Advertisement

ಕಷ್ಟಕ್ಕೆ ಸಿಲುಕಿದ ಮಹಿಳೆಯರಿಗೆ ಕಾಂಗ್ರೆಸ್‌ ಗ್ಯಾರಂಟಿಯಿಂದ ಅನುಕೂಲ: ಮಮತಾ ಗಟ್ಟಿ

02:51 PM May 08, 2023 | Team Udayavani |

ಮಹಾನಗರ; ರಾಜ್ಯ, ದೇಶದಲ್ಲಿ ವ್ಯಾಪಕವಾಗಿ ಬೆಲೆ ಏರಿಕೆಯಾಗಿದೆ, ಗೃಹಿಣಿಯರಿಗೆ ಮನೆ ನಡೆಸುವುದೇ ಕಷ್ಟವಾಗಿರುವಾಗ ಕಾಂಗ್ರೆಸ್‌ ಸರಕಾರ ಆಡಳಿತಕ್ಕೆ ಬಂದರೆ ಅದರ ಗ್ಯಾರಂಟಿ ಯೋಜನೆಗಳಿಂದ ನೆರವಾಗಲಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಮಮತಾ ಡಿ.ಎಸ್‌ ಗಟ್ಟಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಎಂಟೂ ಕಾಂಗ್ರೆಸ್‌ ಅಭ್ಯರ್ಥಿಗಳು ಸಮರ್ಥರು, ಭ್ರಷ್ಟಾಚಾರ ರಹಿತರು. ಅವರು ಗೆದ್ದಲ್ಲಿ ಅಭಿವೃದ್ಧಿಯ ಜೊತೆಜೊತೆಗೆ ಜಿಲ್ಲೆಯಲ್ಲಿ ಕೋಮುಸಾಮರಸ್ಯದಿಂದ ಜನರ ಬದುಕು ಸುಗಮವಾಗಲಿದೆ ಎಂದರು.

ಮರಳುದಂಧೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ, ಇದರಲ್ಲಿ ಶಾಸಕರುಗಳೇ ಪಾಲುದಾರರೂ ಆಗಿದ್ದಾರೆ, ಅನೇಕ ಕಾಮಗಾರಿಗಳನ್ನು ತಮ್ಮ ಆಪ್ತರಿಗೆ ನೀಡಿದ್ದಾರೆ, ಶೇ.40 ಕಮಿಷನ್‌ ಎನ್ನುವುದು ಎಲ್ಲಾ ಕಡೆಗಳಲ್ಲಿ ಜೋರಾಗಿ ನಡೆಯುತ್ತಿದೆ, ಹೀಗಿರುವಾಗ ಜನಸಾಮಾನ್ಯರು ಬದುಕುವುದು ಹೇಗೆ? ಇದಕ್ಕಾಗಿ ಕಾಂಗ್ರೆಸ್‌ ಆಡಳಿತವನ್ನೇ ಜನರು ಮತ್ತೆ ಆಯ್ಕೆ ಮಾಡಲಿದ್ದಾರೆ ಎಂದರು.

ಮಂಗಳೂರು ನಗರ ದಕ್ಷಿಣದ ಅಭ್ಯರ್ಥಿ ಜೆ.ಆರ್‌.ಲೋಬೋ ಅವರು ಸಮರ್ಥರು, ಹಿರಿಯರು, ಶಾಸಕರಾಗಿದ್ದು ಅನುಭವಹೊಂದಿದವರು, ಅನೇಕ ಯೋಜನೆಗಳನ್ನು ಅನುದಾನಗಳನ್ನು ತಂದು ಅನುಷ್ಠಾನ ಮಾಡಿದವರು, ಮಂಗಳೂರು ನಗರ ಯಾವ ರೀತಿ ಅಭಿವೃದ್ಧಿಯಾಗಬೇಕು ಎಂಬ ಸೂಕ್ಷ್ಮ ಪರಿಕಲ್ಪನೆಯುಳ್ಳವರು, ಅಂತಹವರು ಗೆಲ್ಲಬೇಕಾಗಿದೆ ಎಂದ‌ರು.

