಮಾಡಿದ, ಬಾಬು ಜಗಜೀವನರಾಂ ಅವರನ್ನು ಪ್ರಧಾನಿಯಾಗಿ ಮಾಡಲು ಒಪ್ಪದ ಮತ್ತು ದಲಿತ ಮಹಿಳೆಯೊಬ್ಬ ರನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಮಾಡದ ಕಾಂಗ್ರೆಸ್‌ ಬಗ್ಗೆ ದಲಿತ ಸಮುದಾಯಕ್ಕೆ ತಿಳಿಸಬೇಕು. ಆ ಪಕ್ಷದ ದಲಿತ ವೋಟ್‌ ಬ್ಯಾಂಕ್‌ ರಾಜಕಾರಣದ ವಿರುದಟಛಿ ಜನಜಾಗೃತಿ ಮೂಡಿಸ
ಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸೂಚಿಸಿದ್ದಾರೆ.

Advertisement

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದರು. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿ, ಅವರ ಅಂತ್ಯ
ಸಂಸ್ಕಾರವನ್ನು ದೆಹಲಿಯಲ್ಲಿ ನಡೆಸಲು ಅವಕಾಶ ನೀಡದೆ ಕಾಂಗ್ರೆಸ್‌ ಅವರಿಗೆ ಅವಮಾನ ಮಾಡಿದೆ. ಬಾಬು ಜಗಜೀವನ್‌ರಾಮ್‌ ಅವರನ್ನು ಪ್ರಧಾನಿ ಮಾಡಲು ಅಟಲ್‌ಬಿಹಾರಿ ವಾಜಪೇಯಿ ಪ್ರಯತ್ನಿಸಿದಾಗ ಅದಕ್ಕೂ ಕಾಂಗ್ರೆಸ್‌ ಕಲ್ಲು ಹಾಕಿತ್ತು. ಅಲ್ಲದೆ, ರಾಜ್ಯದಲ್ಲಿ ದಲಿತ ಮಹಿಳೆಯೊಬ್ಬರು ಮುಖ್ಯಕಾರ್ಯದರ್ಶಿಯಾಗಲೂ ಅವಕಾಶ ನೀಡಲಿಲ್ಲ ಎಂದು ವಾಗ್ಧಾಳಿ ನಡೆಸಿದರು.
ಮೆಟ್ಟಿಲಾಗಿ ಮಾಡಿಕೊಂಡಿತ್ತು: ದಲಿತ ಸಮುದಾಯದ ವರನ್ನು ಕಾಂಗ್ರೆಸ್‌ ವೋಟ್‌ಬ್ಯಾಂಕ್‌ ಮಾಡಿಕೊಂಡು, ಅವರನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಮೇಲೆ ಹತ್ತಿದರು. ಹೊರತು ಸಮುದಾಯದ ಜನ ವಿದ್ಯಾವಂತರಾಗಲು, ಆರ್ಥಿಕವಾಗಿ ಸುಸ್ಥಿತಿ ಹೊಂದಲು ಅವಕಾಶ ನೀಡಲಿಲ್ಲ. ಕಾಂಗ್ರೆಸ್‌ನ ಈ ನಂಬಿಕೆ ದ್ರೋಹವನ್ನು ಜನರಿಗೆ ಮನವರಿಕೆ
ಮಾಡಬೇಕು ಎಂದರು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯಾಧ್ಯಕ್ಷ ಡಿ.ಎಸ್‌.ವೀರಯ್ಯ, ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಗೋವಿಂದ ಕಾರಜೋಳ, ಮಾಜಿ
ಸಚಿವ ಬಿ.ಸೋಮಶೇಖರ್‌, ಮಾಜಿ ಶಾಸಕರಾದ ಎ.ಆರ್‌.ಕೃಷ್ಣಮೂರ್ತಿ, ನೆ.ಲ.ನರೇಂದ್ರಬಾಬು, ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಮ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next