ತೀರ್ಥಹಳ್ಳಿ : ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಾರೆ. ಆದರೆ ಎಷ್ಟೋ ಜನರಿಗೆ ಯೋಜನೆಗಳು ತಲುಪಿಲ್ಲ. ಕೇಳಿದರೆ ಟೆಕ್ನಿಕಲ್ ಸಮಸ್ಯೆ ಇದೆ ಎಂದು ಹೇಳುತ್ತಾರೆ. ಟೆಕ್ನಿಕಲ್ ಸಮಸ್ಯೆ ಏನೆಂದರೆ ಹಣ ಇಲ್ಲ ಖಜಾನೆ ಖಾಲಿಯಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 16 ತಿಂಗಳಾದರೂ 16 ಪೈಸೆ ಕೂಡ ಅಭಿವೃದ್ಧಿಗಾಗಿ ಬಂದಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಸೋಮವಾರ ಪಟ್ಟಣದ ವಿದ್ಯಾಧಿರಾಜ ಸಭಾಭವನದಲ್ಲಿ ಬಿಜೆಪಿ ವತಿಯಿಂದ ನಡೆದ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿ
ಇವತ್ತು ರಾಜ್ಯದಲ್ಲಿ ಅತಿವೃಷ್ಟಿ ಆಗಿದೆ, ಪ್ರವಾಹ ಆಗಿದೆ ಆದರೆ ಸರ್ಕಾರದ ಬಳಿ ಪರಿಹಾರ ಕೊಡಲು ಒಂದು ಪೈಸೆ ಇಲ್ಲ.ಮಲೆನಾಡಿನಲ್ಲಿ ಅಡಿಕೆ ಬೆಳೆ ಹಾಳಾಗಿ ಹೋಗಿದೆ. ಬೆಳೆಗಳು ನಷ್ಟವಾಗಿವೆ. ಇದರ ಬಗ್ಗೆ ಅಂಕಿ ಸಂಖ್ಯೆಯನ್ನು ತಾಲೂಕು ಕಚೇರಿಯಲ್ಲಿ ಕೇಳಿದರೆ ಅಪ್ಲೋಡ್ ಮಾಡಿಲ್ಲ ಎಂದು ಹೇಳುತ್ತಾರೆ. ಯಾವ ಜಮೀನಿಗೂ ಪರಿಹಾರ ಕೊಡಲು ಸಾಧ್ಯವಿಲ್ಲದ ಪರಿಸ್ಥಿತಿಗೆ ಇಂದಿನ ಸರ್ಕಾರ ಬಂದು ನಿಂತಿದೆ. ಎಂದರು.
ಮೊದಲು ಬಿಜೆಪಿ ಸರ್ಕಾರ ಇದ್ದಾಗ 5 ಲಕ್ಷ ಹಣ ಪರಿಹಾರ ಬರುತ್ತಿತ್ತು ಆದರೆ ಈಗ 1 ಲಕ್ಷ ಕೊಟ್ಟರೆ ಹೆಚ್ಚು. ಕಾಂಗ್ರೆಸ್ ಸರ್ಕಾರದ ಪೊಳ್ಳು ಹೇಳಿಕೆಯನ್ನು ತಿರಸ್ಕಾರ ಮಾಡಬೇಕಿದೆ. ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಲು ನಾವು ನಮ್ಮ ಬಲವನ್ನು ಹೆಚ್ಚು ಮಾಡಿಕೊಳ್ಳಬೇಕು. ಮುಡಾ ಹಗರಣದಲ್ಲಿ ರಾಜ್ಯಪಾಲರ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ರಾಜ್ಯಪಾಲರು ಸಿದ್ದರಾಮಯ್ಯನವರನ್ನು ಆರೋಪಿ ಎಂದು ಹೇಳಿಲ್ಲ. ಆದರೆ ತನಿಖೆ ನಡೆಸಲು ಅನುಮತಿ ಹೇಳಿದ್ದು ಅಷ್ಟೇ. ಯಾರಿಗೆ ಆದರೂ ನ್ಯಾಯ ಒಂದೇ ಎಂದರು.