Advertisement

ಸಿದ್ದರಾಮಯ್ಯ ಕಾರ್ಯಕ್ರಮದಿಂದ ಕಾಂಗ್ರೆಸ್‌ಗೇ ಹಾನಿ: ಶೆಟ್ಟರ್‌

09:57 PM Aug 05, 2022 | Team Udayavani |

ಹುಬ್ಬಳ್ಳಿ: ಸಿದ್ದರಾಮಯ್ಯ “ಅಮೃತಮಹೋತ್ಸವ’ದಿಂದ ಹಾನಿಯಾಗುವುದು ಕಾಂಗ್ರೆಸ್‌ಗೇ ಹೊರತು ಬಿಜೆಪಿಗಲ್ಲ.

Advertisement

2023ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕವಾದ ಜನ್ಮದಿನ ಆಚರಣೆಯಿಂದ ಬಿಜೆಪಿ ಬೆಳವಣಿಗೆ, ಸಂಘಟನೆ, ವ್ಯವಸ್ಥೆಗೆ ಯಾವುದೇ ರೀತಿ ಧಕ್ಕೆಯಾಗುವುದಿಲ್ಲ.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಅವರು ರಾಹುಲ್‌ ಗಾಂಧಿ ಸೂಚನೆ ಮೇರೆಗೆ ಕೃತಕವಾಗಿ ಅಪ್ಪಿಕೊಂಡಿದ್ದಾರೆ ವಿನಃ ಮನಪೂರ್ವಕವಾಗಿ ಅಲ್ಲ. ತೋರಿಕೆಗಾಗಿ ನಾವೆಲ್ಲ ಒಂದಾಗಿದ್ದೇವೆ ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲಿನ ಆಂತರಿಕ ಕದನ ದೊಡ್ಡಮಟ್ಟದಲ್ಲಿ ತಳಮಟ್ಟದಿಂದ ಆರಂಭಗೊಳ್ಳಲಿದೆ ಎಂದರು.

ಬಿಜೆಪಿ ಈ ಹಿಂದೆ ರೈತ ಸಮಾವೇಶ, ಸಂಕಲ್ಪ ಯಾತ್ರೆ ಸೇರಿದಂತೆ ಹಲವು ಸಮಾವೇಶ ಮಾಡಿದೆ. ಅಲ್ಲಿಯೂ ಲಕ್ಷಾಂತರ ಜನ ಸೇರಿದ್ದಾರೆ. ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಸಹಜವಾಗಿ ನಾಲ್ಕೈದು ಲಕ್ಷ ಜನ ಸೇರುತ್ತಾರೆ. ಸಿದ್ದು ಕಾರ್ಯಕ್ರಮಕ್ಕೆ ಸಾಕಷ್ಟು ಪ್ರಯತ್ನಿಸಿ, ಹೆಚ್ಚಿನ ಹಣ ಖರ್ಚು ಮಾಡಿ ಜನ ಸೇರಿಸಿದ್ದಾರೆ.

Advertisement

ಮತೀಯ ಗಲಭೆ ಸೃಷ್ಟಿಸುತ್ತಿರುವ ಎಸ್‌ಡಿಪಿಐ-ಪಿಎಫ್‌ಐ ಸಂಘಟನೆಗಳನ್ನು ರಾಷ್ಟ್ರಾದ್ಯಂತ ನಿಷೇಧಿಸುವ ಬಗ್ಗೆ ಕೇಂದ್ರ ಸರಕಾರದಿಂದ ಚಿಂತನೆ ನಡೆದಿದೆ. ಇದು ಯಾವುದೇ ಹಂತದಲ್ಲೂ ಜಾರಿಗೊಳ್ಳಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next