ಊರಿಗೆ ಸಂಸ್ಕೃತಿಯ ಪಾಠ ಹೇಳುವ ಬಿಜೆಪಿಯ 20ರಷ್ಟು ಅಭ್ಯರ್ಥಿಗಳು ಮಾನಹಾನಿಕರ ಫೂಟೊ, ವಿಡಿಯೋ ಬಿಡುಗಡೆ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಅಂತಹವರಿಗೆ ಮತ ಹಾಕಬಾರದು ಎಂದು ಮಮತಾ ಡಿ.ಎಸ್‌ ಗಟ್ಟಿ ಹೇಳಿದರು. ಯಾವ ಮುಖವಿಟ್ಟು ಅಂತಹವರು ಮತ ಕೇಳುತ್ತಾರೆ, ಕಾಂಗ್ರೆಸ್‌ನ ಯಾವುದೇ ಅಭ್ಯರ್ಥಿಯೂ ಕೂಡಾ ಅಂತಹ ಕೆಲಸ ಮಾಡಿಲ್ಲ ಎಂದು ನುಡಿದರು.

Advertisement

ಕಾಂಗ್ರೆಸ್‌ ಬಂದರೆ ಎಲ್ಲವೂ ಹಾಳಾಗುತ್ತದೆ ಎಂಬ ರೀತಿಯಲ್ಲಿ ಬಿಜೆಪಿಯವರು ಮನೆ ಮನೆಗೆ ಹೋಗಿ ಅಪಪ್ರಚಾರ ಮಾಡುತ್ತಿದ್ದಾರೆ, ಆದರೆ ಕಾಂಗ್ರೆಸ್‌ನಿಂದ ಜನರಿಗೆ ಒಳ್ಳೆಯದೇ ಆಗಲಿದೆ, ಇಂತಹ ಅಪಪ್ರಚಾರಕ್ಕೆ ಜನರು ಗಮನ ಕೊಡದೆ ಕಾಂಗ್ರೆಸ್‌ ಅನ್ನು ಆರಿಸಬೇಕಾಗಿದೆ ಎಂದರು. ಕಾಂಗ್ರೆಸ್‌ ನಾಯಕಿಯರಾದ ಅಪ್ಪಿ, ಶಾಂತಲಾ ಗಟ್ಟಿ, ಜೆಸಿಂತಾ ಆಲ್ಪ್ರೇಡ್, ಚಂದ್ರಕಲಾ ಜೋಗಿ ಹಾಜರಿದ್ದರು.

ಕಾಂಗ್ರೆಸ್‌ ಗ್ಯಾರಂಟಿಯಲ್ಲಿ ಮಹಿಳೆಗೆ ಆದ್ಯತೆ
ಕಾಂಗ್ರೆಸ್‌ ಈಗಾಗಲೇ ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರನ್ನೇ ಮುಖ್ಯವಾಗಿ ಪರಿಗಣಿಸಲಾಗಿದೆ, ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯ ಮಹಿಳೆಗೆ ಮಾಸಿಕ 2000 ರೂ, ಗೃಹಜ್ಯೋತಿಯಲ್ಲಿ 200 ಯುನಿಟ್‌ ಉಚಿತ ವಿದ್ಯುತ್‌, ಮೊನ್ನೆ ರಾಹುಲ್‌ ಗಾಂಧಿಯವರು ಮಂಗಳೂರಿಗೆ ಬಂದಾಗ ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಯೋಜನೆಯನ್ನೂ ಘೋಷಿಸುವ ಮೂಲಕ ದುಡಿಯುವ ಮಹಿಳೆಯರ ನೆರವಿಗೆ ಬರಲು ಮುಂದಾಗಿದ್ದಾರೆ. ‌

ಜನರು ಹಿಂದಿನ ಕಾಂಗ್ರೆಸ್‌ ಸರಕಾರ ಇದ್ದಾಗ ಬದುಕು ಯಾವ ರೀತಿ ಇತ್ತು, ಈಗ ಯಾವ ರೀತಿ ಇದೆ ಎನ್ನುವುದನ್ನು ಹೋಲಿಸಿ ನೋಡಿ ಯಾವ ಆಡಳಿತ ಬೇಕೆನ್ನುವುದನ್ನು ತೀರ್ಮಾನಿಸಲಿ ಎಂದೂ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next