Advertisement

ಕಾಂಗ್ರೆಸ್‌ ಶಾಸಕರಿಲ್ಲದೆ ಇಪ್ಪತ್ತು ವರ್ಷಗಳಿಂದ  ಕ್ಷೇತ್ರ ಬಡವಾಗಿದೆ

08:00 AM Apr 29, 2018 | Team Udayavani |

ಸೋಮವಾರಪೇಟೆ: ಕಾಂಗ್ರೆಸ್‌ ಶಾಸಕರಿಲ್ಲದೆ ಇಪ್ಪತ್ತು ವರ್ಷಗಳಿಂದ  ಕ್ಷೇತ್ರ ಬಡವಾಗಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಹೇಳಿದರು.

Advertisement

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ವಲಯಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಇಡೀ ಕ್ಷೇತ್ರದಲ್ಲಿ ಅಭಿವೃದ್ಧಿ ನಡೆದಿದ್ದರೆ ಅದು ಕಾಂಗ್ರೆಸ್‌ ಸರ್ಕಾರದ ಕೊಡುಗೆ. ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‌ನಲ್ಲಿ ಬಹುತೇಕ ಗ್ರಾಮೀಣ ರಸ್ತೆಗಳ ಡಾಂಬರೀಕರಣ ಆಗಿದೆ. ಟೆಂಡರ್‌ ಆಗಿರುವ ಉಳಿದ ರಸ್ತೆಗಳ ಕಾಮಗಾರಿ ನಡೆಯಲಿದೆ. ಸರ್ಕಾರದ ಯೋಜನೆಗಳು ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿವೆ. ಜನರು ಕೂಡ ಕಾಂಗ್ರೆಸ್‌ ಪರವಾಗಿರುವುದರಿಂದ ಮುಂದೆಯೂ ರಾಜ್ಯದಲ್ಲಿ ಕಾಂಗ್ರೆಸ್‌ ಅಢಳಿತ ಬರಲಿದೆ  ಎಂದು ಹೇಳಿದರು.

ಇಲ್ಲಿನ ಶಾಸಕರು ಸುಳ್ಳು ಹೇಳಿಕೊಂಡೆ 20 ವರ್ಷಗಳನ್ನು ಕಳೆದಿದ್ದಾರೆ. ಅನುದಾನ ತನ್ನಿ ಎಂದರೆ ನಮ್ಮ ಬಿಜೆಪಿ ಸರ್ಕಾರವಿಲ್ಲ ಎಂದು ಹೇಳುತ್ತಾರೆ. ಚುನಾವಣೆಯ ನಂತರ ಶಾಸಕರನ್ನು ಯಾವ ಪಕ್ಷದವರು ಎಂದು ವಿಧಾನಸಭೆಯಲ್ಲಿ ಕೇಳುವುದಿಲ್ಲ. ಸರ್ಕಾರದ ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅನುದಾನ ತರಬೇಕು. ಇಂತಹ ಕನಿಷ್ಠ ಜವಾಬ್ದಾರಿಯಿಲ್ಲದ ಶಾಸಕರಿಂದ ಜಿಲ್ಲೆ ಅಭಿವೃದ್ಧಿಯಲ್ಲಿ ಬಹಳಷ್ಟು ಹಿನ್ನಡೆ ಕಂಡಿದೆ. ವಿರೋಧ ಪಕ್ಷದ ಶಾಸಕರು ಅವರ ಕೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ  ಕೆಲಸ ಮಾಡಿದ್ದಾರೆ ಎಂಬುದನ್ನು ಇತರ ಜಿಲ್ಲೆಗಳಿಗೆ ಗಮನಿಸಿದರೆ ಇಲ್ಲಿನ ಶಾಸಕರ ಸಾಧನೆ ತಿಳಿಯುತ್ತದೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಹೆ„ಕಮಾಂಡ್‌ ಆಯ್ಕೆ ಮಾಡಿದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಪಕ್ಷದ ಅಭ್ಯರ್ಥಿ ಚಂದ್ರಕಲಾ ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ   ಕೆ.ಎಂ.ಲೋಕೇಶ್‌ ಹೇಳಿದರು. ಪಕ್ಷ ನಮಗೆ ಎಲ್ಲವನ್ನು ಕೊಟ್ಟಿದೆ. ಬಹುತೇಕ ಕಾರ್ಯಕರ್ತರು ಅನೇಕ ಹುದ್ದೆಗಳನ್ನು ಪಡಕೊಂಡಿದ್ದಾರೆ. ಮುಂದೆಯೂ ಕಾರ್ಯಕರ್ತರಿಗೆ ಪಕ್ಷದಲ್ಲಿ ಸ್ಥಾನಮಾನ ದೊರೆಯಲಿ. ಇನ್ನು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಚಂಗಪ್ಪ, ಚಲನಚಿತ್ರ ನಟ ಜೈಜಗದೀಶ್‌, ಮಡಿಕೇರಿ ಕ್ಷೇತ್ರ ಯುವ ಕಾಂಗ್ರೆಸ್‌ ಅಧ್ಯಕ್ಷ ಹಾನಗಲ್‌ ಮಿಥುನ್‌, ಪ್ರಮುಖರಾದ ವಿ.ಎ. ಲಾರೆನ್ಸ್‌, ಬಿ.ಬಿ. ಸತೀಶ್‌, ಶೀಲಾ ಡಿ’ಸೋಜ, ಕೆ.ಎ. ಆದಂ, ಮೀನಾ ಕುಮಾರಿ, ಟಿ.ಈ. ಸುರೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next